More

  ಕಾಡಾನೆ ದಾಳಿಯಿಂದ ಕುಟುಂಬವನ್ನು ರಕ್ಷಣೆ ಮಾಡಿದ ಚಿಪ್ಸ್​ ಮತ್ತು ಸ್ಯಾಂಡ್​ವಿಚ್​!

  ಕೊಲಂಬೋ: ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಆನೆಗಳಂತೂ ರಸ್ತೆಯನ್ನೇ ಅಡ್ಡಗಟ್ಟಿ ಬರುವ ವಾಹನಗಳನ್ನು ತಡೆದು ಕಬ್ಬು ಸೇರಿದಂತೆ ಇನ್ನಿತರ ಆಹಾರಗಳನ್ನು ದೋಚುವಂಥಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಿರುತ್ತೇವೆ. ಇದೇ ಸಂದರ್ಭದಲ್ಲಿ ಕೆಲವೊಮ್ಮೆ ಮನುಷ್ಯರ ಮೇಲೆಯೂ ಆನೆಗಳು ದಾಳಿ ಮಾಡುತ್ತವೆ.

  ಇದೀಗ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಆನೆಯೊಂದು ಮಿನಿ ವ್ಯಾನ್​ ಅನ್ನು ಅಡ್ಡಗಟ್ಟಿದ ರೀತಿ ಭಯಾನಕವಾಗಿದೆ. ಅಲ್ಲದೆ, ವ್ಯಾನ್​ ಮೇಲೆ ಆನೆ ನುಗ್ಗಿದ ರಭಸಕ್ಕೆ ವ್ಯಾನ್​ ಜಖಂಗೊಂಡಿದ್ದು, ಕಾರಿನ ಗಾಜು ಪುಡಿ ಪುಡಿಯಾಗಿದೆ. ಅದೃಷ್ಟವಶಾತ್​ ವ್ಯಾನ್​ನಲ್ಲಿದ್ದ ಕುಟುಂಬದ ಯಾವೊಬ್ಬ ಸದಸ್ಯರಿಗೂ ಯಾವುದೇ ತೊಂದರೆಯಾಗಿಲ್ಲ.

  ವಿಡಿಯೋದಲ್ಲಿ ಏನಿದೆ?
  ಅರಣ್ಯ ಪ್ರದೇಶದ ನಡುವಿನ ರಸ್ತೆಯಲ್ಲಿ ವ್ಯಾನ್​ ಚಲಾಯಿಸಿಕೊಂಡು ಹೋಗುವಾಗ ದಿಢೀರನೇ ದಟ್ಟ ಹಸಿರಿನ ಕಾಡಿನಿಂದ ವ್ಯಾನ್​ ಕಡೆ ಕಾಡಾನೆ ನುಗ್ಗುತ್ತದೆ. ವೇಗವಾಗಿ ವ್ಯಾನ್​ನ ಬಳಿ ಬಂದು, ಅದರೊಳಗೆ ತನ್ನ ಸೊಂಡಿಲನ್ನು ಬಿಟ್ಟು ಆಹಾರಕ್ಕಾಗಿ ತುಂಬಾ ಹುಡುಕಾಡುತ್ತದೆ. ಕೊನೆಗೆ ವ್ಯಾನ್​ ಒಳಗಿದ್ದ ಕುಟುಂಬ ಚಿಪ್ಸ್​ ಮತ್ತು ಸ್ಯಾಂಡ್​ವಿಚ್ ಅನ್ನು ಆನೆಗೆ ನೀಡಿ, ಅಲ್ಲಿಂದ ಪರಾರಿಯಾಗುತ್ತಾರೆ.

  ಘಟನೆ ನಡೆದಿದ್ದು ಎಲ್ಲಿ?
  ಈ ಘಟನೆ ಶ್ರೀಲಂಕಾದ ಯಲಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ವ್ಯಾನ್​ನಲ್ಲಿ ಕಸುನ್ ಬಸ್ನಾಯಕ್ ಅವರ ಕುಟುಂಬ ಬಾಡಿಗೆ ವ್ಯಾನ್​ನಲ್ಲಿ ಪ್ರಯಾಣ ಮಾಡುತ್ತಿತ್ತು. ಚಿಪ್ಸ್​ ಮತ್ತು ಸ್ಯಾಂಡ್​ವಿಚ್​ ಇಲ್ಲದಿದ್ದರೆ, ಏನೂ ಸಿಗದ ಹತಾಶೆಯಿಂದ ಕಾಡಾನೆ ವ್ಯಾನ್​ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿತ್ತು ಎಂದು ಕಸುನ್ ಬಸ್ನಾಯಕ್ ಹೇಳಿದ್ದಾರೆ. ವ್ಯಾನ್​ನತ್ತ ನುಗ್ಗಿದ ರಭಸಕ್ಕೆ ಗಾಜು ಪುಡಿ ಪುಡಿಯಾಗಿದೆ ಮತ್ತು ದಂತದಿಂದ ತಿವಿದಿರುವುದರಿಂದ ವ್ಯಾನ್​ಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

  ಕಸುನ್ ಬಸ್ನಾಯಕ್ ಕುಟುಂಬದ ಯಾರೊಬ್ಬರಿಗೂ ಯಾವುದೇ ಹಾನಿಯಾಗಿಲ್ಲ. ಅಕ್ಷರಶಃ ಚಿಪ್ಸ್​ ಮತ್ತು ಸ್ಯಾಂಡ್​ವಿಚ್​ ಬಸ್ನಾಯಕ್ ಕುಟುಂಬವನ್ನು ಕಾಪಾಡಿದೆ. ವಿಡಿಯೋದಲ್ಲಿ ಆನೆ ಬಂದ ರೀತಿ ಮತ್ತು ಅದರ ಗಾತ್ರವನ್ನು ನೋಡಿದರೆ ಮೈ ನಡುಗುತ್ತದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

  ಅನಿಮಲ್​ ಚಿತ್ರದಲ್ಲಿ ಪೂರ್ತಿ ಬೆತ್ತಲಾಗಿದ್ದಕ್ಕೆ ತೃಪ್ತಿಗೆ ಸಿಕ್ಕ ಸಂಭಾವನೆ ಇಷ್ಟೇನಾ? ರಶ್ಮಿಕಾ ಪಡೆದ ಹಣವೆಷ್ಟು?

  ಸಂಸತ್ತಿನಲ್ಲಿ ಭದ್ರತಾ ಲೋಪ: ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವ ಅಮಿತ್​ ಷಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts