More

    ಆನ್​ಲೈನ್​ ಬೆಟ್ಟಿಂಗ್​ ಹಾಗೂ ಜೂಜಿನ ಜಾಹೀರಾತುಗಳಿಗೆ ಹೊಸ ನಿಯಮ

    ನವದೆಹಲಿ: ಆನ್​ಲೈನ್​ ಗೇಮಿಂಗ್​ ಬಗ್ಗೆ ಸರ್ಕಾರ ಗುರುವಾರ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಾನ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ಹೊಸ ನಿಯಮಗಳನ್ನು ಪ್ರಕಟಿಸಿದ್ದಾರೆ. ಇದು ಆನ್​ಲೈನ್​ ಜೂಜು ಮತ್ತು ಬೆಟ್ಟಿಂಗ್​ ಪ್ಲಾಟ್​ಫಾಮ್​ರ್ಗಳನ್ನು ನಿಷೇಧಿಸುತ್ತವೆ. ಆನ್​ಲೈನ್​ ಆಟಗಳಿಗೆ ಅನುಮತಿ ನೀಡುವ ಬಗ್ಗೆ ನಿಯಂತ್ರಕ ಸಂಸ್ಥೆ ನಿರ್ಧಾರ ಮಾಡಲಿದೆ.

    ಜೂಜಾಟ ಅಥವಾ ಬೆಟ್ಟಿಂಗ್​ ಒಳಗೊಂಡ ಆನ್​ಲೈನ್​ ಗೇಮ್​ಗಳು ಹೊಸ ನಿಯಮಗಳ ವ್ಯಾಪ್ತಿಗೆ ಬರುತ್ತವೆ. ಆಟದಲ್ಲಿ ಜೂಜಾಟವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿಯಂತ್ರಕ ಸಂಸ್ಥೆ ನಿರ್ಧಾರ ಮಾಡಲಿದೆ. ಪ್ರತಿಯೊಂದು ಆಟದ ಮೇಲೂ ನಿಗಾ ವಹಿಸಲು ಸ್ವಯಂ ನಿಯಂತ್ರಣ ಸಂಸ್ಥೆ ರಚನೆ ಮಾಡಲಾಗುತ್ತದೆ. ಬೆಟ್ಟಿಂಗ್​ ಅಂಶ ಇಲ್ಲದಿದ್ದರೆ ಅನುಮತಿ ನೀಡಲಾಗುತ್ತದೆ. ಬೆಟ್ಟಿಂಗ್​ ಒಳಗೊಂಡಿದ್ದರೆ ಅಂಥ ಆನ್​ಲೈನ್​ ಆಟಗಳಿಗೆ ಅನುಮತಿ ನೀಡಲಾಗುವುದಿಲ್ಲ.

    ಹೊಸ ಆನ್​ಲೈನ್​ ಜಾಈರಾತು ನಿಯಮಕ್ಕೆ ಗೇಮಿಂಗ್​ ಫೇಡರೇಶನ್​ ಸ್ವಾಗತ

    ಹೊಸ ನೀತಿಯನ್ನು ಆಲ್​ ಇಂಡಿಯಾ ಗೇಮಿಂಗ್​ ಫೇಡರೇಶನ್​ನ ಸಿಇಓ ಮಿ.ರೋಲ್ಯಾಂಡ್​ ಲ್ಯಾಂಡರ್ಸ್​ ಸ್ವಾಗತಿಸಿದ್ದಾರೆ. ಆನ್​ಲೈನ್​ ಗೇಮಿಂಗ್​ ದೊಡ್ಡ ಮತ್ತು ವೈವಿಧ್ಯಮಯ ಉದ್ಯಮವಾಗಿದೆ. ಮಾಹಿತಿ ತಂತ್ರಾನ ಕಾಯಿದೆಯಡಿಯಲ್ಲಿ ಆನ್​ಲೈನ್​ ಗೇಮಿಂಗ್​ ನಿಯಂತ್ರಿಸಲು ತಿದ್ದುಪಡಿಗಳನ್ನು ಸೂಚಿಸುವ ಮೂಲಕ ಉದ್ಯಮದ ಮತ್ತು ಆಟಗಾರರ ದೀರ್ಕಾಲದ ಬೇಡಿಕೆಯನ್ನು ಸರ್ಕಾರ ಅಂಗೀಕರಿಸಿದೆ. ಇದಕ್ಕಾಗಿ ಕೃತತೆ ಸಲ್ಲಿಸುತ್ತೇವೆ. ಆನ್​ಲೈನ್​ ಗೇಮಿಂಗ್​ನ ಸಮಗ್ರ ನಿಯಂತ್ರಣಕ್ಕಾಗಿ ಇದು ಮೊದಲ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts