More

    ಹುಡಾ ಅಧ್ಯಕ್ಷ ನಾಗೇಶಗೆ ಕೊಕ್

    ಹುಬ್ಬಳ್ಳಿ ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ಸರ್ಕಾರ ರದ್ದುಪಡಿಸಿ ಆದೇಶ ಹೊರಡಿಸಿದೆ.
    ಕಳೆದ ಎರಡು ವರ್ಷಗಳಿಂದ ಹುಡಾ ಅಧ್ಯಕ್ಷರಾಗಿದ್ದ ನಾಗೇಶ ಕಲಬುರ್ಗಿ ಅವರಿಗೂ ಸರ್ಕಾರ ಕೊಕ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
    ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ಅವಳಿನಗರದಲ್ಲಿ ಅನಧಿಕೃತ ಲೇಔಟ್ ವಿರುದ್ಧ ಸಮರ ಸಾರಿದ್ದಾರೆ. ಅಲ್ಲದೆ, ಸಿಎ ನಿವೇಶನಗಳ ಹಂಚಿಕೆ, ಸದ್ಬಳಕೆಯಾಗದ ಸಿಎ ನಿವೇಶನಗಳ ವಾಪಸ್ ಪಡೆಯುವುದು, ಬಾಕಿ ಉಳಿದಿದ್ದ ನಿವೇಶನಗಳ ಹಂಚಿಕೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು.
    ಇದೇ ರೀತಿ ಹಲವಾರು ಸುಧಾರಣೆ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಅವು ಜಾರಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಅವರ ನಾಮನಿರ್ದೇಶನ ರದ್ದು ಮಾಡಿರುವುದು ನೋವಿನ ಸಂಗತಿ ಎಂದು ಎಸ್​ಎಸ್​ಕೆ ಸಮಾಜ ಚಿಂತನ ಮಂಥನ ಸಮಿತಿಯ ಹನುಮಂತಸಾ ನಿರಂಜನ ಹಾಗೂ ಇತರ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಹಿಂದುಳಿದ ಸಮುದಾಯದ ನಾಯಕರಾಗಿರುವ ನಾಗೇಶ ಅವರನ್ನು ಇನ್ನಷ್ಟು ಕಾಲ ಅಧಿಕಾರದಲ್ಲಿ ಮುಂದುವರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts