More

    ಗ್ಯಾಸ್ಟ್ರಿಕ್ ಸಮಸ್ಯೆಗೆ ಅತ್ಯುತ್ತಮ ಮನೆ ಮದ್ದು ನಿಂಬೆಹಣ್ಣು



    ಬೆಂಗಳೂರು: ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿವೆ. ವಿಟಮಿನ್ ಸಿ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಗ್ಯಾಸ್ಟ್ರಿಕ್​​ನಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಱರು. ನಿಂಬೆ ರಸವು ಆಮ್ಲೀಯವಾಗಿದ್ದರೂ, ಇದು ಹೊಟ್ಟೆಯ ವಾತಾವರಣವನ್ನು ಕ್ಷಾರಗೊಳಿಸುತ್ತದೆ. ಜತೆಗೆ ನೀರಿನೊಂದಿಗೆ ಬೆರೆಸಿದಾಗ ಒಟ್ಟಾರೆ ಪಿಎಚ್ ಸಮತೋಲನ ಕಾಪಾಡಿಕೊಳ್ಳುತ್ತದೆ.
    ಒಂದು ವೇಳೆ ನೀವು ಎದೆಯುರಿ, ವಾಯು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಬಳಲುತ್ತಿದ್ದರೆ ಗ್ಯಾಸ್‌ ನಿವಾರಣೆಗಾಗಿ ½ ಹೋಳು ನಿಂಬೆ ಮತ್ತು 1 ಗ್ಲಾಸ್ ನೀರು ಬಳಸಿ ಸಾಕು.

    ಏನು ಮಾಡಬೇಕು?
    *ಅರ್ಧ ಹೋಳು ನಿಂಬೆಹಣ್ಣಿನಿಂದ ರಸ ತೆಗೆದು ಒಂದು ಗ್ಲಾಸ್ ನೀರಿಗೆ ಹಿಂಡಿ.
    *ನಂತರ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.
    ಎಷ್ಟು ಬಾರಿ ಮಾಡಬೇಕು?
    *ದಿನಕ್ಕೆ 1-2 ಬಾರಿ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts