More

  ಚಹಾದಲ್ಲಿ ಸಕ್ಕರೆ ಕಡಿಮೆ ಇದ್ದಿದ್ದಕ್ಕೆ ಹೋಟೆಲ್​ ಮಾಲೀಕನಿಗೇ ಚಾಕು ಚುಚ್ಚಿದ!

  ಕೊಚ್ಚಿ: ಇದು ಡಯಾಬಿಟಿಸ್ ಜಮಾನಾ. ಮಧುಮೇಹ ಇದ್ದವರು ಮಾತ್ರವಲ್ಲ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರದ್ದೂ ಕೂಡ ಒಂದೇ ಮಾತು, ಶುಗರ್​ ಲೆಸ್ ಅಥವಾ ಲೆಸ್ ಶುಗರ್. ಸಕ್ಕರೆ ಹಾಕದೆ ಕೊಡಿ, ಇಲ್ಲವೇ ಸಕ್ಕರೆ ಕಡಿಮೆ ಹಾಕಿ ಎನ್ನುವ ಈ ಕಾಲದಲ್ಲಿ ಇಲ್ಲೊಬ್ಬ ಗ್ರಾಹಕ ಚಹಾಗೆ ಹಾಕಿದ ಸಕ್ಕರೆ ಕಡಿಮೆಯಾಯ್ತು ಎಂಬ ಕಾರಣಕ್ಕೆ ಹೋಟೆಲ್​ ಮಾಲೀಕನಿಗೇ ಚಾಕು ಚುಚ್ಚಿದ್ದಾನೆ.

  ಕೇರಳದ ಮಲ್ಲಪ್ಪುರಂ ಎಂಬಲ್ಲಿನ ತನೂರ್ ಬಳಿ ಚಿಕ್ಕ ಹೋಟೆಲ್​ನಲ್ಲಿ ಈ ಘಟನೆ ನಡೆದಿದೆ. ಸುಬೇರ್ ಎಂಬಾತ ಮಂಗಳವಾರ ಬೆಳಗ್ಗೆ ಚಹಾ ಕುಡಿಯಲೆಂದು ಇಲ್ಲಿನ ಹೋಟೆಲೊಂದಕ್ಕೆ ತೆರಳಿದ್ದಾನೆ. ಆಗ ತನಗೆ ಕೊಟ್ಟ ಚಹಾದಲ್ಲಿ ಸಕ್ಕರೆ ಕಡಿಮೆ ಇದೆ ಎಂಬ ಕಾರಣಕ್ಕೆ ಸುಬೇರ್ ಮತ್ತು ಹೋಟೆಲ್ ಮಾಲೀಕ ಮನಾಫ್​ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತೆರಳಿ ಕೋಪೋದ್ರಿಕ್ತನಾದ ಸುಬೇರ್​ ಹೋಟೆಲ್ ಮಾಲಿಕನಿಗೇ ಚಾಕು ಚುಚ್ಚಿದ್ದಾನೆ.

  ಗಂಭೀರ ಗಾಯಗೊಂಡ ಮನಾಫ್​​ನನ್ನು ಆರಂಭದಲ್ಲಿ ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಬಳಿಕ ಕೊಝಿಕೋಡ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಆರೋಪಿ ಸುಬೇರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

  ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts