More

    ಬಲಿಷ್ಠವಾಗಲಿ ಕನ್ನಡಪರ ಸಂಘಟನೆಗಳು

    ಹುಣಸಗಿ: ಕೇವಲ ನವೆಂಬರ್ ತಿಂಗಳು ಬಂದಾಗ ಮಾತ್ರ ಕನ್ನಡ ಅಭಿಮಾನ ಬೇಕಿಲ್ಲ. ಪ್ರತಿನಿತ್ಯವೂ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಇರಬೇಕು ಎಂದು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಹೇಳಿದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡ ರಾಜ್ಯೋತ್ಸವ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹುಟ್ಟಿ ಬೆಳೆದ ನಾವು, ಕನ್ನಡ ಭಾಷೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಲ್ಲದೆ ಕನ್ನಡಪರ ಸಂಘಟನೆಗಳು ಕೂಡ ಬಲಿಷ್ಠವಾಗಿ ಬೆಳೆಯುವುದರ ಜತೆಗೆ ಕನ್ನಡಕ್ಕಾಗಿ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.

    ಕರ್ನಾಟಕ ಜಾನಪದ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿ, ನಮ್ಮ ಸಾಹಿತಿಗಳು ಸಾವಿಲ್ಲದ ಸಾಹಿತ್ಯವನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಸರ್ಕಾರ ಕನ್ನಡ ಶಾಲೆ ಮುಚ್ಚುವ ಬದಲು ಹೆಚ್ಚಿನ ಸೌಲಭ್ಯ ನೀಡಿ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು.

    ಸಿಪಿಐ ಸಚಿನ್ ಚಲುವಾದಿ, ತಾಪಂ ಇಒ ಬಸವರಾಜಸ್ವಾಮಿ ಹಿರೇಮಠ, ಪಟ್ಟಣ ಪಂಚಾಯತ್ ಸಿಒ ಸಿದ್ರಾಮೇಶ್ವರ, ಕಸಾಪ ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಕರವೇ ತಾಲೂಕು ಅಧ್ಯಕ್ಷ ಶಿವಲಿಂಗ ಪಟ್ಟಣಶೆಟ್ಟಿ, ರಮೇಶ ಬಿರಾದಾರ ಇತರರಿದ್ದರು.

    ವೆಂಕಟೇಶ ಸ್ವಾಗತಿಸಿದರು. ಸುರೇಶ ಹಾದಿಮನಿ ವಂದಿಸಿದರು. ನಾಗನಗೌಡ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts