More

    4 ಕೋಟಿ ರೂ. ವರದಕ್ಷಿಣೆ ಸಾಕಾಗುವುದಿಲ್ಲ ಎಂದ ಕಿರಾತಕ! ನಡದೇ ಹೋಯಿತು ಘೋರ ದುರಂತ

    ಹೈದರಾಬಾದ್​: ಕಾಲ ಎಷ್ಟೇ ಬದಲಾಗುತ್ತಿದ್ದರೂ ವರದಕ್ಷಿಣೆಗಾಗಿ ಕಿರುಕುಳ ನೀಡುವವರು ಮಾತ್ರ ಬದಲಾಗುತ್ತಿಲ್ಲ. ಪ್ರತಿದಿನ ಒಂದಲ್ಲ ಒಂದು ಕಡೆ ವರದಕ್ಷಿಣೆ ಕಿರುಕುಳಕ್ಕೆ ಹೆಣ್ಣುಮಗು ಬಲಿಪಶು ಆಗುತ್ತಿರುವುದು ವರದಿಯಾಗುತ್ತಲೇ ಇದೆ. ಹಣದಾಹಕ್ಕೆ ಮೃಗಗಳಂತೆ ವರ್ತಿಸುವ ಕಿಡಿಗೇಡಿಗಳಿಗೆ ಕಠಿಣವಾದ ಕಡಿವಾಣ ಹಾಕಲೇಬೇಕಿದೆ. ಇಲ್ಲವಾದಲ್ಲಿ ವರದಕ್ಷಿಣೆ ಎಂಬ ಪೆಡಂಭೂತ ಅಮಾಯಕ ಹೆಣ್ಣುಮಕ್ಕಳನ್ನು ಬಲಿ ಪಡೆಯುತ್ತದೆ.

    ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ದುರಂತವೊಂದು ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ವಿವಾಹಿತ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 4 ಕೋಟಿ ವರದಕ್ಷಿಣೆ ನೀಡಿದ ಬಳಿಕವೂ ವರದಕ್ಷಿಣೆ ದಾಹಕ್ಕೆ ವಿವಾಹಿತ ಮಹಿಳೆ ಬಲಿಯಾಗಿದ್ದಾಳೆ.

    ಹೈದರಾಬಾದ್​ನ ಗಾಜುಲರಾಮಮ್​ ಮೂಲದ ಅಭಿಲಾಷ್ ಎಂಬಾತ 2019ರಲ್ಲಿ ಅದೇ ನಗರದ ಅಮರಾವತಿ ಎಂಬಾಕೆಯನ್ನು ವಿವಾಹವಾಗಿದ್ದ. ಮದುವೆ ವೇಳೆ ಅರ್ಧ ಕೆಜಿ ಚಿನ್ನ, 2 ಕೆಜಿ ಬೆಳ್ಳಿ ವಸ್ತುಗಳು, 10 ಲಕ್ಷ ರೂ. ನಗದು, ಹಯಾತ್ ನಗರದಲ್ಲಿ 3 ಕೋಟಿ ರೂ. ಮೌಲ್ಯದ ಫ್ಲಾಟ್ ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ, ಮದುವೆಯಾದ ಕೆಲ ವರ್ಷಗಳ ಕಾಲ ಅಮರಾವತಿ ಜತೆ ಚೆನ್ನಾಗಿದ್ದ ಅಭಿಲಾಷ್, ಬಳಿಕ ತನ್ನ ಅಸಲಿ ಮುಖವಾಡ ಕಳಚಿದ. ಹಣಕ್ಕಾಗಿ ಕಿರುಕುಳ ನೀಡಲಾರಂಭಿಸಿದ್ದ. ಅಭಿಲಾಷ್ ಮತ್ತು ಆತನ ಅತ್ತಿಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ, ಹಿಂಸೆ ನೀಡುತ್ತಿದ್ದರು.

    ಕಿರುಕುಳದಿಂದ ಬೇಸತ್ತ ಅಮರಾವತಿ ಕೊನೆಗೆ ಇಹಲೋಕ ತ್ಯಜಿಸುವ ಕಠಿಣ ನಿರ್ಧಾರ ಮಾಡಿ, ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ. ಮೃತ ಅಮರಾವತಿ, ಸಹೋದರನ ದೂರಿನ ಮೇರೆಗೆ ಪೊಲೀಸರು ಅಭಿಲಾಷ್ ಮತ್ತು ಆತನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)

    ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹಕ್ಕೆ ಬರುವ ಅತಿಥಿಗಳಿಗೆ ಸಿಗಲಿದೆ ಈ ವಿಶೇಷ ಗಿಫ್ಟ್​!

    ಉತ್ತಮ S*x ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ! ಅನುಪಮಾ ಡೈಲಾಗ್​ ಕೇಳಿ ಬೆರಗಾದ್ರು ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts