More

  Electoral Bond: ಬಿಜೆಪಿಗೆ ಗರಿಷ್ಠ ದೇಣಿಗೆ ನೀಡಿದ ರೈತನ ಮಗ ಕಟ್ಟಿದ ಕಂಪನಿ; ಹೈದರಾಬಾದ್‌ನ ಮೇಘಾ ಗ್ರೂಪ್ ನಡೆದು ಬಂದ ಹಾದಿಯೇ ರೋಚಕ!

  ಹೈದರಾಬಾದ್: ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಹೆಸರು ಸದ್ಯ ಚರ್ಚೆಯಲ್ಲಿದೆ. ಎಂಇಐಎಲ್ ಬಿಜೆಪಿ ಮತ್ತು ಬಿಆರ್ ಎಸ್’ಗೆ ಅತಿದೊಡ್ಡ ಚುನಾವಣಾ ಬಾಂಡ್ ದಾನಿಯಾಗಿದೆ ಮತ್ತು ಕಾಂಗ್ರೆಸ್‌ಗೆ ಎರಡನೇ ಅತಿದೊಡ್ಡ ದಾನಿಯಾಗಿದೆ. ಈ ಕಂಪನಿಯು 1989 ರಲ್ಲಿ ಬಹಳ ಸಣ್ಣದಾಗಿ ಆರಂಭವಾಯಿತು.

  ಎಂಇಐಎಲ್ ಮತ್ತು ಅದರ ಸಮೂಹ ಕಂಪನಿ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ (ಡಬ್ಲ್ಯುಯುಪಿಟಿಎಲ್) ಒಟ್ಟಾಗಿ ಬಿಜೆಪಿಗೆ 664 ಕೋಟಿ ರೂ.,  ಡಬ್ಲ್ಯುಯುಪಿಟಿಎಲ್ ಕಾಂಗ್ರೆಸ್‌ಗೆ 110 ಕೋಟಿ ರೂ., ಎಂಇಐಎಲ್ ಬಿಆರ್ ಎಸ್’ಗೆ 195 ಕೋಟಿ ರೂ. ದೇಣಿಗೆ ನೀಡಿದೆ. ಇದು ಟಿಡಿಪಿ (28 ಕೋಟಿ) ಮತ್ತು ವೈಎಸ್‌ಆರ್‌ಸಿಪಿ (37 ಕೋಟಿ)ಗೂ ದೇಣಿಗೆ ನೀಡಿದ್ದು, ಎರಡನೇ ಅತಿ ದೊಡ್ಡ ದಾನಿಯಾಗಿದೆ.

  ಮೇಘಾ 1989ರಲ್ಲಿ ಚಿಕ್ಕದಾಗಿ ಆರಂಭವಾಯಿತು. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ರೈತನ ಮಗನಾದ ಪಾಮಿರೆಡ್ಡಿ ಪಿಚಿ ರೆಡ್ಡಿ ಅವರು ಕಂಪನಿಯನ್ನು ಸ್ಥಾಪಿಸಿದರು. ಅವರ ಸೋದರಳಿಯ ಪುರತಿಪತಿ ವೆಂಕಟ ಕೃಷ್ಣಾ ರೆಡ್ಡಿ ಅವರು ಇದನ್ನು ಭಾರತದ ಅತಿದೊಡ್ಡ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿಗಳಲ್ಲಿ ಒಂದನ್ನಾಗಿ ಮಾಡಿದರು.

  ಮೇಘಾ ಕಂಪನಿ ಯಾರಿಗೆ ಎಷ್ಟು ಕೊಟ್ಟಿತು?

  ಕಂಪನಿಯು ಹೈದರಾಬಾದ್‌ನಲ್ಲಿ ಮೇಘಾ ಗ್ರೂಪ್ ಎಂದು ಕರೆಯಲ್ಪಡುತ್ತದೆ. ಇದು ಹೈದರಾಬಾದ್‌ನಲ್ಲಿ ಜನಪ್ರಿಯವಾಗಿದೆ. ಕಂಪನಿಯು ಏಪ್ರಿಲ್ 2019 ಮತ್ತು ನವೆಂಬರ್ 2023 ರ ನಡುವೆ ನೇರವಾಗಿ ಮತ್ತು ಸಂಬಂಧಿತ ಕಂಪನಿಗಳ ಮೂಲಕ ರಾಜಕೀಯ ಪಕ್ಷಗಳಿಗೆ 1,232 ಕೋಟಿ ರೂ. ನೀಡಿದೆ. ಇದರಲ್ಲಿ ಎಂಇಐಎಲ್ 966 ಕೋಟಿ ರೂ, ಡಬ್ಲ್ಯುಯುಪಿಟಿಎಲ್  220 ಕೋಟಿ ರೂ, ಎಸ್ಇಪಿಸಿ ಪವರ್ 40 ಕೋಟಿ ರೂ,  ಮತ್ತು Ivey ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ 6 ಕೋಟಿ ರೂ. ನೀಡಿದೆ.

  ಹಿಂದೆ ವರದಿ ಮಾಡಿದಂತೆ, ಸ್ಯಾಂಟಿಯಾಗೊ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್ ಮತ್ತು ಅಂಗಸಂಸ್ಥೆ ಕಂಪನಿಗಳ ನಂತರ ಇದು ಎರಡನೇ ಅತಿ ದೊಡ್ಡ ಚುನಾವಣಾ ಬಾಂಡ್ ಖರೀದಿದಾರ.

  ಕಂಪನಿಯ ವಹಿವಾಟು 40,000 ಕೋಟಿ ರೂ

  100 ಕೋಟಿ ವಹಿವಾಟು ಸಾಧಿಸಲು ಮೇಘಾಗೆ ಒಂದು ದಶಕ ಬೇಕಾಯಿತು. ಆದರೆ ಈಗ ಅದು 40,000 ಕೋಟಿ ರೂಪಾಯಿ ವಹಿವಾಟು ನಡೆಸುವ ಕಂಪನಿಯಾಗಿದ್ದು, 20ಕ್ಕೂ ಹೆಚ್ಚು ದೇಶಗಳಲ್ಲಿ ಕಾಲಿಟ್ಟಿರುವ ಭಾರತೀಯ ಬಹುರಾಷ್ಟ್ರೀಯ ಕಂಪನಿಯಾಗಿದೆ. ಇದು ಪ್ರಾರಂಭವಾದಾಗ 10 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿತ್ತು. ಈಗ ಈ 25 ಸಮೂಹ ಸಂಸ್ಥೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.

  ಭಾರತದ ಏಕೈಕ ಕಂಪನಿ

  ಮೇಘಾ ಗ್ರೂಪ್ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೂ ಹೆಸರುವಾಸಿಯಾಗಿದೆ. ಸಮೂಹದ ಕಂಪನಿ Olectra Greentech ಚೀನಾದ BYD ಯೊಂದಿಗೆ ತಾಂತ್ರಿಕ ಸಹಯೋಗದೊಂದಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸುತ್ತದೆ. ಮೇಘಾ ಗ್ರೂಪ್‌ನ ವಿಶೇಷತೆ ಏನೆಂದರೆ, ದೊಡ್ಡ ಯೋಜನೆಗಳನ್ನು ಡೆಡ್‌ಲೈನ್‌ಗೂ ಮುನ್ನವೇ ಕಾರ್ಯಗತಗೊಳಿಸಿ ಖ್ಯಾತಿ ಗಳಿಸಿರುವುದು ಕಂಪನಿಯ ವಿಶೇಷತೆ ಎನ್ನುತ್ತಾರೆ ಮೇಘಾ ಗ್ರೂಪ್ ಬಗ್ಗೆ ಪರಿಚಿತರು. ಇದರ ಯೋಜನೆಗಳು ವಿಶ್ವದ ಅತಿದೊಡ್ಡ ಬಹು-ಹಂತದ ಲಿಫ್ಟ್ ನೀರಾವರಿ ಯೋಜನೆಯನ್ನು ಒಳಗೊಂಡಿವೆ. ಇದು ತೆಲಂಗಾಣದ ಕಾಳೇಶ್ವರಂನಲ್ಲಿದೆ. ಇದಲ್ಲದೆ, ಆಂಧ್ರಪ್ರದೇಶದ ಪೋಲಾವರಂ ಯೋಜನೆಯೂ ಸೇರಿದೆ. ಇದು ವಿಶ್ವದ ಅತಿದೊಡ್ಡ ಸ್ಪಿಲ್‌ವೇ ಎಂದು ಹೇಳಿಕೊಳ್ಳುತ್ತದೆ.

  ಕಂಪನಿಯ ಹೆಸರಿನಲ್ಲಿವೆ ಅನೇಕ ದಾಖಲೆಗಳು

  ಮೇಘಾ 700 ಕಿಲೋಮೀಟರ್‌ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದೆ. ಇದೀಗ ದೇಶಾದ್ಯಂತ 2,000 ಕಿ.ಮೀ ವ್ಯಾಪ್ತಿಯ 40 ರಸ್ತೆ ಯೋಜನೆಗಳನ್ನು ನಿರ್ಮಿಸುತ್ತಿದೆ. ಕಂಪನಿಯ ಪ್ರಾಜೆಕ್ಟ್ ಗಳಲ್ಲಿ 11,578 ಅಡಿ ಎತ್ತರದಲ್ಲಿ ಹಿಮಾಲಯದ ಭೂಪ್ರದೇಶದ ಜೊಜಿಲಾದಲ್ಲಿ ಏಷ್ಯಾದ ಅತಿ ಉದ್ದದ ದ್ವಿ-ದಿಕ್ಕಿನ ಸುರಂಗವನ್ನು ಒಳಗೊಂಡಿದೆ.

  ಚುನಾವಣಾ ಬಾಂಡ್‌: 1368 ಕೋಟಿ ರೂ.ದೇಣಿಗೆ ನೀಡಿದ ಸ್ಯಾಂಟಿಯಾಗೊ ಮಾರ್ಟಿನ್ ಯಾರು?, ಕಾರ್ಮಿಕನೊಬ್ಬ ಲಾಟರಿ ಕಿಂಗ್ ಆಗಿದ್ದು ಹೇಗೆ?

  ಸುಪೌಲ್‌ನಲ್ಲಿ ಭಾರೀ ಅಪಘಾತ: ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಗಿರ್ಡರ್ ಕುಸಿದು ಒರ್ವ ಸಾವು, ಹಲವರು ಕಣ್ಮರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts