More

    ಯಾವ ಗೊಡ್ಡು ಬೆದರಿಕೆಗಳಿಗೂ ಜಗ್ಗಲ್ಲ: ಎಸ್. ಆರ್ ಶ್ರೀನಿವಾಸ್

    ತುಮಕೂರು: ಈ ಬಾರಿಯ ಚುನಾವಣೆಯಲ್ಲಿ ದುಡ್ಡು ಕೆಲಸ ಮಾಡುತ್ತಾ ಇಲ್ಲಾ ಜನ ಬೆಂಬಲ ಕೆಲಸ ಮಾಡುತ್ತಾ ನೋಡೇ ಬಿಡೋಣ ಎಂದು ಪ್ರತಿಸ್ಪರ್ಧಿಗಳಿಗೆ ಮಾಜಿ ಸಚಿವ ಎಸ್.ಆರ್. ಶ್ರೀನಿವಾಸ್ ಸವಾಲು ಎಸೆದಿದ್ದಾರೆ.

    2023ರ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್.ಆರ್. ಶ್ರೀನಿವಾಸ್ ಅವರು, ಮನೆ ಮನೆ ಪ್ರಚಾರ ಕಾರ್ಯ ಆರಂಭಿಸಿದ್ದು, ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಬಾರಿಯ ಚುನಾವಣೆಯಲ್ಲಿ ಹಣ ಕೆಲಸ ಮಾಡುತ್ತಾ ಇಲ್ಲಾ, ಜನ ಬೆಂಬಲ ಕೆಲಸ ಮಾಡುತ್ತಾ ನೋಡಿಯೇ ಬಿಡೋಣ ಎಂದು ಪ್ರತಿಸ್ಪರ್ಧಿ ನಾಗರಾಜು ಅವರಿಗೆ ಸವಾಲು ಹಾಕಿದ್ದಾರೆ.

    ಇದನ್ನೂ ಓದಿ: ಸುದೀಪ್​ ನಟನೆಯ ಪೋಸ್ಟರ್​, ಕಾರ್ಯಕ್ರಮಗಳಿಗೆ ತಡೆ ಒಡ್ಡುವಂತೆ ಮನವಿ; ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ

    ಗುಬ್ಬಿ ಕ್ಷೇತ್ರದ ಮತದಾರರು ಪ್ರಜ್ಞಾವಂತರು. ಅವರು ಹಣ, ಹೆಂಡ ಇತ್ಯಾದಿ ಆಮಿಷಗಳಿಗೆ ಸೊಪ್ಪು ಹಾಕುವುದಿಲ್ಲ. ನಾನೇನು? ಎಂತಹ ವ್ಯಕ್ತಿ? ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಏನಿದ್ದರೂ ನನಗೆ ಮತ ನೀಡಿ ಆಶೀರ್ವದಿಸೋ ಜನತೆಗೆ ಹಾಗೂ ಕಾರ್ಯಕರ್ತರಿಗೆ ಮಾತ್ರ ನಾನು ತಲೆ ಬಾಗುವುದು. ಮೇ 13ರಂದು ಹೊರಬೀಳಲಿರುವ ಫಲಿತಾಂಶ, ಮತದಾರರಿಗೆ ಹಣ, ಹೆಂಡದ ಆಮಿಷ ಒಡ್ಡುವ ನನ್ನ ಪ್ರತಿಸ್ಪರ್ಧಿ ನಾಗರಾಜು ಅವರಿಗೆ ತಕ್ಕ ಪಾಠ ಆಗಲಿದೆ ಎಂದು ಅವರು ಟೀಕಿಸಿದರು.

    ಈ ವೇಳೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ ಜೊತೆಗಿದ್ದರು.

    ಬಾವಿಗೆ ಬಿದ್ದ ತಮ್ಮನನ್ನು ರಕ್ಷಿಸಿದ 3ನೇ ತರಗತಿ ವಿದ್ಯಾರ್ಥಿನಿ! ದಿಯಾಳ ಶೌರ್ಯಕ್ಕೆ ಬಹುಪರಾಕ್​

    ಕೋರ್ಟ್ ಆದೇಶದ ಬಳಿಕ ಪಿಎಸ್​ಐ ಮರುಪರೀಕ್ಷೆ; ಡಿಜಿಪಿ ಪ್ರವೀಣ ಸೂದ್

    ಆನ್​ಲೈನ್​ ಬೆಟ್ಟಿಂಗ್​ ಹಾಗೂ ಜೂಜಿನ ಜಾಹೀರಾತುಗಳಿಗೆ ಹೊಸ ನಿಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts