More

    ಪ್ರಧಾನಿ ಮೋದಿಯವರೊಂದಿಗೆ ಇಸ್ರೇಲ್​ ಪಿಎಂ ಬೆಂಜಮಿನ್​ ನೇತನ್ಯಾಹು ಗಂಭೀರ ಚರ್ಚೆ…!

    ಜೆರುಸೆಲಂ: ಜಾಗತಿಕ ಮಟ್ಟದ ಆರ್ಥಿಕ ಚಟುವಟಿಕೆಗಳ ಮೇಲೆ ಕೊರೊನಾ ವೈರಸ್​ ಬೀರುತ್ತಿರುವ ದುಷ್ಪರಿಣಾಮಗಳು ಮತ್ತು ಇದರಿಂದಾಗಿ ಇಸ್ರೇಲ್​ನ ಪೂರೈಕೆ ಮಾರ್ಗ(ಸಪ್ಲೈ ಲೈನ್​)ಗಳಿಗೆ ಉಂಟಾಗುತ್ತಿರುವ ತೊಂದರೆ ಬಗ್ಗೆ ನಾನು ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ತಿಳಿಸಿದ್ದಾರೆ.

    ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಪ್ರಾರಂಭವಾದ ಮಾರಣಾಂತಿಕ ಕರೊನಾ ವೈರಸ್ ಇಂದು ಸುಮಾರು 107 ದೇಶಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಪಿಸಿದೆ. ಕರೊನಾ ವೈರಸ್​ ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಇದರ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ.
    ಕರೊನಾ ವೈರಸ್​ ಭೀತಿಯಿಂದ ಜಾಗತಿಕ ಮಟ್ಟದಲ್ಲಿ ವ್ಯಾಪಾರ, ವಹಿವಾಟು ಕಡಿಮೆಯಾಗಿದೆ. ಷೇರುಪೇಟೆಯಂತೂ ದಿನೇದಿನೆ ಕುಸಿಯುತ್ತಿದೆ. ಅದರಲ್ಲೂ ದೇಶದಿಂದ ಮತ್ತೊಂದು ದೇಶಗಳ ನಡುವಿನ ವಹಿವಾಟು, ಆಮದು-ರಪ್ತುಗಳೂ ಕುಗ್ಗಿವೆ.

    ಬುಧವಾರ ಈ ಬಗ್ಗೆ ಮಾತನಾಡಿದ ಬೆಂಜಮಿನ್​ ನೇತನ್ಯಾಹು, ನಾನು ಕರೊನಾದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಸ್ನೇಹಿತರಾದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಚರ್ಚಿಸಿದ್ದೇನೆ. ನಾವು ವಿವಿಧ ದೇಶಗಳ ಪೂರೈಕೆ ಮಾರ್ಗಗಳನ್ನು ಸಾರ್ವಕಾಲಿಕವಾಗಿ ಅವಲಂಬಿಸಿದ್ದೇವೆ. ಈಗ ಕರೊನಾದಿಂದ ತೀವ್ರ ತೊಂದರೆಯಾಗುತ್ತಿದೆ. ಇದೊಂದು ಗಂಭೀರ ಸಮಸ್ಯೆ ಎಂದು ತಿಳಿಸಿದರು.

    ಜಗತ್ತಿನ ಹಲವು ದೇಶಗಳ ಆರ್ಥಿಕತೆಗೆ ಹೋಲಿಸಿದರೆ, ಇಸ್ರೇಲ್​ ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಲ್ಲಿ ಇದೆ. ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ. ಅಭಿವೃದ್ಧಿಯಾಗುತ್ತಿದೆ. ಮತ್ತು ಜಿಡಿಪಿ ಅನುಪಾತದ ಸಾಲವೂ ಉತ್ತಮವಾಗಿದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಅವರು ನಿರ್ದಿಷ್ಟವಾಗಿ ಯಾವ ವಿಷಯಗಳನ್ನು ಚರ್ಚೆ ಮಾಡಿದ್ದಾರೆ ಎಂಬುದನ್ನು ಇಸ್ರೇಲ್​ ಪ್ರಧಾನಿ ಕಚೇರಿ ತಿಳಿಸಿಲ್ಲ. ಆದರೆ ತಾವು ಮೋದಿಯವರೊಂದಿಗೆ ಮಾತನಾಡಿದ್ದಾಗಿ ಬುಧವಾರ ಇಸ್ರೇಲ್​ನ ಹಣಕಾಸು ಮಂತ್ರಿಯೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನೇತನ್ಯಾಹು ತಿಳಿಸಿದ್ದಾರೆ. (ಏಜೆನ್ಸೀಸ್)

    VIDEO: ಸ್ವಿಮ್ಮಿಂಗ್​ಪೂಲ್​ಗೆ ಇಳಿದ ಯುವಕ ನೋಡನೋಡುತ್ತಿದ್ದಂತೆ ಮೃತಪಟ್ಟ..ಸಿಸಿಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್ಲೆನ್ನಿಸುವ ಭಯಾನಕ ವಿಡಿಯೋ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts