More

    ಮನಿಮಾತು: ‘ಪ್ಲಾಂಟ್ ನರ್ಸರಿ ಬಿಜಿನೆಸ್​ನಲ್ಲಿ ಹಣ ಗಳಿಸೋದು ಹೇಗೆ?

    ಮನಿಮಾತು: ‘ಪ್ಲಾಂಟ್ ನರ್ಸರಿ ಬಿಜಿನೆಸ್​ನಲ್ಲಿ ಹಣ ಗಳಿಸೋದು ಹೇಗೆ?ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬೀಜದ ಫಲವತ್ತತೆ ಉತ್ತಮವಾಗಿದ್ದಲ್ಲಿ ಮಾತ್ರ ಒಳ್ಳೆಯ ಬೆಳೆ ನಿರೀಕ್ಷಿಸಲು ಸಾಧ್ಯ. ಅದೇ ನಿಟ್ಟಿನಲ್ಲಿ ಹಲವಾರು ಜನರು ಪ್ಲಾಂಟ್ ನರ್ಸರಿ ನಡೆಸುವ ಮೂಲಕ ಕೃಷಿಕರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ನಮಗೆ ಬೇಕಾದ ತರಕಾರಿ, ಹೂವು-ಹಣ್ಣುಗಳನ್ನು ನಮ್ಮ ಜಾಗದಲ್ಲೇ ಬೆಳೆಯಲು ಬಹು ಮುಖ್ಯವಾಗಿ ಬೇಕಾದದ್ದು ಉತ್ತಮವಾದ ಬೀಜ ಅಥವಾ ಸಸಿ. ಇವುಗಳಿಗಾಗಿ ನಾವು ಪ್ಲಾಂಟ್ ನರ್ಸರಿಗಳನ್ನು ಅವಲಂಬಿಸಿದ್ದೇವೆ. ಆದರೆ, ನಾವೇ ನರ್ಸರಿ ಆರಂಭಿಸಿದರೆ ಹೇಗೆ? ನರ್ಸರಿ ಆರಂಭಕ್ಕೆ ನಮಗೆ ಬೇಕಾದ ಮೂಲಭೂತ ಅಗತ್ಯಗಳು ಯಾವುವು? ಇದಕ್ಕೆ ಬೇಕಾಗುವ ಕಚ್ಚಾ ವಸ್ತು, ತಂತ್ರಜ್ಞಾನವಾದರೂ ಏನು? ಪ್ಲಾಂಟ್ ನರ್ಸರಿ ಮಾಡಿದರೆ ಬೇಡಿಕೆ ಇದೆಯಾ? ನರ್ಸರಿ ಮಾಡಿ, ಗಿಡಗಳನ್ನು ವಿದೇಶಕ್ಕೆ ರಫ್ತು ಮಾಡಬಹುದಾ ಎಂಬಿತ್ಯಾದಿ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ಈ ಅಂಕಣದಲ್ಲಿದೆ.

    ಪ್ಲಾಂಟ್ ನರ್ಸರಿ ಎಂದರೇನು?: ತೋಟಗಾರಿಕೆಯ ಸಣ್ಣ ಆವೃತ್ತಿಯೇ ಪ್ಲಾಂಟ್ ನರ್ಸರಿ. ಬಿತ್ತನೆ ಬೀಜ, ಕಸಿ ಪದ್ಧತಿ ಮೂಲಕ ಪೈರು, ಸಸಿ, ಗಿಡ, ಸಸ್ಯ ಪ್ರಬೇಧಗಳನ್ನು ವೈಜ್ಞಾನಿಕವಾಗಿ ಪೋಷಿಸಿ ಬೆಳೆಸುವ ವ್ಯವಸ್ಥೆಯೇ ನರ್ಸರಿ ಬಿಜಿನೆಸ್. ಸಾಮಾನ್ಯವಾಗಿ ನೈಸರ್ಗಿಕ ಚಪ್ಪರ ಅಥವಾ ಗ್ರೀನ್​ಹೌಸ್ ವಾತಾವರಣದಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ನರ್ಸರಿ ಮಾಡಲು ಜಾಗ, ನೀರು, ಸಮತೋಲಿತ ಹವಾಗುಣ ಮತ್ತು ಕೌಶಲವಿರುವ ಕೆಲಸಗಾರರು ಬೇಕಾಗುತ್ತಾರೆ. ಪ್ಲಾಂಟ್ ನರ್ಸರಿ ಸದ್ಯದ ಪರಿಸ್ಥಿತಿಯಲ್ಲಿ ಬಹಳ ಪ್ರಾಮುಖ್ಯತೆ ಹೊಂದಿರುವ ಬಿಜಿನೆಸ್​ಗಳಲ್ಲಿ ಒಂದಾಗಿದೆ. ಹಸಿರೇ ಉಸಿರು ಎಂಬ ಕ್ರಾಂತಿ ನಡೆಯುತ್ತಿರುವ ಈ ಕಾಲದಲ್ಲಿ ಪ್ಲಾಂಟ್ ನರ್ಸರಿಗೆ ಬಹಳ ಬೇಡಿಕೆ ಇದೆ. ಹೀಗಾಗಿಯೇ ಪ್ಲಾಂಟ್ ನರ್ಸರಿ ನಡೆಸುತ್ತಿರುವ ಹಲವಾರು ಜನರು ಸಾಕಷ್ಟು ಮಂದಿ ಲಕ್ಷದಿಂದ ಕೋಟಿ ರೂ.ವರೆಗೂ ಗಳಿಸಲು ಸಾಧ್ಯವಾಗಿದೆ.

    ಪ್ಲಾಂಟ್ ನರ್ಸರಿ ವಿಧಗಳು: ಪ್ಲಾಂಟ್ ನರ್ಸರಿಗಳಲ್ಲಿ ಹಲವಾರು ವಿಧಗಳಿವೆ. ಕೆಲವುಗಳನ್ನು ಹೆಸರಿಸುವುದಾದರೆ ಹಣ್ಣು, ತರಕಾರಿ, ಹೂವಿನ ಸಸ್ಯ ನರ್ಸರಿ, ಔಷಧೀಯ ಮತ್ತು ಆರೊಮ್ಯಾಟಿಕ್ ಸಸ್ಯ, ಅಲಂಕಾರಿಕ ಸಸ್ಯ, ಅರಣ್ಯ ಸಸ್ಯ, ಕೃಷಿ ಬೆಳೆ ನರ್ಸರಿ ಹೀಗೆ ಹಲವಾರು ನರ್ಸರಿ ವಿವಿಧ ರೀತಿಯಲ್ಲಿ ಸಾಕಷ್ಟು ಜನಗಳಿಗೆ ಸಹಾಯಕವಾಗುತ್ತಿವೆ. ಪ್ಲಾಂಟ್ ನರ್ಸರಿಯ ಪ್ರಾಮುಖ್ಯತೆ. ನಮ್ಮ ದೇಶದ ಒಟ್ಟು ಭೂಮಿಯಲ್ಲಿ ಶೇ.57 ಕೃಷಿ ಭೂಮಿ ಇದೆ. ಪ್ರಪಂಚದಲ್ಲೇ ಅತಿ ಹೆಚ್ಚು ಕೃಷಿ ಭೂಮಿ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋದು ನಮ್ಮ ಭಾರತ. ಸಾಮಾನ್ಯವಾಗಿ ಒಂದಷ್ಟು ರೈತರು, ಸಸಿಗಳಿಗಾಗಿ ನರ್ಸರಿಗಳನ್ನು ಅವಲಂಬಿಸಿರುತ್ತಾರೆ. ಕಾರಣ, ಪ್ಲಾಂಟ್ ನರ್ಸರಿಗಳಿಂದ ತಯಾರಿರುವ ವಿವಿಧ ತಳಿಯ ಸಸಿಗಳನ್ನು ತರುವ ಮೂಲಕ ಬಹಳ ಸುಲಭವಾಗಿ ಹಾಗೂ ಶೀಘ್ರವಾಗಿ ಉತ್ತಮ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ. ಏಕೆಂದರೆ, ಪ್ಲಾಂಟ್ ನರ್ಸರಿಯಲ್ಲಿ ಉತ್ತಮ ಸಸಿ, ಪೈರುಗಳನ್ನು ಬೆಳೆಸಿರುತ್ತಾರೆ. ಇದು ರೈತರಿಗೆ 30 ರಿಂದ 40 ದಿನ ಉಳಿಸಲು ಸಹಾಯ ಮಾಡುತ್ತದೆ. ಆದರೆ ಅದೆಷ್ಟೋ ರೈತರು, ಮುಂಗಾರು ಸಮಯದಲ್ಲಿ ಸರ್ಕಾರ ಬೀಜ ವಿತರಣೆ ಮಾಡಿಲ್ಲ ಅನ್ನೋ ಕಾರಣಕ್ಕೆ ಪ್ರತಿಭಟನೆ ಮಾಡುತ್ತಾರೆ. ದೇಶಕ್ಕೆಲ್ಲ ಉಣಬಡಿಸುವ ನಮ್ಮ ಅನ್ನದಾತ ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದು ಇಲ್ಲ. ಇದೇ ರೀತಿ ಅವರಿಗೆ ಬೇಕಾಗುವ ಸಸಿಗಳನ್ನು ಅವರೇ ತಯಾರಿಸಬಲ್ಲರು. ಆದರೆ ಅದಕ್ಕೆ ಅವರಿಗೆ ಪೂರಕ ತರಬೇತಿ ಅಗತ್ಯವಿದೆ. ಅದಕ್ಕಾಗಿಯೇ ನಮ್ಮ ಇಂಡಿಯನ್ ಮನಿ ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಪ್ಲಾಂಟ್ ನರ್ಸರಿ ಬಿಜಿನೆಸ್ ಆರಂಭಿಸುವುದು ಹೇಗೆ? ಎಂಬ ಕೋರ್ಸ್ ಹೊರತಂದಿದೆ.

    ನರ್ಸರಿಗೆ ಸರ್ಕಾರದಿಂದ ಸಿಗುವ ಸವಲತ್ತು: ಪ್ಲಾಂಟ್ ನರ್ಸರಿ ಕೂಡ ಕೃಷಿಯ ಒಂದು ಪ್ರಮುಖ ಭಾಗವಾಗಿರುವ ಕಾರಣ ಸರ್ಕಾರ ಇದಕ್ಕೆ ಬಹಳಷ್ಟು ಸವಲತ್ತು ನೀಡುತ್ತಿದೆ. ಈ ಸಸಿಗಳ ಉತ್ಪಾದನೆಗೆ ಯಾವುದೇ ಜಿಎಸ್​ಟಿ ಅನ್ವಯಿಸುವುದಿಲ್ಲ. ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹನಿ ನೀರಾವರಿ ಪದ್ಧತಿಗೆ ಸಬ್ಸಿಡಿ, ವಿದ್ಯುತ್​ಗೆ ರಿಯಾಯಿತಿ, ತೋಟಗಾರಿಕೆ ತರಬೇತಿ, ಸಸ್ಯ ನರ್ಸರಿ ಪ್ರದರ್ಶನಕ್ಕೆ ಸಹಾಯ ಹಸ್ತ ನೀಡುವ ಮೂಲಕ ಮಾರುಕಟ್ಟೆಗೂ ನೆರವು ಮಾಡಿಕೊಡುತ್ತಿದ್ದಾರೆ.

    ಪ್ಲಾಂಟ್ ನರ್ಸರಿ ಕೋರ್ಸ್: ಬಹಳಷ್ಟು ಕೃಷಿಕರು ಸಣ್ಣ ಪ್ರಮಾಣದಲ್ಲಿ ಆರಂಭಿಸಿರುವ ಪ್ಲಾಂಟ್ ನರ್ಸರಿ ಈಗ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತು ಅವರಿಗೆ ಲಕ್ಷದಿಂದ ಕೋಟ್ಯಂತರ ರೂಪಾಯಿ ವರಮಾನ ತಂದು ಕೊಡುತ್ತಿವೆ. ಅಷ್ಟೇ ಅಲ್ಲದೆ ಸಾಕಷ್ಟು ಕೃಷಿಕರು ತಾವೇ ನರ್ಸರಿಯಲ್ಲಿ ಬೆಳೆದ ಸಸಿಗಳನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ದೇಶದ ಹಿರಿಮೆಯಲ್ಲಿ ಪಾತ್ರರಾಗಿದ್ದಾರೆ. ಇಂತಹ ಹಲವಾರು ಜನರಿಂದ ಪ್ಲಾಂಟ್ ನರ್ಸರಿ ಆರಂಭಿಸಲು ಬೇಕಾದ ಅಗತ್ಯ ಮಾರ್ಗದರ್ಶನ ಫೈನಾನ್ಸಿಯಲ್ ಫ್ರೀಡಂ ಆಪ್ ಮುಖೇನ ನಿಮಗೆ ಸಿಗಲಿದೆ. ಅವರು ಯಾವ ರೀತಿಯಲ್ಲಿ ಬೀಜ ಸಂಗ್ರಹಣೆ ಮಾಡುತ್ತಾರೆ. ಯಾವ ಪ್ರಮಾಣದಲ್ಲಿ ಸಸಿಗಳಿಗೆ ನೀರುಣಿಸುತ್ತಾರೆ, ಗೊಬ್ಬರದ ಪ್ರಮಾಣ ಮತ್ತು ತಯಾರಿಕೆ ವಿಧಾನ, ಹೇಗೆ ಪ್ಲಾಂಟ್ ನರ್ಸರಿಯಲ್ಲಿ ಅವರು ಹೇಗೆ ಹೆಚ್ಚು ಗಳಿಸಲು ಸಾಧ್ಯವಾಯಿತು. ಉತ್ತಮ ಬೆಳೆಗೆ ಅವರು ಮಾಡೋದಾದರೂ ಏನು? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಈ ಮೆಂಟರ್ಸ್ ನಿಮಗೆ ಉತ್ತರ ಕೊಡುವ ಮೂಲಕ ಕೃಷಿ ಬಗ್ಗೆ ತಿಳಿಯದಿರುವವರು ಕೂಡ ಪ್ಲಾಂಟ್ ನರ್ಸರಿ ಆರಂಭಿಸಿ ಮತ್ತು ಅಭಿವೃದ್ಧಿಪಡಿಸಿ ಪ್ರಗತಿ ಹೊಂದುವ ಪರಿಯನ್ನು ವಿವರಿಸಲಿದ್ದಾರೆ. ಮತ್ತೇಕೆ ತಡ ಆದಷ್ಟು ಬೇಗ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ಅದರಲ್ಲಿರುವ ಪ್ಲಾಂಟ್ ನರ್ಸರಿ ಕೋರ್ಸ್ ಅನ್ನು ನೋಡಲಾರಂಭಿಸಿ. ನಿಮ್ಮ ಶ್ರೀಮಂತಿಕೆ ಪಯಣವನ್ನು ನಿಮ್ಮದೇ ಆದ ಉದ್ಯೋಗದೊಂದಿಗೆ ಆರಂಭ ಮಾಡಿ.

    ಪ್ಲಾಂಟ್ ನರ್ಸರಿ ಬಿಜಿನೆಸ್ ಕೋರ್ಸ್​ನಲ್ಲಿ ಏನೇನಿದೆ?
    • ಪ್ಲಾಂಟ್ ನರ್ಸರಿ ಬಿಜಿನೆಸ್ ಪರಿಚಯ
    • ಪ್ಲಾಂಟ್ ನರ್ಸರಿ ಬಿಜಿನೆಸ್ ಮೆಂಟರ್ಸ್ ಪರಿಚಯ
    • ಪ್ಲಾಂಟ್ ನರ್ಸರಿ ಬಿಜಿನೆಸ್ ಯಾಕೆ?
    • ಪ್ಲಾಂಟ್ ನರ್ಸರಿ ಬಿಜಿನೆಸ್ ಎಲ್ಲಿ ಆರಂಭಿಸಬೇಕು?
    • ವಿವಿಧ ಮಾದರಿ ನರ್ಸರಿಗಳ ಪರಿಚಯ
    • ಪ್ಲಾಂಟ್ ನರ್ಸರಿ ಬಿಜಿನೆಸ್ ಮೂಲಭೂತ ಅಗತ್ಯಗಳು
    • ಕಚ್ಚಾ ವಸ್ತುಗಳ ಖರೀದಿ, ತಂತ್ರಜ್ಞಾನ ಮತ್ತು ಮಾರಾಟ
    • ಪ್ಲಾಂಟ್ ನರ್ಸರಿ ಬಿಜಿನೆಸ್ ಬಂಡವಾಳ, ಹಣಕಾಸು ನಿರ್ವಹಣೆ ಮತ್ತು ನಗದು ಲಭ್ಯತೆ
    • ಪ್ಲಾಂಟ್ ನರ್ಸರಿ ಬಿಜಿನೆಸ್ ಲೈಸೆನ್ಸ್, ನೋಂದಣಿ , ಸರ್ಕಾರದ ಸವಲತ್ತು
    • ಪ್ಲಾಂಟ್ ನರ್ಸರಿ ಬಿಜಿನೆಸ್ ಗ್ರಾಹಕ ಸಂತೃಪ್ತಿ ಮತ್ತು ಮಾರುಕಟ್ಟೆ
    • ಪ್ಲಾಂಟ್ ನರ್ಸರಿ ಬಿಜಿನೆಸ್ ಪೈಪೋಟಿ, ಸುಸ್ಥಿರತೆ ಮತ್ತು ಬಂಡವಾಳ
    • ಪ್ಲಾಂಟ್ ನರ್ಸರಿ ಬಿಜಿನೆಸ್ ಸವಾಲು, ಭವಿಷ್ಯದ ನೋಟ
    ಪ್ಲಾಂಟ್ ನರ್ಸರಿ ಬಿಜಿನೆಸ್ ಕೋರ್ಸ್ ಮಾರ್ಗದರ್ಶಕರ ಪರಿಚಯ
    1. ಬಾಲರಾಜ್- ಕಾರ್ತಿಕ್ ಫಾರಂ ನರ್ಸರಿ
    2. ವೆಂಕಟೇಶಯ್ಯ – ಡೆಕ್ಕನ್ ನರ್ಸರಿ
    3. ವಿಕ್ಟರ್ ಪಾಲ್ ವಿಲಿಯಂ – ಹೈವೇ ನರ್ಸರಿ
    4. ಪ್ರಕಾಶ್- ಏಕಲವ್ಯ ನರ್ಸರಿ
    5. ಚನ್ನೇಗೌಡ – ಸೆಕ್ರೆಟರಿ – ನರ್ಸರಿ ಮೆನ್ ಕೋ-ಆಪರೇಟಿವ್
    6. ಆದರ್ಶ್- ಅವಿನಾಶ್ ಹೈಟೆಕ್ ನರ್ಸರಿ
    ನೀವೂ ಪ್ರಶ್ನೆ ಕೇಳಬಹುದು

    ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ. ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts