More

    ‘ನಾನು 50ರ ಬಳಿಕ ಬದುಕಿರಲ್ಲ’ ಎಂದಿದ್ದ ಖ್ಯಾತ ನಟ; ಹಾಗೇ ಆಯ್ತು: ಈ ನಟನ ಕುಟುಂಬದ ಹಲವರ ಸಾವಿಗಿದೆ 2 ಸಾಮ್ಯತೆ!

    ಬೆಂಗಳೂರು: ಕೆಲವರಿಗೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿರುತ್ತೇನೋ ಎಂಬಂತಿರುತ್ತದೆ ಅವರ ವರ್ತನೆ. ಹಾಗೆ ತಾನು ಇಷ್ಟು ಸಮಯದ ಬಳಿಕ ಬದುಕಿರುವುದಿಲ್ಲ ಎಂದು ಹೇಳಿದ್ದ ಖ್ಯಾತನಟ ತಾನು ಹೇಳಿದ ಅವಧಿಗೆ ಮುನ್ನವೇ ಸಾವಿಗೀಡಾದ ಪ್ರಸಂಗವೊಂದು ಈಗ ಮುನ್ನೆಲೆಗೆ ಬಂದಿದೆ. ಅಂದಹಾಗೆ ಇಂಥದ್ದೊಂದು ಮಾತನ್ನು ಹೇಳಿ ಮರೆಯಾಗಿ ಹೋದ ಆ ನಟ ಬೇರಾರೂ ಅಲ್ಲ, ಖ್ಯಾತ ಬಾಲಿವುಡ್ ನಟ ಸಂಜೀವ್ ಕುಮಾರ್.

    ಹಲವಾರು ಜನಪ್ರಿಯ ಸಿನಿಮಾಗಳನ್ನು ನೀಡಿದ್ದ ಸಂಜೀವ್ ಕುಮಾರ್, ಬಹಳಷ್ಟು ಸಿನಿಮಾಗಳಲ್ಲಿ ತಮ್ಮ ವಯಸ್ಸಿಗೂ ಮೀರಿದ್ದ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದು, ಅದರ ಬಗ್ಗೆ ಕೇಳಿದ್ದ ಒಂದು ಪ್ರಶ್ನೆಗೆ ಉತ್ತರಿಸುವಾಗ ಅವರು ಹೀಗೆ ಹೇಳಿದ್ದರು ಎಂಬುದು ಅವರ ಜೀವನಚರಿತ್ರೆಯಲ್ಲಿ ಬಹಿರಂಗಗೊಂಡಿದೆ.

    ಆ್ಯನ್ ಆ್ಯಕ್ಟರ್ಸ್​ ಆ್ಯಕ್ಟರ್​: ದ ಅಥರೈಸ್ಡ್​ ಬಯಾಗ್ರಫಿ ಆಫ್ ಸಂಜೀವ್ ಕುಮಾರ್​ ಕೃತಿಯನ್ನು ರಚಿಸಿರುವ ಹನೀಫ್ ಜವೇರಿ, ಅದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನಟಿ ತಬಸ್ಸುಮ್ ಅವರು ಒಮ್ಮೆ ಸಂಜೀವ್​ಕುಮಾರ್ ಅವರಲ್ಲಿ ‘ನೀವು ಇಷ್ಟು ಯಂಗ್ ಇದ್ದರೂ ವಯಸ್ಸಾದವರ ಪಾತ್ರಗಳನ್ನೂ ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಳ್ಳುವುದೇಕೆ?’ ಎಂದು ಕೇಳಿದ್ದರಂತೆ.

    ‘ಯಾಕೆಂದರೆ ನಾನು ನಿಜವಾಗಿಯೂ ಅಷ್ಟು ವಯಸ್ಸಾಗುವವರೆಗೂ ಇರಲ್ಲ. ನಮ್ಮ ಕುಟುಂಬದಲ್ಲಿ ಹಲವರು ಐವತ್ತು ವರ್ಷಗಳ ಒಳಗೇ ಸಾವಿಗೀಡಾದರು. ನಾನು ಕೂಡ ಐವತ್ತರ ನಂತರ ಬದುಕಿರುವುದಿಲ್ಲ’ ಎಂದು ಸಂಜೀವ್ ಕುಮಾರ್ ಹೇಳಿಕೊಂಡಿದ್ದರು. ಅದೇ ರೀತಿ ಅವರು ತಮ್ಮ 47ನೇ ವಯಸ್ಸಿನಲ್ಲಿ ಅಂದರೆ 1985ರ ನ. 6ರಂದು ಹೃದಯಾಘಾತದಿಂದ ಸಾವಿಗೀಡಾದರು.

    ಅಂದಹಾಗೆ ಸಂಜೀವ್ ಕುಮಾರ್ ಅವರ ಅಜ್ಜ ಶಿವಲಾಲ್ ಜರಿವಾಲಾ, ತಂದೆ ಜೇತಲಾಲ್ ಜರಿವಾಲಾ, ಸಹೋದರ ಕಿಶೋರ್ ಜರಿವಾಲಾ, ತಮ್ಮ ನಿಕುಲ್ ಜರಿವಾಲಾ ಎಲ್ಲರೂ ಐವತ್ತರ ಒಳಗೇ ಸಾವಿಗೀಡಾಗಿದ್ದರು. ಇನ್ನೂ ಒಂದು ವಿಶೇಷ ಎಂದರೆ ಈ ಎಲ್ಲರ ಸಾವಿಗಿದ್ದ ಇನ್ನೊಂದು ಸಾಮ್ಯತೆ ಎಂದರೆ ಹೃದಯಾಘಾತ ಎಂಬುದು ಕೂಡ ಜೀವನಚರಿತ್ರೆಯಲ್ಲಿ ಉಲ್ಲೇಖಗೊಂಡಿದೆ. –ಏಜೆನ್ಸೀಸ್

    ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

    ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts