More

    ಮರವಂತೆಯಲ್ಲಿ ಭಾರಿ ಕಡಲ್ಕೊರೆತ; ಕೊಚ್ಚಿಕೊಂಡು ಹೋದವು ನೂರಕ್ಕೂ ಅಧಿಕ ತೆಂಗಿನ ಮರಗಳು!

    ಉಡುಪಿ: ಪ್ರೇಕ್ಷಣಿಯ ಪ್ರವಾಸಿ ತಾಣವಾಗಿರುವ ಮರವಂತೆ ಕಡಲ ತೀರದಲ್ಲಿ ಭಾರಿ ಕಡಲ್ಕೊರೆತ ಉಂಟಾಗಿದ್ದು, ಸುತ್ತಮುತ್ತಲ ನಿವಾಸಿಗರು ಆತಂಕದಿಂದ ಇರುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.

    ಕಳೆದ ಎರಡು ದಿನಗಳಿಂದ ಸಮುದ್ರ ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿದ್ದು, ಇನ್ನೂ ಕೂಡ ಕಡಲಿನ ಅಲೆಗಳ ಅಬ್ಬರ ಜೋರಾಗಿದೆ. ಈಗಾಗಲೇ ಅಲೆಗಳ ಅಬ್ಬರಕ್ಕೆ ಸಿಲುಕಿ ಕಡಲ ತೀರದ ನೂರಕ್ಕೂ ಅಧಿಕ ತೆಂಗಿನ ಮರಗಳು ಕೊಚ್ಚಿಕೊಂಡು ಹೋಗಿವೆ.

    ಮರವಂತೆ ಗ್ರಾಮದ ಕಡಲ ಕಿನಾರೆಯಲ್ಲಿ ಸಮುದ್ರ ರೌದ್ರಾವತಾರ ತೆಳೆದಿದ್ದು, ಸಾರ್ವಜನಿಕರು ತಾವೇ ಹೊಯ್ಗೆ ಚೀಲಗಳನ್ನು ಹಾಕಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ. ಅದಾಗ್ಯೂ ಆ ಚೀಲಗಳ ಸಮೇತ ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.

    ಮೀನುಗಾರರ ಮನೆಗಳ ಕೆಲವೇ ಅಡಿಗಳ ಅಂತರಕ್ಕೆ ಸಮುದ್ರದ ಅಲೆಗಳು ಬಂದು ತಲುಪುತ್ತಿದ್ದು, ಅವರು ಮನೆಗಳನ್ನು ಉಳಿಸಿಕೊಳ್ಳುವ ಚಿಂತೆಯಲ್ಲಿದ್ದಾರೆ. ಅಲ್ಲದೆ ತಡೆಗೋಡೆ ಕಾಮಗಾರಿ ಮಾಡದ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಮತ್ತು ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿದ್ದಾರೆ.

    ಮರವಂತೆಯಲ್ಲಿ ಭಾರಿ ಕಡಲ್ಕೊರೆತ; ಕೊಚ್ಚಿಕೊಂಡು ಹೋದವು ನೂರಕ್ಕೂ ಅಧಿಕ ತೆಂಗಿನ ಮರಗಳು!

    ರಸ್ತೆ ಪಕ್ಕ ನಿಂತಿದ್ದ ಕಾರಿನ ಮೇಲೇ ಮಗುಚಿ ಬಿದ್ದ ಲಾರಿ, ಕಾರಲ್ಲಿದ್ದ ವ್ಯಕ್ತಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts