ಸಿನಿಮಾ

ಮುಂದಿನ ಐಪಿಎಲ್​ನಲ್ಲಿ ಧೋನಿ ಆಡುವುದಿಲ್ಲ? ನಿವೃತ್ತಿ ಬಗ್ಗೆ ಹೇಳಿದ್ದಿಷ್ಟು!

ಚೆನ್ನೈ: ಧೋನಿ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಪ್ರಸಕ್ತ ಸಾಲಿನ ಐಪಿಎಲ್ ​ಶುರುವಾಗಿನಿಂದಲೂ ಇದು ಧೋನಿಯ ಕೊನೆಯ ಐಪಿಎಲ್ ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ ಚೆನ್ನೈ ತಂಡದ ನಾಯಕನಿಗೆ ಈ ಕುರಿತು ಹಲವಾರು ಬಾರಿ ಪ್ರಶ್ನೆಗಳನ್ನು ಕೇಳಿದರೂ ಇದರ ಬಗ್ಗೆ ಮಾತನಾಡದೇ ಮೌನವಾಗಿದ್ದರು.

ಇದನ್ನೂ ಓದಿ: VIDEO| ಬೈಕ್‌ ಹಿಂಬದಿ ಕೂತು ಹೆಲ್ಮೆಟ್ ಧರಿಸಿರುವ ನಾಯಿ..!

ಆದರೆ ಸದ್ಯ, ಧೋನಿಯ ನಿವೃತ್ತಿಯ ಮಾತು ಮತ್ತೆ ಮುನ್ನಲೆಗೆ ಬಂದಿದೆ. ನಿನ್ನೆ ಗುಜರಾತ್​ ತಂಡದ ವಿರುದ್ಧ ಪಂದ್ಯದ ಬಳಿಕ ವೇಳೆ ನಿರೂಪಕರು ಧೋನಿಗೆ ನಿವೃತ್ತಿ ಕುರಿತಾದ ಪ್ರಶ್ನೆಯೊಂದನ್ನು ಕೇಳಿದರು. ಆಗ ಧೋನಿ ನೀಡಿದ ಉತ್ತರ ಎಲ್ಲ ಅಭಿಮಾನಿಗಳಿಗೆ ಶಾಕ್​ ನೀಡಿದೆ.

ಪ್ರಶ್ನೆಗೆ ಉತ್ತರಿಸಿದ ಧೋನಿ, ನಿವೃತ್ತಿಯ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ತೀರ್ಮಾನ ಕೈಗೊಳ್ಳಲು ನನ್ನ ಬಳಿ 8-9 ತಿಂಗಳುಗಳಿವೆ. ಈಗ ಅದರ ತಲೆನೋವು ಏಕೆ? ಡಿಸೆಂಬರ್​​ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ನನಗೆ ಈ ಬಗ್ಗೆ ನಿರ್ಧರಿಸಲು ಸಾಕಷ್ಟು ಸಮಯವಿದೆ. ನಾನು ಯಾವಾಗಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿಯೇ ಇರುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. (ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್