More

    ಹೂವಿನಹಡಗಲಿ ನಿರಾಶ್ರಿತರ ಕೇಂದ್ರದಲ್ಲಿದ್ದ ಅಂತರ ಜಿಲ್ಲಾ ವಲಸೆ ಕಾರ್ಮಿಕರ ಬಿಡುಗಡೆ

    ಹೂವಿನಹಡಗಲಿ: ಪಟ್ಟಣದ ವಸತಿ ನಿಲಯದಲ್ಲಿ ಆರಂಭಿಸಿದ್ದ ನಿರಾಶ್ರಿತರ ಕೇಂದ್ರದಲ್ಲಿ 24 ದಿನಗಳಿಂದ ಆಶ್ರಯ ಪಡೆದಿದ್ದ ಅಂತರ ಜಿಲ್ಲಾ ವಲಸೆ ಕಾರ್ಮಿಕರನ್ನು ಶುಕ್ರವಾರ ಸ್ವಂತ ಊರಿಗೆ ಕಳಿಸಿಕೊಡಲಾಯಿತು.

    ಲಾಕ್‌ಡೌನ್ ಘೋಷಣೆ ಬಳಿಕ ಬೆಂಗಳೂರು, ಚಿಕ್ಕಮಗಳೂರಿನಿಂದ ತಮ್ಮ ಊರುಗಳಿಗೆ ತೆರಳುವಾಗ ವಿವಿಧ ಜಿಲ್ಲೆಗಳ 27 ವಲಸೆ ಕಾರ್ಮಿಕರನ್ನು ಇಲ್ಲಿನ ಚೆಕ್ ಪೋಸ್ಟ್‌ನಲ್ಲಿ ತಡೆದು ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿತ್ತು. ಇವರಲ್ಲಿ 10 ಮಹಿಳೆಯರು, 17 ಪುರುಷರು ಇದ್ದರು. ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತದಿಂದ ಬಿಡುಗಡೆ ಆದೇಶ ಬರುತ್ತಿದ್ದಂತೆ ಎಲ್ಲರ ಮುಖದಲ್ಲೂ ಮಂದಹಾಸ ಕಂಡುಬಂತು. ತಹಸೀಲ್ದಾರ್ ಕೆ.ವಿಜಯಕುಮಾರ್, ಎಲ್ಲರಿಗೂ ಪಾಸ್ ವಿತರಿಸಿ, ತಮ್ಮ ಊರುಗಳಿಗೆ ಮರಳುವಂತೆ ತಿಳಿಸಿದರು. ಪರಿಹಾರ ಕೇಂದ್ರದ ಮೇಲ್ವಿಚಾರಕ ಹಾಗೂ ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ, ಎಲ್ಲರಿಗೂ ಮಲ್ಲಿಗೆ ಸಸಿ ನೀಡಿ ಬೀಳ್ಕೊಟ್ಟರು. ಪಿಎಸ್‌ಐ ಎಸ್.ಪಿ.ನಾಯ್ಕ, ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ತಾಪಂ ಸದಸ್ಯ ಜೆ.ಶಿವರಾಜ್ ಹಾಗೂ ಕರೊನಾ ಸ್ವಯಂ ಸೇವಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts