More

    ತಕ್ಷಣ ಯುದ್ಧ ನಿಲ್ಲಿಸಿ: ಇಸ್ರೇಲ್​ಗೆ ಅಮೆರಿಕ ಎಚ್ಚರಿಕೆ, ಮಿತ್ರ ರಾಷ್ಟ್ರಗಳ ನಡುವೆ ಮೂಡಿತಾ ಬಿರುಕು?

    ವಾಷಿಂಗ್ಟನ್​: ಎಷ್ಟು ಸಾಧ್ಯವೋ ಅಷ್ಟು ಬೇಗ ಗಾಜಾ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ಯುನೈಟೆಡ್​ ಸ್ಟೇಟ್ಸ್​, ತನ್ನ ಮಿತ್ರ ರಾಷ್ಟ ಇಸ್ರೇಲ್ ಅನ್ನು ಆಗ್ರಹಿಸಿದೆ. ಗಾಜಾದಲ್ಲಿ ಅಮಾಯಕ ಜನರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಅಪರೂಪ ಎಂಬಂತೆ ಅಮೆರಿಕವೂ ಕೂಡ ಇಸ್ರೇಲ್ ಅನ್ನು ಟೀಕಿಸಿದೆ.

    ಅಕ್ಟೋಬರ್ 7ರ ದಾಳಿಯ ನಂತರ ಇಸ್ರೇಲ್ ಆರಂಭಿಸಿದ ಯುದ್ಧದ ಬಗ್ಗೆ ಇಸ್ರೇಲ್​ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ರಾಜಧಾನಿ ಟೆಲ್ ಅವಿವ್‌ನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಯುದ್ಧವನ್ನು ನಿಲ್ಲಿಸುವ ಪ್ರಸ್ತಾಪವನ್ನು ಮಾಡಿದ್ದಾರೆ. ಆದಷ್ಟು ಬೇಗ ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಗಾಜಾದಲ್ಲಿ ನಿರಂತರವಾಗಿ ನಾಗರಿಕ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್​ ವಿರುದ್ಧವೇ ಅಮೆರಿಕ ತಿರುಗಿಬಿದ್ದಿದೆ. ಆರಂಭದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್​ ಹಕ್ಕನ್ನು ಅಮೆರಿಕ ಬಲವಾಗಿ ಬೆಂಬಲಿಸಿತು. ಆದರೆ, ಪ್ಯಾಲೇಸ್ತೀನಿಯನ್​ ಪ್ರದೇಶದಲ್ಲಿ ಹೆಚ್ಚುತ್ತಿರುವ ನಾಗರಿಕ ಸಾವು-ನೋವುಗಳು ಮಿತ್ರರಾಷ್ಟ್ರಗಳ ನಡುವಿನ ಬಿರುಕಿಗೆ ಕಾರಣವಾಗಿವೆ.

    ವಾಷಿಂಗ್ಟನ್ ಬಳಿಯ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಗಾಜಾದಲ್ಲಿನ ನಾಗರಿಕರನ್ನು ರಕ್ಷಿಸಲು ಇಸ್ರೇಲ್ ಹೆಚ್ಚಿನ ಕಾಳಜಿ ವಹಿಸಬೇಕೆಂದು ಒತ್ತಾಯಿಸಿದರು. ಭಯೋತ್ಪಾದಕ ಗುಂಪು ಹಮಾಸ್ ವಿರುದ್ಧ ಇಸ್ರೇಲ್ ತನ್ನ ಆಕ್ರಮಣವನ್ನು ತಗ್ಗಿಸಲು ಯುಎಸ್​ ಬಯಸಿದೆ. ಹಮಾಸ್ ಹಿಂದೆ ಬೀಳುವುದನ್ನು ನಿಲ್ಲಿಸಿ ಎಂದು ಹೇಳುತ್ತಿಲ್ಲ. ಆದರೆ, ಹೆಚ್ಚು ಜಾಗರೂಕರಾಗಿರಿ ಮತ್ತು ನಾಗರಿಕ ಜೀವಗಳನ್ನು ಉಳಿಸುವುದರ ಕಡೆ ಗಮನ ಹರಿಸಿ ಎಂದು ಇಸ್ರೇಲ್​ಗೆ ಬೈಡೆನ್​ ಸಲಹೆ ನೀಡಿದ್ದಾರೆ.

    ಇನ್ನೂ ನಿನ್ನೆ ವೆಸ್ಟ್ ಬ್ಯಾಂಕ್ ನಗರದ ಜೆನಿನ್‌ನಲ್ಲಿರುವ ಮಸೀದಿಯೊಂದರ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯ ವೇಳೆ ಯಹೂದಿ ಪ್ರಾರ್ಥನೆಗಳನ್ನು ಓದುತ್ತಿದ್ದ 12 ಪ್ಯಾಲೆಸ್ತೀನಿಯನ್ನರು ಹತರಾಗಿದ್ದಾರೆ. ಆದರೆ, ಈ ದಾಳಿ ಹತ್ತಾರು ಭಯೋತ್ಪಾದಕರನ್ನು ಸೆರೆಹಿಡಿಯಲು ಸಹಾಯ ಮಾಡಿತು ಎಂದು ಇಸ್ರೇಲ್​ ಸೇನೆ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್, ವೆಸ್ಟ್​ ಬ್ಯಾಂಕ್​ನಲ್ಲಿ ವಸಾಹತುಗಳನ್ನು ಹೆಚ್ಚು ವಿಸ್ತರಿಸಿದ್ದು, ಪ್ಯಾಲೇಸ್ತೀನಿಯನ್ ರಾಜ್ಯಕ್ಕೆ ಕಡಿಮೆ ಪ್ರದೇಶವನ್ನು ಬಿಟ್ಟುಕೊಟ್ಟಿದೆ.

    ಜೆನಿನ್‌ನಲ್ಲಿ ಮಸೀದಿ ಮೇಲೆ ನಡೆದ ಕಾರ್ಯಾಚರಣೆಯನ್ನು “ಅಪಾಯಕಾರಿ ಉದ್ವಿಗ್ನತೆ” ಎಂದು ಪ್ಯಾಲೇಸ್ಸೀನಿಯನ್ ಸರ್ಕಾರ ಟೀಕಿಸಿದೆ. ಅಲ್ಲದೆ, ಇಸ್ರೇಲಿ ಪಡೆಗಳು ಮಸೀದಿಯನ್ನು ಅಪವಿತ್ರಗೊಳಿಸಿರುವುದು ಧಾರ್ಮಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

    ಕಾಡಾನೆ ದಾಳಿಯಿಂದ ಕುಟುಂಬವನ್ನು ರಕ್ಷಣೆ ಮಾಡಿದ ಚಿಪ್ಸ್​ ಮತ್ತು ಸ್ಯಾಂಡ್​ವಿಚ್​!

    ಸಂಸತ್ತಿನಲ್ಲಿ ಭದ್ರತಾ ಲೋಪ: ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವ ಅಮಿತ್​ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts