More

    ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ

    ನವದೆಹಲಿ: ನಿನ್ನೆಯಷ್ಟೇ ರಾಜ್ಯದ ಎಲ್ಲ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಕೊವಿಡ್​-19 ಸ್ಥಿತಿಗತಿಗಳನ್ನು ಚರ್ಚೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.
    ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ 10,500ರ ಗಡಿದಾಟಿದ ಬೆನ್ನಲ್ಲೇ ಮಾತನಾಡಿದ ಅವರು, ಒಂದು ವೈರಸ್​ನಿಂದಾಗಿ ಇಡೀ ಜಗತ್ತು ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಇದರಿಂದ ಬಚಾವಾಗಲು ಗಟ್ಟಿ ಸಂಕಲ್ಪ ಮಾಡಬೇಕು ಎಂದರು.

    ನಾವು ಇಂಥ ಸಂಕಷ್ಟವನ್ನು ಮೊದಲು ಯಾವತ್ತೂ ಕೇಳಿರಲೂ ಇಲ್ಲ, ನೋಡಿರಲೂ ಇಲ್ಲ. ಒಂದು ಸಣ್ಣ ಕಲ್ಪನೆಯೂ ಇರಲಿಲ್ಲ. ಯಾರೂ ಊಹಿಸದಂತಹ ಕಷ್ಟ ಮಾನವ ಕುಲಕ್ಕೆ ಎದುರಾಗಿದೆ. ಆದರೆ ಈ ವೈರಸ್ ಎದುರು ಮಾನವರು ಎಂದೂ ಸೋಲನ್ನು ಒಪ್ಪಿಕೊಳ್ಳಬಾರದು. ನಾವು ನಮ್ಮನ್ನು ರಕ್ಷಿಸಿಕೊಳ್ಳುವದರೊಂದಿಗೆ ಮುನ್ನುಗ್ಗಬೇಕು ಎಂದು ಹೇಳಿದರು.

    ಇದನ್ನೂ ಓದಿ: ಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ

    ಈ ಕರೊನಾ ಬಿಕ್ಕಟ್ಟು ಶುರುವಾದಾಗ ಒಂದೇಒಂದು ಪಿಪಿಇ ಕಿಟ್​ ಭಾರತದಲ್ಲಿ ತಯಾರಾಗುತ್ತಿರಲಿಲ್ಲ. ಕೆಲವೇ ಕೆಲವು ಎನ್​ 95 ಮಾಸ್ಕ್​ಗಳು ಲಭ್ಯ ಇದ್ದವು. ಆದರೆ ಇಂದು ಪ್ರತಿದಿನ ಭಾರತದಲ್ಲಿ 2 ಲಕ್ಷ ಪಿಪಿಇ ಕಿಟ್​​ಗಳು ಸಿದ್ಧಗೊಳ್ಳುತ್ತವೆ. 2 ಲಕ್ಷ ಎನ್​ 95 ಮಾಸ್ಕ್​ಗಳು ರೆಡಿ ಆಗುತ್ತಿವೆ. ಭಾರತ ಈ ಕರೊನಾ ಬಿಕ್ಕಟ್ಟಿನ ಕಾಲವನ್ನೂ ಒಂದು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದೆ. ಆರ್ಥಿಕತೆಯಲ್ಲಿ ಹಿಂದೆ ಹೋಗಿರುವ ನಮ್ಮ ದೇಶವನ್ನು ಮತ್ತೆ 21ನೇ ಶತಮಾನಕ್ಕೆ ವಾಪಸ್​ ತರಲು ಸ್ವಾವಲಂಬನೆಯೇ ಪ್ರಮುಖ ಮಾರ್ಗ. ಕರೊನಾ ಹೋರಾಟದಲ್ಲಿ ಭಾರತದ ಕ್ರಿಯೆ, ಕೆಲಸಗಳು ಇಡೀ ಜಗತ್ತಿನ ಎದುರು ಪ್ರತಿಫಲಿಸುತ್ತಿವೆ. ನಮ್ಮಲ್ಲಿನ ಕೌಶಲ ಬೆಳಕಿಗೆ ಬರುತ್ತಿದೆ ಎಂದು ಮೋದಿಯವರು ಹೇಳಿದರು.

    ಇದನ್ನೂ ಓದಿ: ಕರೊನಾ ಸೋಂಕಿತ ನೆಲೆಸಿದ್ದ ಶಿಬರದಿನ್ನಿಯ ಎಡಭಾಗ ಕಂಪ್ಲೀಟ್ ಸೀಲ್ ಡೌನ್

    ಕರೊನಾ ಸಂಕಷ್ಟ ಕಾಲ ನಿರ್ವಹಣೆಗಾಗಿ, ಸ್ವಾವಲಂಬಿ ಭಾರತ ಅಭಿಯಾನ (ಆತ್ಮ ನಿರ್ಭರ ಭಾರತ ಅಭಿಯಾನ) ಕ್ಕಾಗಿ ಇಂದು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡುತ್ತಿದ್ದು, ಇದು ಭಾರತ ಜಿಡಿಪಿ ದರದ ಪ್ರತಿಶತ 10ರಷ್ಟಾಗಿದೆ. ದೇಶದ ಬಡವರು, ಮಧ್ಯಮವರ್ಗದವರು, ಉದ್ಯಮ ಕ್ಷೇತ್ರ, ಕೃಷಿಕರು, ಶ್ರಮಿಕರು, ರೈತರು ಸೇರಿ ಎಲ್ಲರಿಗಾಗಿ ಈ ಪ್ಯಾಕೇಜ್​ ನೀಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

    ಇದನ್ನೂ ಓದಿ: VIDEO: ಹೆದ್ದಾರೀಲಿ ಕುದುರೆ ಸವಾರಿ ಮಾಡಿ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಎಂಎಲ್​ಎ ಪುತ್ರ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts