More

    ಅಮೆರಿಕದಲ್ಲಿ ಭಾರತೀಯನ ಮೇಲೆ ಗುಂಡಿನ ದಾಳಿ: ನೋಡಿಕೊಳ್ಳಲು ಯಾರು ಇಲ್ಲ, ಆತಂಕದಲ್ಲಿ ಕುಟುಂಬ

    ಹೈದರಾಬಾದ್​: ಹೈದಾರಾಬಾದ್​ ಮೂಲದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಅಮೆರಿಕದ ಚಿಕಾಗೋದಲ್ಲಿ ನಡೆದಿದೆ.

    ಮೊಹಮ್ಮದ್​ ಮುಜೀಬುದ್ದೀನ್​ ಎಂಬುವರ ಮೇಲೆ ಸೋಮವಾರ ನಸುಕಿನ ಜಾವವೇ ಗುಂಡಿನ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮ ರಾವ್​ ಅವರಿಗೆ ಗಾಯಾಳು ಮುಜೀಬುದ್ದೀನ್​ ಪತ್ನಿ ಪತ್ರದ ಮೂಲಕ ತಿಳಿಸಿದ್ದಾರೆ.

    ಇದನ್ನೂ ಓದಿ: ನಾಮಪತ್ರ ಹಿಂಪಡೆಯದಿದ್ದರೆ ನಿನ್ನ ಹೆಂಡತಿಯನ್ನು ಬಿಡೋದಿಲ್ಲ: ಪಿಸ್ತೂಲ್​ ತೋರಿಸಿ ಬೆದರಿಕೆ ಆರೋಪ!

    ಮುಜೀಬುದ್ದೀನ್​ ಪತ್ನಿ, ಮಕ್ಕಳು ಮತ್ತು ತಾಯಿ ಹೈದರಾಬಾದ್​ನಲ್ಲೇ ನೆಲೆಸದ್ದಾರೆ. ಮುಜೀಬುದ್ದೀನ್​ ರೂಮ್​ಮೇಟ್​ ಒಬ್ಬರು ಹೈದರಾಬಾದ್​ಗೆ ಕರೆ ಮಾಡಿ ಘಟನೆ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಇದೀಗ ಮುಜೀಬುದ್ದೀನ್ ನೋಡಿಕೊಳ್ಳಲು ಯಾರು ಇಲ್ಲದಿರುವುದರಿಂದ ಕುಟುಂಬ ತುಂಬಾ ಆತಂಕದಲ್ಲಿದೆ. ಅಲ್ಲದೆ, ಅಗತ್ಯ ನೆರವು ಒದಗಿಸಿ ಕೊಡುವಂತೆ ಮುಜೀಬುದ್ದೀನ್​ ಪತ್ನಿ ಪತ್ರ ಮುಖೇನ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.

    ತಕ್ಷಣ ಅಮೆರಿಕಗೆ ತೆರಳಲು ಕುಟುಂಬದವರಿಗೆ ತುರ್ತು ವೀಸಾಗೆ ಅನುಮತಿ ನೀಡುವಂತೆ ಸಚಿವರಿಗೂ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮುಜೀಬುದ್ದೀನ್ ರೂಮ್​ಮೇಟ್​ ಮಾಹಿತಿ ಪ್ರಕಾರ ಕಾರು ಚಲಾಯಿಸಿಕೊಂಡು ಹೋಗುವಾಗ ಇಬ್ಬರು ವ್ಯಕ್ತಿಗಳು ಕಾರನ್ನು ತಡೆದು ಕೆಳಗೆ ಇಳಿಯುವಂತೆ ಗನ್​ನಿಂದ ಹೆದರಿಸಿ, ಮುಜೀಬುದ್ದೀನ್ ಬಳಿಯಿರುವ ಹಣವನ್ನು ದೋಚಿ ಗುಂಡು ಹಾರಿಸಿ ಪರಾರಿ ಆದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಕೋಟಿ ರೂ. ಲಂಚಕ್ಕೆ ಸಚಿವ ನಾಗೇಶ್ ಬೇಡಿಕೆ? ಸಚಿವರು ಹೇಳಿದ್ದೇನು?

    ಹೊಸ ರೂಪಾಂತರ ಕರೊನಾ ವೈರಸ್​ ನಿಯಂತ್ರಣ ತಪ್ಪಿಲ್ಲ: ಡಬ್ಲ್ಯುಎಚ್​ಒ ಸ್ಪಷ್ಟನೆ

    ಶಾಲಾ ಶುಲ್ಕದ್ದೇ ದೊಡ್ಡ ಸಮಸ್ಯೆ: ಪಾಲಕರು, ಖಾಸಗಿ ಶಾಲೆಗಳ ಸಹಕಾರ ಕೋರಿದ ಸುರೇಶ್​ಕುಮಾರ್

    ಯಡಿಯೂರಪ್ಪ ಅನುಭವಸ್ಥ, ಸಲಹೆ ಅಗತ್ಯವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts