More

    ಏ.23ರಂದು ಶಿಕಾರಿಪುರ ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವ

    ಶಿಕಾರಿಪುರ: ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿಯ ಬ್ರಹ್ಮರಥೋತ್ಸವ ಏ.23ರಂದು ನಡೆಯಲಿದೆ. ಹುಣ್ಣಿಮೆಯ ದಿನವಾದ ಅಂದು ಬೆಳಗ್ಗೆ 9.40ರಿಂದ 9.50ರವರೆಗಿನ ಮಿಥುನ ಲಗ್ನದಲ್ಲಿ ಗಣಪತಿ ಪೂಜೆ, ಅಷ್ಟ ದಿಕ್ಪಾಲಕರ ಮಹಾಬಲಿಯೊಂದಿಗೆ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

    24ರಂದು ಸಂಜೆ 4ಕ್ಕೆ ಮಹಾರಥವು ಸಕಲ ವಾದ್ಯಗಳೊಡನೆ ಹೊರಟು ಮೂಲ ಸ್ಥಳದಲ್ಲಿ ತಲುಪಲಿದೆ. ರಾತ್ರಿ ಹುಚ್ಚರಾಯಸ್ವಾಮಿಯ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಆಕರ್ಷಕ ವಿದ್ಯುತ್ ಅಲಂಕಾರ ತೆಪ್ಪೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
    25ರ ಬೆಳಗ್ಗೆ ಶ್ರೀ ಹುಚ್ಚರಾಯಸ್ವಾಮಿಯ ಉತ್ಸವ ಮೂರ್ತಿಯು ದೂಪದಹಳ್ಳಿ ಗ್ರಾಮ ಪ್ರವೇಶಿಸಲಿದ್ದು, ಅಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದ ಬಳಿಕ ಮತ್ತೆ ದೇಗುಲಕ್ಕೆ ಮರಳಲಿದೆ. ತದನಂತರ ಅವಭೃತಸ್ನಾನ, ಭೂತರಾಜ ಸೇವೆ, ದಾಸರ ಓಕುಳಿ ಸೇರಿದಂತೆ ಹಲವಾರು ಧಾರ್ಮಿಕ ಆಚರಣೆಗಳು ನಡೆಯಲಿವೆ. 25ರವರೆಗೆ ಜಾತ್ರೆ ನಿಮಿತ್ತ ಸ್ವಾಮಿಗೆ ನಿತ್ಯ ವಿಶೇಷ ಪೂಜೆ, ಅಲಂಕಾರಗಳನ್ನು ನೆರವೇರಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts