More

    VIDEO: ಅಜ್ಜಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಮೊಮ್ಮಗಳು ಕ್ಷಣದಲ್ಲಿ ಶಾಕ್​…; ವೃದ್ಧೆ ಆಡಿದ ಒಂದೇ ಒಂದು ಮಾತಿಗೆ ಕಂಗಾಲು !

    ಪುಟ್ಟ ಮಕ್ಕಳಿಗೆ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುವುದೆಂದರೆ ತುಂಬ ಇಷ್ಟ. ಕೇಕ್​, ಅಲಂಕಾರ, ಅಪ್ಪ-ಅಮ್ಮ, ಫ್ರೆಂಡ್ಸ್​ ಕೊಡುವ ಉಡುಗೊರೆಗಳೆಲ್ಲ ಅವರಲ್ಲಿ ಅತ್ಯುತ್ಸಾಹ ಮೂಡಿಸುವುದು ತುಂಬ ಸಾಮಾನ್ಯ.

    ಹಾಗೇ ವಯಸ್ಸಾಗುತ್ತಿದ್ದಂತೆ ಜನ್ಮದಿನದ ಆಚರಣೆಗಳಲ್ಲಿ ಕ್ರಮೇಣ ಉತ್ಸಾಹ ಕಳೆದುಹೋಗುತ್ತದೆ. ಬೇರೆಯವರು ಶುಭಕೋರುತ್ತಿದ್ದರೂ ನಮ್ಮ ಮನಸು ವರ್ಷಗಳು ಉರುಳುತ್ತಿರುವ ಬಗ್ಗೆ ಯೋಚಿಸುತ್ತದೆ. ಅದಕ್ಕೆ ಈ 94ರ ಅಜ್ಜಿ ತಮ್ಮ ಹುಟ್ಟುಹಬ್ಬದಂದು ಆಡಿದ ಒಂದು ಮಾತು ಸಾಕ್ಷಿ.

    ವಾಷಿಂಗ್ಟನ್​ ಡಿಸಿಯಯಲ್ಲಿ ಅಜ್ಜಿಯೋರ್ವರ 94ನೇ ವರ್ಷದ ಹುಟ್ಟುಹಬ್ಬವನ್ನು ಅವರ ಮನೆಯವರೆಲ್ಲ ಸೇರಿ ಅದ್ದೂರಿಯಿಂದ ಆಚರಿಸುತ್ತಿದ್ದರು. ಅವರಿಗಾಗಿ ಗುಲಾಬಿ ಬಣ್ಣದ ಕೇಕ್​ ತಂದಿಟ್ಟಿದ್ದರು. 94 ಎಂಬ ಆಕಾರದಲ್ಲಿದ್ದ ಮೇಣದಬತ್ತಿಯನ್ನು ಹೊತ್ತಿಸಿಟ್ಟಿದ್ದರು. ಅದರ ಎದುರು ಅಜ್ಜಿ ಕುಳಿತುಕೊಂಡಿದ್ದರೆ, ಹಿಂದೆ ನಿಂತಿದ್ದ ಅವರ ಮೊಮ್ಮಗಳು ಪಾಲಿನ್ ಕಿಡ್ಡರ್ ಎಂಬುವರು ಅಜ್ಜಿಗಾಗಿ ಹ್ಯಾಪಿ ಬರ್ತ್ ಡೇ ಟೂ ಯೂ ಎಂಬ ಹಾಡನ್ನು ರಾಗವಾಗಿ ಹಾಡುತ್ತಿದ್ದರು. ಹಾಗೇ ಇದನ್ನು ಟಿಕ್​ ಟಾಕ್​ ಮಾಡುತ್ತಿದ್ದರು.

    ಆದರೆ ಅಜ್ಜಿ ಮಾತ್ರ ನಿರೀಕ್ಷೆಗೂ ಮೀರಿದ ಮಾತುಗಳನ್ನಾಡಿಬಿಟ್ಟರು. ಮೊಮ್ಮಗಳು ಹಾಡು ಮುಗಿಯುವವರೆಗೂ ಕೇಕ್​ ನೋಡುತ್ತ ಮೌನವಾಗಿ ಕುಳಿತಿದ್ದ ಅಜ್ಜಿ, ‘ಒಳ್ಳೆಯದು, ತುಂಬ ಧನ್ಯವಾದ. ಇದು ನನ್ನ ಕೊನೆಯ ಹುಟ್ಟುಹಬ್ಬ ಎಂದು ಭಾವಿಸುತ್ತೇನೆ’ ಎಂದು ಬಿಟ್ಟರು. ಅಜ್ಜಿಯಿಂದ ಈ ಮಾತನ್ನು ಟಿಕ್​ ಟಾಕ್ ಮಾಡುತ್ತಿದ್ದ ಮೊಮ್ಮಗಳು ನಿರೀಕ್ಷೆ ಮಾಡಿರಲಿಲ್ಲ.

    ಅವರೇನು ಹೇಳಿದರು ಎಂದು ಒಂದು ಸೆಕೆಂಡ್​ ಆದ ಮೇಲೆ ಅರ್ಥ ಮಾಡಿಕೊಂಡ ಪಾಲಿನ್ ಕಿಡ್ಡರ್​ ಶಾಕ್​ಗೆ ಒಳಗಾದರು. ಅಷ್ಟರಲ್ಲಿ ಮತ್ತೊಬ್ಬರು ಯಾರೋ, ಕೇಕ್​ ಕಟ್​ ಮಾಡುವಂತೆ ಅಜ್ಜಿಗೆ ತಿಳಿಸುತ್ತಾರೆ.
    ಪಾಲಿನ್​ ಈ ಟಿಕ್​ಟಾಕ್​ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಅದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

     

     

    ‘ನಾನು ನನ್ನ ಸ್ನೇಹಿತ ನರೇಂದ್ರ ಮೋದಿಯವರೊಂದಿಗೆ ಕರೊನಾ ವೈರಸ್​ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ’: ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು

    ಕರೊನಾ ವೈರಸ್​ಗೆ ಆಯುರ್ವೇದದಲ್ಲಿದ್ಯಾ ಪರಿಹಾರ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts