More

    ನಾವಷ್ಟೇ ಅಲ್ಲ, ಅಂಡಾಣು ಕೂಡ ಹುಡುಕುತ್ತೆ ಸಂಗಾತಿ, ಗರ್ಭಾಶಯದಲ್ಲೂ ನಡೆಯುತ್ತೆ ಪರಸಂಗ…!

    ನವದೆಹಲಿ: ಹೆಣ್ಣು ಫಲವತಿಯಾಗಿ ಅಂಡಾಣು ಬಿಡುಗಡೆಯಾದ ಬಳಿಕ ಮಾನವನ ವೀರ್ಯ ಸಂಪರ್ಕ ಹೊಂದಿ ಪ್ರಜನನ ಪ್ರಕ್ರಿಯೆ ಆರಂಭವಾಗುತ್ತದೆ. ಅದೊಂದು ಮಾನವ ಸಹಜ ಪ್ರಕ್ರಿಯೆ. ಆದರೆ, ಇದರಲ್ಲೊಂದು ಸ್ವಾರಸ್ಯವಿದೆ.

    ಮಾನವರು ತಮ್ಮ ಸಂಗಾತಿಯನ್ನು ಹುಡುಕಲು ಅದೆಷ್ಟು ಶ್ರಮಪಟ್ಟಿರುತ್ತಾರೋ ಏನೋ? ಇಂಥದ್ದೇ ಹುಡುಕಾಟ ಗರ್ಭಾಶಯದಲ್ಲೂ ನಡೆಯುತ್ತದೆ ಎಂದರೆ ನಂಬಲೇಬೇಕು….! ಹೌದು… ಅಂಡಾಣುಗಳು ಕೂಡ ತಮಗಿಷ್ಟವಾದ ವೀರ್ಯದೊಂದಿಗೆ ಸಂಪರ್ಕ ಹೊಂದಲು ಹುಡುಕಾಟ ನಡೆಸುತ್ತವೆ ಎಂಬುದು ಅಧ್ಯಯನವೊಂದರಲ್ಲಿ ಬಯಲಾಗಿದೆ.

    ಇದನ್ನೂ ಓದಿ: ಪತ್ನಿಯ ಯೋಗಾಭ್ಯಾಸ ವಿಡಿಯೋದಲ್ಲಿ ‘ಬೆತ್ತಲಾದ’ ನ್ಯೂಸ್​ ಆ್ಯಂಕರ್​…! 

    ಸ್ಟಾಕ್​ಹೋಮ್​, ಮ್ಯಾಂಚೆಸ್ಟರ್​ ವಿಶ್ವವಿದ್ಯಾಲಯದ ತಂಡಗಳು ಹಾಗೂ ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸೇವೆ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಅವುಗಳ ಆಯ್ಕೆ ಸಂಗಾತಿಯ ವೀರ್ಯವೇ ಆಗಿರಬೇಕೆಂದೇನಿಲ್ಲ…..!

    ಅಂಡಾಣುಗಳು ಕೆಮೋ ಅಟ್ರ್ಯಾಕ್ಟಂಟ್ಸ್​ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಆ ಮೂಲಕ ವೀರ್ಯವನ್ನು ಆಕರ್ಷಿಸುತ್ತವೆ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಜಾನ್​ ಫಿಟ್ಜ್​ ಪ್ಯಾಟ್ರಿಕ್​ ಮಾಹಿತಿ ನೀಡಿದ್ದಾರೆ. ಮಹಿಳೆ ಹಾಗೂ ಪುರುಷರ ನಡುವಿನ ಹೊಂದಾಣಿಕೆ ಕೂಡ ಅಂಡಾಣು ಹಾಗೂ ವೀರ್ಯದ ಫಲಿತಕ್ಕೆ ಪ್ರಭಾವ ಬೀರುತ್ತದೆ. ಅಂಡಾಣುವನ್ನು ಸುತ್ತುವರಿಯುವ ಫಾಲಿಕ್ಯುಲರ್​ ದ್ರವವು ಕೆಮೋ ಅಟ್ರ್ಯಾಕ್ಟಂಟ್ಸ್​ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಹತ್ತು ವರ್ಷ 3.5 ಲಕ್ಷ ಜನ ಆ ನಿಧಿಗಾಗಿ ಹುಡುಕಿದ್ದರು; ಅಷ್ಟಕ್ಕೂ ಎಲ್ಲಿತ್ತು? ಎಷ್ಟಿತ್ತು?

    ಮಹಿಳೆ ಆಯ್ದುಕೊಳ್ಳುವ ಪುರುಷನ ವೀರ್ಯವನ್ನೇ ಅಂಡಾಣು ಸೇರಬೇಕೆಂದೇನೂ ಇಲ್ಲ. ಆದರೆ, ಸಂಗಾತಿಯಲ್ಲದ ಪುರುಷನ ವೀರ್ಯದೊಂದಿಗೆ ಸಂಪರ್ಕ ಹೊಂದುವುದು ಕಡಿಮೆ ಎಂದೂ ಸಂಶೋಧಕರು ಹೇಳುತ್ತಾರೆ.

    ಇನ್ನೊಂದು ವಿಶೇಷವೆಂದರೆ, ವೀರ್ಯಕ್ಕೆ ಅಂಡಾಣುವನ್ನು ಫಲವತ್ತಗೊಳಿಸುವುದಷ್ಟೇ ಕೆಲಸ ಹೀಗಾಗಿ ಅದಕ್ಕೆ ಹೆಚ್ಚಿನ ಆಯ್ಕೆಗಳೇ ಇಲ್ಲವಂತೆ. ಗುಣಮಟ್ಟದ ವೀರ್ಯದೊಂದಿಗೆ ಸೇರಿದರೆ ಅಂಡಾಣುವಿಗೆ ಪ್ರಯೋಜನವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

    ಕರೊನಾವನ್ನೇ ಮಣಿಸಿ ಮೂಲೆಗಟ್ಟಿದವರು ಕೋಳಿ, ಕುದುರೆಗಳಿಗೆ ಅಂಜುತ್ತಿದ್ದಾರೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts