More

    ನಾನು ಆರೋಗ್ಯವಾಗಿದ್ದೇನೆ… ಆತಂಕ ಪಡಬೇಡಿ; ಸಾಮಾಜಿಕ ಜಾಲತಾಣದ ಸುದ್ದಿ ಸುಳ್ಳು….

    ಹೊಳೆಹೊನ್ನೂರು (ಶಿವಮೊಗ್ಗ): ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ನಾನು ಆರೋಗ್ಯವಾಗಿದ್ದೇನೆ… ಭಕ್ತರು ಆತಂಕಪಡುವ ಅಗತ್ಯವಿಲ್ಲ ಎಂದು ಶಿವಮೊಗ್ಗ ತಾಲೂಕು ತುಂಗಾಭದ್ರ ಸಂಗಮದ ಶ್ರೀ ಕ್ಷೇತ್ರ ಕೂಡಲಿ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತಿ ಸ್ವಾಮೀಜಿ ಹೇಳಿದ್ದಾರೆ.

    ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ‘ಸ್ವಾಮೀಜಿಗೆ ಹೃದಯಾಘಾತವಾಗಿದ್ದು, ಅಪೊಲೋ ಅಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟೆಂಟ್ ಅಳವಡಿಸಲು 2.53 ಲಕ್ಷ ರೂ. ವೆಚ್ಚವಾಗುತ್ತದೆ. ಭಕ್ತರು ಧನಸಹಾಯ ಮಾಡಬೇಕು ಎಂದು ಕಿಡಿಗೇಡಿಗಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ನನಗೆ ಹೃದಯಾಘಾತವಾಗಿಲ್ಲ. ಆರೋಗ್ಯವಾಗಿದ್ದು, ಕೂಡಲಿ ಮಠದಲ್ಲೇ ಇದ್ದೇವೆ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

    ಇದಕ್ಕೆ ಪೂರಕವಾಗಿ ಸ್ವಾಮೀಜಿ ಬೆಳಗಿನ ಪೂಜೆಯಲ್ಲಿ ತೊಡಗಿರುವ ಭಾವಚಿತ್ರವನ್ನು ಮಠದ ವತಿಯಿಂದ ಬಿಡುಗಡೆ ಮಾಡಲಾಗಿದೆ.

    ಬೆಳ್ಳಿ ಸಿಂಧು ವಿಶ್ವ ಚಾಂಪಿಯನ್​ಷಿಪ್​ ಗೆದ್ದು ಚಿನ್ನದ ಸಿಂಧು ಆಗಿದ್ದು ಹೇಗೆ…? ಪಿ.ವಿ. ಸಿಂಧು ಅವರಿಂದಲೇ ಪಡೆಯಿರಿ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts