More

    VIDEO: ಇಂಗ್ಲೆಂಡ್‌ನಿಂದ ಯುಎಇಯತ್ತ ಐಪಿಎಲ್ ಆಟಗಾರರು

    ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಐಪಿಎಲ್ ಆಟಗಾರರು ಯುಎಇಯತ್ತ ಧಾವಿಸುತ್ತಿದ್ದಾರೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮದ್ ಸಿರಾಜ್, ವಿಶೇಷ ಚಾರ್ಟರ್ ವಿಮಾನದ ಮೂಲಕ ಶನಿವಾರ ರಾತ್ರಿ ಮ್ಯಾಂಚೆಸ್ಟರ್‌ನಿಂದ ಹೊರಡಲಿದ್ದು, ಭಾನುವಾರ ಬೆಳಗ್ಗೆ ದುಬೈ ತಲುಪಲಿದ್ದಾರೆ ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ. ತಂಡದ ಬಯೋ ಬಬಲ್ ವ್ಯಾಪ್ತಿಗೆ ಪ್ರವೇಶ ಪಡೆಯುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಸಿರಾಜ್ ಇಬ್ಬರೂ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಪೂರ್ವ ನಿಗದಿಯಂತೆ ಐಪಿಎಲ್ ಆಟಗಾರರು ಸೆ.15ಕ್ಕೆ ಯುಎಇಗೆ ತೆರಳಬೇಕಿತ್ತು.

    * ತಂಡ ಕೂಡಿಕೊಂಡ ಮುಂಬೈ ಆಟಗಾರರು
    ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಆಟಗಾರರಾದ ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮ್ಯಾಂಚೆಸ್ಟರ್‌ನಿಂದ ಕುಟುಂಬ ಸದಸ್ಯರೊಂದಿಗೆ ಅಬುಧಾಬಿಗೆ ಬಂದಿಳಿದರು. ಪಂದ್ಯ ರದ್ದುಗೊಂಡ ಬೆನ್ನಲ್ಲೇ ಮುಂಬೈ ಆಟಗಾರರು ಇಂಗ್ಲೆಂಡ್ ತೊರೆದಿದ್ದು, ಅಬುಧಾಬಿಯಲ್ಲಿ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಎಲ್ಲ ಆಟಗಾರರ ಹಾಗೂ ಕುಟುಂಬ ಸದಸ್ಯರ ಆರ್‌ಟಿ-ಪಿಸಿಆರ್ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಮುಂಬೈ ಇಂಡಿಯನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

    ಕಡೇ ಟೆಸ್ಟ್ ಪಂದ್ಯ ಏಕಾಏಕಿನ ರದ್ದುಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಅನುಮತಿಗೆ ಕಾಯದ ಫ್ರಾಂಚೈಸಿಗಳು ಸ್ವತಃ ವಿಶೇಷ ಹಾಗೂ ಚಾರ್ಟರ್ ವಿಮಾನಗಳ ಮೂಲಕ ಆಟಗಾರರನ್ನು ಯುಎಇಗೆ ಕರೆಸಿಕೊಳ್ಳುತ್ತಿವೆ. ಈಗಾಗಲೇ ಅಭ್ಯಾಸ ಆರಂಭಿಸಿರುವ ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಶಾರ್ದೂಲ್ ಠಾಕೂರ್, ಸಿಎಸ್‌ಕೆ ತಂಡದ ಆಟಗಾರರಾಗಿದ್ದಾರೆ. ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಮೊಹಮದ್ ಶಮಿ ಪಂಜಾಬ್ ತಂಡದ ಆಟಗಾರರಾಗಿದ್ದು, ಭಾನುವಾರ ಯುಎಇಯತ್ತ ಪ್ರಮಾಣಿಸುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts