More

    ಕಾಂಗ್ರೆಸ್​ ತೊರೆಯುತ್ತಿಲ್ಲ, ನಿರ್ಲಕ್ಷ್ಯಕ್ಕೆ ಬೇಸರವಿದೆ: ಬಿಜೆಪಿ ಸೇರ್ಪಡೆ ಕುರಿತು ಕಾಂಗ್ರೆಸ್​ ನಾಯಕ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

    ಕೋಲಾರ: ನಾನು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗುವುದಿಲ್ಲ, ಕೋಲಾರದಲ್ಲಿ 30 ವರ್ಷ ನನ್ನನ್ನು ಬೆಳೆಸಿದ ಮುಖಂಡರು,ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೆ.ಎಚ್​. ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

    ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆ ಕೋಲಾರದಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನು ಸೋತ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ.ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ನಾವಿರಬೇಕಾ ಅಥವಾ ಕೆ.ಎಚ್.ಮುನಿಯಪ್ಪ ಇರಬೇಕಾ ಅಂತಾ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಕುನಿ ಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ ಅವರಿಗೆ ಮುಂದೆ ಉತ್ತರ ಸಿಗಲಿದೆ ಎಂದು ಕಿಡಿಕಾರಿದ್ದಾರೆ.

    ಜಿಲ್ಲೆಯ ಎಲ್ಲಾ ಶಾಸಕರಿಗೆ ಮಾಟ- ಮಂತ್ರ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಯಾರೂ ಮಂತ್ರಿ ಆಗಬಾರದು ಎಂಬ ನಿಟ್ಟಿನಲ್ಲಿ ರಮೇಶ್ ಕುಮಾರ್ ಶಕುನಿ ಪಾತ್ರವಹಿಸಿದ್ದಾರೆ. ಪಾಂಡವರ ವನವಾಸ ಮುಗಿದಿದೆ, ಯುದ್ಧ ಆರಂಭವಾಗಲಿದೆ‌ ಶಕುನಿ,ದುರ್ಯೋಧನ, ಎಲ್ಲರೂ ಆತುರದಲ್ಲಿದ್ದಾರೆ ಎಂದು ತಮ್ಮದೇ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಏಕಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ ಗೆ ಮುಂದೆ ಜನ್ರು ಉತ್ತರ ಕೊಡುತ್ತಾರೆ.ಅವರ ಮಾತಿಗೆ ಎಲ್ಲರೂ ಮುರ್ಖರಾಗಿದ್ದಾರೆ.ಯುದ್ಧದಲ್ಲಿ ಕೃಷ್ಣ ನ ಸಹಕಾರದಿಂದ ಪಾಂಡವರು ಗೆಲ್ಲಲಿದ್ದಾರೆ.

    ನಾನು ಯಾರ ಬಳಿ ಹೋಗಿ ಅಪಾಯಿಂಟ್​ಮೆಂಟ್​ ತೆಗೆದುಕೊಂಡಿಲ್ಲ, ಎಲ್ಲಾವೂ ಸಮಯ ನಿರ್ಣಯ ಮಾಡಲಿದೆ.‌ನಾವು‌ ಶಾಂತವಾಗಿರೋಣ.ವಿಪಕ್ಷ ನಾಯಕ ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ನೋಡೋಣ ಎಂದು ಹೇಳಿದರು.

    ನನ್ನ‌ ಬಿಟ್ಟು ಮಾಜಿ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವ ಬಗ್ಗೆ ಜನರಿಗೆ ತಿಳಿಸಬೇಕು, ಇವರನ್ನು ಸೇರಿಸಿಕೊಳ್ಳುವ ಬಗ್ಗೆ ನಮ್ಮ ವಿರೋಧ ಇದೆ.ಸುಧಾಕಾರ ಮತ್ತು ಕೊತ್ತೂರು ಮಂಜುನಾಥ್ ಅವರು ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಒಂದು ತಿಂಗಳು ಕಾಲಾವಕಾಶ ಕೊಡುವೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡುವೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts