More

    VIDEO: ಕಂಠಪೂರ್ತಿ ಕುಡಿದು ಈಜುಕೊಳಕ್ಕೆ ಇಳಿದ ಯುವಕ…ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ವಿಡಿಯೋ…

    ಹುಬ್ಬಳ್ಳಿ: ಈಜಲೆಂದು ಸ್ವಿಮ್ಮಿಂಗ್​ ಪೂಲ್​ಗೆ ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ವಿದ್ಯಾನಗರ ಬಳಿ ನಡೆದಿದೆ. ಸಿರಾಜ್ ಅಣ್ಣಿಗೇರಿ (24) ಮೃತ ಯುವಕ. ಈತ ಮುಳುಗುತ್ತಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನವಲಗುಂದದ ಸಿರಾಜ್ ಸ್ನೇಹಿತರೊಂದಿಗೆ ಈಜಾಡಲು ಸ್ವಿಮ್ಮಿಂಗ್​ ಪೂಲ್​ಗೆ ಆಗಮಿಸಿದ್ದ. ಈ ವೇಳೆ ತರಬೇತುದಾರ ಕೂಡ ಅಲ್ಲಿಯೇ ಇದ್ದ. ನೀರಿನಲ್ಲಿ ಇಳಿದಿದ್ದ ಸಿರಾಜ್​ಗೆ ಒಂದು ಹಂತದಲ್ಲಿ ಈಜಲಾಗದೆ ಚಡಪಡಿಸಿದ. ಆದರೆ ಅಲ್ಲಿದ ಟ್ರೇನರ್​ ಆಗಲೀ, ಉಳಿದವರಾಗಲೀ ಅಷ್ಟೊಂದು ಗಮನ ಕೊಡಲಿಲ್ಲ ಎನ್ನಲಾಗಿದೆ.

    ಬಳಿಕ ಉಳಿದ ಮೂರ್ನಾಲ್ಕು ಜನ ಹೋಗಿ ಸಿರಾಜ್​ನನ್ನು ನೀರಿನಿಂದ ಎಳೆದುಕೊಂಡು ಬಂದು ಈಜುಕೊಳದ ಕಟ್ಟೆಗೆ ತಂದು ತಲೆಕೆಳಗಾಗಿ ಮಾಡಿ, ನೀರು ಹೊರತೆಗೆದು, ಪ್ರಾಥಮಿಕ ಚಿಕಿತ್ಸೆ ಕೊಡಲು ಪ್ರಯತ್ನಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.

    ಸಿರಾಜ್ ಸೇರಿ ಮೂವರು ಸ್ನೇಹಿತರು ಕಂಠಪೂರ್ತಿಕ ಕುಡಿದು ಸಂಜೆ ಹೊತ್ತು ಸ್ವಿಮ್ಮಿಂಗ್​ಪೂಲ್​ಗೆ ತೆರಳಿದ್ದರು. ಆತ ಕುಡಿದಿದ್ದ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲೂ ಬೆಳಕಿಗೆ ಬಂದಿದೆ. (ದಿಗ್ವಿಜಯ ನ್ಯೂಸ್​)

    ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿದ ಕೂಡಲೇ ಟ್ವೀಟ್ ಮಾಡಿದ ರಾಜಸ್ಥಾನ ಡಿಸಿಎಂ ಸಚಿನ್​ ಪೈಲಟ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts