More

    ಕೋಟೆ ಆಂಜನೇಯ ಬ್ರಹ್ಮರಥೋತ್ಸವ

    ಸಾಸ್ವೆಹಳ್ಳಿ: ಹನುಮ ಜಯಂತಿ ನಿಮಿತ್ತ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಕೋಟೆ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

    ಭಾನುವಾರ ಸ್ವಾಮಿಗೆ ಕಂಕಣಧಾರಣೆ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸೋಮವಾರ ಬೆಳಗ್ಗೆ ಉಚ್ಚಾಯ ಉತ್ಸವ, ಮಂಗಳವಾರ ಬೆಳಗ್ಗೆಯಿಂದಲೇ ಶಿಲಾಮೂರ್ತಿ ಮತ್ತು ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ಮತ್ತು ಹೋಮ ಹವನಗಳು ಪುರೋಹಿತ ತಂಡದಿಂದ ನೆರವೇರಿದವು.

    ಗ್ರಾಮದ ಕೆಲವು ಪ್ರಮುಖ ಬೀದಿಗಳಲ್ಲಿ ಆಂಜನೇಯ, ನರಸಿಂಹ ಹಾಗೂ ಕಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳ ಮೆರವಣಿಗೆ ವಾದ್ಯ ತಂಡದೊಂದಿಗೆ ಸಾಗಿತು. ಗ್ರಾಮದ ಪದ್ಧತಿಯಂತೆ ಸಂಜೆ ಉತ್ಸವಮೂರ್ತಿಗಳನ್ನು ಇಲ್ಲಿನ ವೈಷ್ಣವ ಸಮಾಜದವರ ಮನೆಗೆ ಕರೆದೊಯ್ದು ಪ್ರಸಾದ ನೈವೇದ್ಯ ಅರ್ಪಣೆ ಕಾರ್ಯ ನೆರವೇರಿತು.

    ಬಳಿಕ ಉತ್ಸವ ಮೂರ್ತಿಗಳನ್ನು ದೇಗುಲದ ಆವರಣಕ್ಕೆ ಕರೆತಂದು ರಥದ ಮೇಲೆ ಕೂರಿಸಿ, ತೇರಿಗೆ ಪೂಜೆ ಸಲ್ಲಿಸಿ ತೇರಿಗೆ ಚಾಲನೆ ನೀಡಲಾಯಿತು. ದೇವಾಲಯದ ಆವರಣದಿಂದ ರಾಜಬೀದಿಯ ಕಲ್ಲೇಶ್ವರ ಸ್ವಾಮಿ ದೇಗುಲದವರೆಗೂ ಎಳೆದು, ಸ್ವಸ್ಥಾನಕ್ಕೆ ತರಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts