More

    ಇಡೀ ದೇಶಕ್ಕೆ ಒಂದು ರೇಷನ್​ ಕಾರ್ಡ್​, ಯಾವ ರಾಜ್ಯಕ್ಕೆ ಗುಳೆ ಹೋದರೂ ಸಿಗುತ್ತೆ ಪಡಿತರ: ಶೋಭಾ ಕರಂದ್ಲಾಜೆ

    ಬೆಂಗಳೂರು: ದೇಶದ ಆಹಾರ ಸುರಕ್ಷತೆ ಹಾಗೂ ಬಡ ಜನರಿಗೆ ಪಡಿತರ ತಲುಪಿಸಿದ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದಾರೆ. ಅವರು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಬಾಟಿಯಾ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಜತೆ ಸೇರಿ ಸುದ್ದಿಗೋಷ್ಟಿ ಮಾಡಿದ್ದು ಈ ಸಂದರ್ಭ ಸಿದ್ದರಾಮಯ್ಯ ಸರ್ಕಾರದ ಕಾಲದ ಅನ್ನಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದಲೇ ಹಣ ಬರುವುದು ಎಂದಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ “ಅನ್ನಭಾಗ್ಯ ಸಿದ್ದರಾಮಯ್ಯ ಸರ್ಕಾರದಲ್ಲಿ ಅವರಫೊಟೋ ಹಾಕಿಸಿದ್ದರು. ಅನ್ನಭಾಗ್ಯದಲ್ಲಿ ಶೇಕಡಾ 90ರಷ್ಟು ಹಣ ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯದಲ್ಲಿ 1ಕೋಟಿ 17 ಲಕ್ಷ ಜನ ಆಹಾರಪಡಿತರ ಪಡೆದುಕೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಕ್ಕಿ ಮತ್ತು ಗೋಧಿ ನೀಡಲಾಗುತ್ತಿದೆ” ಎಂದಿದ್ದಾರೆ.

    ಇದೇ ಸಂದರ್ಭದಲ್ಲಿ ಇಡೀ ದೇಶಕ್ಕೆ ಒಂದೇ ರೇಷನ್​ ಕಾರ್ಡ್​ನ ಯೋಜನೆ ಮಾತನಾಡಿದ್ದು “ದೇಶದ ಪಿಡಿಎಸ್ ಅಕ್ಕಿ ಜೊತೆ ರಾಗಿ ಕೊಡುವ ಕೆಲಸ ಮಾಡಲಾಗ್ತಿದೆ. ನಮ್ಮ‌ ದೇಶದಲ್ಲಿ ಆಹಾರ ಭದ್ರತೆ ಆಕ್ಟ್ ಬಂದಿದೆ. ಅದರಂತೆ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಒದಗಿಸಬೇಕು. ಆದೆರೆ ಈಗ ಪೌಷ್ಟಿಕ ಆಹಾರ ಒದಗಿಸಬೇಕು ಅಂತಾಗಿದೆ. ಕೇಂದ್ರ ಸರ್ಕಾರ ಪೌಷ್ಟಿಕ ಆಹಾರ ನೀಡಲು 2ಲಕ್ಷ ಕೋಟಿ ವೆಚ್ಚ ಮಾಡಿದೆ.ಕರೋನಾ ಸಂದರ್ಭದ ಗರೀಬ್ ಕಲ್ಯಾಣ್ ಯೋಜನೆ ಈಗಲೂ ನಡೆಯುತ್ತಿದೆ. 1ಕೋಟಿ‌ 18ಲಕ್ಷ ಜನ ಪಡಿತರ ಮೂಲಕ ಪಡಿತರ ಪಡೆಯುತ್ತಿದ್ದಾರೆ. ನಿರ್ಗತಿಕರಿಗೆ 10ವರೆ ಲಕ್ಷ ಕುಟುಂಬಗಳಿಗೆ ಅನ್ನ ಕೊಡುವ ಕೆಲಸ ಆಗುತ್ತಿದೆ. ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಯೋಜನೆ ಮೂಲಕ ನೀಡುವ ಪಡಿತರ ಬೇರೆಯೇ ಇದೆ. 15 ಕೆ.ಜಿ ರಾಗಿ ಹಾಗೂ 20 ಕೆ.ಜಿ ಅಕ್ಕಿ ಅಂತ್ಯೋದಯ ಯೋಜನೆ ಮೂಲಕ ದೇಶದಲ್ಲಿ ನಾಲ್ಕು ಕೋಟಿ ಜನರಿಗೆ ನೀಡಲಾಗುತ್ತಿದೆ.

    ಈಗ 4ಕೆ.ಜಿ ಅಕ್ಕಿ, 3ಕೆ.ಜಿ ರಾಗಿ ಕೊಡ್ತಿದ್ದೇವೆ. ಇಡೀ ದೇಶಕ್ಕೆ ಒಂದು ರೇಷನ್ ಕಾರ್ಡ್ ಕೊಡಲಾಗಿದೆ. ಕರೋನಾ ಸಂದರ್ಭದಲ್ಲಿ ರೇಷನ್ ಕಿಟ್ ಕೊಡಲಾಯ್ತು. ಲಕ್ಷಾಂತರ ಜನ ಗುಳೆ ಹೊರಟಿದ್ದರು. ರೇಷನ್ ಇಲ್ಲ ಅಂತ ಲಕ್ಷಾಂತರ ಕರೆ ಬಂತು. ಅವರಿಗೆ ರೇಷನ್ ಕೊಡುವ ವ್ಯವಸ್ಥೆ ಇರಲಿಲ್ಲ. ಕರೋನಾ ನಮಗೆ ಪಾಠ ಕಲಿಸಿತು.

    ವಲಸೆ ಕಾರ್ಮಿಕರು ಯಾವುದೇ ಭಾಗಕ್ಕೆ ಹೋದ್ರೂ ರೇಷನ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಇಡೀ ದೇಶಕ್ಕೆ ರೇಷನ್ ಕೊಡುವ ರೇಷನ್ ಕಾರ್ಡ್ ಮಾಡಲಾಗಿದೆ. ರೇಷನ್ ಕಾರ್ಡ್ ಒಂದು ರಾಜ್ಯಕ್ಕೆ ಸೀಮಿತ ಅಲ್ಲ. ಬೇರೆ ರಾಜ್ಯದಿಂದ ಇಲ್ಲಿಗೆ ಬಂದ್ರೂ ರೇಷನ್ ಪಡೆಯಬಹುದು. ಈ ರೇಷನ್ ಮೂಲಕ ಬಡವರ ಹೊಟ್ಟೆ ತುಂಬಿಸುವ ಕೆಲಸ ಆಗಲಿದೆ” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts