More

    ಚಹಾ, ಚೂಡಾ ಕೊಡಿಸಿದರೆ ಆಗಿನ ಎಲೆಕ್ಷನ್‌ನಲ್ಲಿ ಅದೇ ದೊಡ್ಡದು!

    ಎರಡು-ಮೂರು ದಶಕಗಳ ಹಿಂದೆ ಚಹಾ, ಚೂಡಾದ ಮೇಲೆ ಚುನಾವಣೆ ಪೂರ್ಣಗೊಳ್ಳುತ್ತಿದ್ದವು ಎಂದರೆ ನಂಬುತ್ತೀರಾ? ಮತದಾರರು ವ್ಯಕ್ತಿ, ವ್ಯಕ್ತಿತ್ವ, ಪಕ್ಷ ಹಾಗೂ ಸಿದ್ಧಾಂತಕ್ಕೆ ಆದ್ಯತೆ ನೀಡಿ ಮತ ಚಲಾಯಿಸುತ್ತಿದ್ದರು. ಆಗೆಲ್ಲ ಲಕ್ಷ ರೂಪಾಯಿ ಲೆಕ್ಕದಲ್ಲಿ ಚುನಾವಣೆ ಮುಗಿಯುತ್ತಿದ್ದವು. ಈಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ನಡೆಯುತ್ತಿವೆ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕುತ್ತಾರೆ ಇಂಡಿಯ ಮಾಜಿ ಶಾಸಕ ರವಿಕಾಂತ ಪಾಟೀಲ.

    ‘‘1994ರಲ್ಲಿ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೇವಲ ನನಗೆ 18 ಲಕ್ಷ ರೂಪಾಯಿ ಖರ್ಚಾಗಿತ್ತು. ಆಗ ಎಲ್ಲರಿಗೂ ಚಹಾ ಚೂಡಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇವಲ ವಾಹನಗಳ ಬಾಡಿಗೆಗೆ ಮಾತ್ರ ಹಣ ನೀಡಲಾಗಿತ್ತು. ತಿಂಗಳಾನುಗಟ್ಟಲೆ ಪ್ರಚಾರ ಮಾಡಿದರೂ ಆಗಿನ ಅಭಿಮಾನಿ ಬಳಗ, ಕಾರ್ಯಕರ್ತರು ಯಾವುದಕ್ಕೂ ಅಪೇಕ್ಷೆ ಪಡುತ್ತಿರಲಿಲ್ಲ. ಬದಲಾಗಿ ತಮ್ಮ ಸ್ವಂತ ಹಣ ಖರ್ಚು ಮಾಡುತ್ತಿದ್ದರು’’ ಎಂದು ಸ್ಮರಿಸುತ್ತಾರೆ.

    ‘‘ಕಾಲಕ್ರಮೇಣ ಚುನಾವಣೆ ನಡೆಯಬೇಕೆಂದರೆ ಖರ್ಚು ವೆಚ್ಚಗಳು ಹೆಚ್ಚಾಗುತ್ತಾ ಸಾಗುತ್ತಿವೆ. ಇತ್ತೀಚೆಗೆ ಸಿಂದಗಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿದಿತ್ತು ಎಂಬುದು ಜಗಜ್ಜಾಹೀರಾಗಿದೆ. ಈಗ ಒಬ್ಬ ಅಭ್ಯರ್ಥಿ ಕನಿಷ್ಠ 10 ಕೋಟಿ ರೂಪಾಯಿಗಳವರೆಗೆ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಚುನಾವಣೆ ಎರಡು ದಿನ ಇದೆ ಎನ್ನುವಷ್ಟರಲ್ಲಿ ದುಡ್ಡಿನ ಸುರಿಮಳೆ ಪ್ರಾರಂಭವಾಗುತ್ತದೆ. ಪ್ರತಿಶತ 40 ರಷ್ಟು ಜನ ದುಡ್ಡು ಪಡೆದೇ ಚುನಾವಣೆಗೆ ಮತ ಹಾಕಲು ಹೋಗುತ್ತಾರೆ’’ ಎಂದು ನೆನಪಿಸಿಕೊಳ್ಳುತ್ತಾರೆ ಹ್ಯಾಟ್ರಿಕ್ ಹೀರೋ ಖ್ಯಾತಿಯ ಮಾಜಿ ಶಾಸಕ ರವಿಕಾಂತ ಪಾಟೀಲ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts