More

    ಹೂವಿನಹಡಗಲಿ ಪಟ್ಟಣದ ರಾಮದೇವರ ರಥೋತ್ಸವ ಜೋರು

    ಹೂವಿನಹಡಗಲಿ: ಪಟ್ಟಣದ ರಾಮ ದೇವಸ್ಥಾನದ ರಾಮ ದೇವರ ರಥೋತ್ಸವ ಮಂಗಳವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.

    ಇದನ್ನೂ ಓದಿ: ಕೋಟೆ ಆಂಜನೇಯ ಬ್ರಹ್ಮರಥೋತ್ಸವ

    ರಾಮದೇವರ ಮೂರ್ತಿಯನ್ನು ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ತಂದು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ನಂತರ ಪ್ರತಿಷ್ಠಾಪಿಸಲಾಯಿತು. ಧರ್ಮದರ್ಶಿ ಡಾ.ರಾಕೇಶಯ್ಯ ರಾಮಸ್ವಾಮಿ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು.

    ಪಟ್ಟಣದ ತೇರು ಹನುಮಪ್ಪ ಸ್ವಾಮಿ ದೇವಸ್ಥಾನದವರೆಗೂ ರಥೋತ್ಸವ ನಡೆದು, ಸ್ವಸ್ಥಾನಕ್ಕೆ ಮರಳಿತು. ಹರಕೆ ಹೊತ್ತ ಭಕ್ತರು ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥಕ್ಕೆ ಬಾಳೆ ದಿಂಡು, ತೆಂಗಿನಗರಿ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.

    ಸಕಲ ಮಂಗಳವಾದ್ಯಗಳಾದ ಡೊಳ್ಳುಕುಣಿತ, ಸಮಾಳ, ನಂದಿಕೋಲು ಹಾಗೂ ಡ್ರಮ್‌ಸೆಟ್ ವಾದ್ಯಗಳು ರಥೋತ್ಸವಕ್ಕೆ ಮೆರುಗು ತಂದವು. ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts