More

    ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿದ ಕೂಡಲೇ ಟ್ವೀಟ್ ಮಾಡಿದ ರಾಜಸ್ಥಾನ ಡಿಸಿಎಂ ಸಚಿನ್​ ಪೈಲಟ್​…

    ನವದೆಹಲಿ: ರಾಜಸ್ಥಾನ ಕಾಂಗ್ರೆಸ್​ ಸರ್ಕಾರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಮಧ್ಯೆ ಸಣ್ಣದೊಂದು ಭಿನ್ನಮತ ಹುಟ್ಟಿದ್ದು ಗುಟ್ಟಾಗೇನೂ ಉಳಿದಿಲ್ಲ.

    ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಸಚಿನ್​ ಪೈಲಟ್​ ಸ್ವಲ್ಪ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ವಜ್ರ ವ್ಯಾಪಾರಿ ರಾಜೀವ್ ಅರೋರಾ ಅವರನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರದಲ್ಲಿ ಪೈಲಟ್​ ವಿರೋಧ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.

    ಅದರ ಹೊರತಾಗಿ ಕೂಡ ಅಲ್ಲಿ ಕೆಲವೊಂದಿಷ್ಟು ಅಸಾಮಾಧಾನಗಳು ಬೂದಿಮುಚ್ಚಿದ ಕೆಂಡದಂತೆ ಇದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ ತೊರೆದಂತೆ ಮುಂದಿನ ದಿನಗಳಲ್ಲಿ ಸಚಿನ್​ ಪೈಲಟ್​ ಕೂಡ ಅದೇ ದಾರಿ ತುಳಿಯಲಿದ್ದಾರಾ? ಎಂಬ ಅನುಮಾನವೂ ಮೂಡಿದೆ.
    ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ ತೊರೆದು, ಬಿಜೆಪಿ ಸೇರಿದ ಬಗ್ಗೆ ಸಚಿನ್ ಪೈಲಟ್​ ಆಡಿದ ಮಾತುಗಳನ್ನು ನೋಡಿದರೆ, ಸದ್ಯಕ್ಕೇನೋ ರಾಜಸ್ಥಾನ ಸರ್ಕಾರ ಸೇಫ್​ ಅನ್ನಿಸುತ್ತದೆ.

    ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಲೆಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದು ದುರ್ದೈವ. ಅವರಿಗೇನೇ ಅಸಮಾಧಾನ, ಸಮಸ್ಯೆಗಳು ಇದ್ದರೂ ಅದನ್ನು ಪಕ್ಷದೊಳಗೇ ಇದ್ದುಕೊಂಡು, ಹಿರಿಯ ನಾಯಕರ ಸಹಭಾಗಿತ್ವದಲ್ಲಿ ಬಗೆಹರಿಸಿಕೊಳ್ಳಬೇಕಿತ್ತು ಎಂದು ಬುಧವಾರ ರಾತ್ರಿ ಟ್ವೀಟ್​ ಮಾಡಿದ್ದಾರೆ.

    ಮಾ.10ರಂದು ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ಗೆ ರಾಜೀನಾಮೆ ಪತ್ರವನ್ನು ನೀಡಿದ್ದರು. ನಿನ್ನೆ ಮಾ.11ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಮಾತನಾಡಿ, ನರೇಂದ್ರ ಮೋದಿಯವನ್ನು ಹೊಗಳಿದ್ದರು. ಹಾಗೇ ಕಾಂಗ್ರೆಸ್​ನಲ್ಲಿ ಯುವನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದರು.(ಏಜೆನ್ಸೀಸ್​)

    VIDEO|ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ರಾಷ್ಟ್ರದಲ್ಲಿ ಅಧಿಕ ಕೋಮು ಗಲಭೆ ನಡೆದಿವೆ: ಸಂಸದ ತೇಜಸ್ವಿ ಸೂರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts