More

    ಸರ್ ಏನಾದ್ರೂ ಹೇಳ್ಕಳಿ, ಆರ್‌ಸಿಬಿಗೆ ಕಪ್ ಕೊಡ್ಸಿ; ಮೊಟ್ಟೆ ವಿವಾದದಿಂದ ಕೊಹ್ಲಿ ಮತ್ತೆ ಟ್ರೋಲ್!

    ಬೆಂಗಳೂರು: ಸಸ್ಯಾಹಾರಿಯಾಗಿದ್ದರೂ ಮೊಟ್ಟೆ ತಿನ್ನುವುದಾಗಿ ಹೇಳಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ‘ನಾನು ವೀಗನ್ ಅಲ್ಲ, ವೆಜಿಟೇರಿಯನ್’ ಎಂದು ಸ್ಪಷ್ಟನೆ ನೀಡಿದ್ದರೂ, ಕೆಲ ನೆಟ್ಟಿಗರು ಈಗಲೂ ಅವರ ವಾದವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ.

    ‘ಸರ್, ನೀವು ಏನೇ ಹೇಳಿ ಒಪ್ಪಿಕೊಳ್ಳುವೆವು. ಆದರೆ ದಯವಿಟ್ಟು ಆರ್‌ಸಿಬಿ ತಂಡಕ್ಕೆ ಕಪ್ ಗೆಲ್ಲಿಸಿಕೊಡಿ’ ಎಂದು ಆರ್‌ಸಿಬಿ ಅಭಿಮಾನಿಯೊಬ್ಬರು ಕೊಹ್ಲಿ ಕಾಲೆಳೆದಿದ್ದಾರೆ. ಇನ್ನು ಕೆಲವರು ಮೊಟ್ಟೆಯನ್ನು ಯಾವ ಮರದಲ್ಲಿ ಬೆಳೆಯಲಾಗುತ್ತದೆ ಎಂಬ ಪ್ರಶ್ನೆಯೊಂದಿಗೆ ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ. ಸಸ್ಯಾಹಾರಿಗಳಲ್ಲಿ ಇರುವ ವಿವಿಧ ಪ್ರಕಾರಗಳ ಬಗ್ಗೆ ಭಾರತೀಯರಿಗೆ ಇನ್ನೂ ಸಂಪೂರ್ಣ ಅರಿವಿಲ್ಲ ಎಂದು ಇನ್ನು ಕೆಲವರು ಕೊಹ್ಲಿ ಸಮರ್ಥನೆಗೂ ನಿಂತಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‌ಗೆ ಮಹತ್ವದ ಬದಲಾವಣೆಗಳನ್ನು ತಂದ ಐಸಿಸಿ

    ಇನ್ನು ಕೆಲವರು, ಮೊಟ್ಟೆ ತಿನ್ನುವವವರು ವೆಜಿಟೇರಿಯನ್ ಅಲ್ಲ, ಎಗ್‌ಟೇರಿಯನ್ ಎಂದು ತಮಾಷೆ ಮಾಡಿದ್ದಾರೆ. ಮೊಟ್ಟೆ ಹಾಕಿದ ಕೇಕ್ ಮಾತ್ರ ತಿನ್ನುವವರು, ‘ಕೇಕೇರಿಯನ್’ ಎಂದೂ ಹೇಳಿದ್ದಾರೆ. ಇದೇ ವೇಳೆ ರೋಹಿತ್ ಶರ್ಮ ಅವರನ್ನೂ ಈ ವಿಚಾರವಾಗಿ ಎಳೆದು ತಂದಿರುವ ಕೆಲವರು, ಹಾಗಾದರೆ ವಡಾಪಾವ್ ಇಷ್ಟಪಡುವ ರೋಹಿತ್ ಶರ್ಮರನ್ನು ‘ವಡಪವೇರಿಯನ್’ ಎಂದು ಕರೆದಿದ್ದಾರೆ.

    ನಾನೀಗ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರೂ, ಡಯೆಟ್‌ನಲ್ಲಿ ಮೊಟ್ಟೆ ತಿನ್ನುವುದಾಗಿ ಹೇಳುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಸೃಷ್ಟಿಸಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದು, ‘ನಾನು ವೀಗನ್ ಎಂಬುದಾಗಿ ಎಂದೂ ಹೇಳಿಕೊಂಡಿಲ್ಲ. ನಾನು ವೆಜಿಟೇರಿಯನ್ ಎಂದಷ್ಟೇ ಯಾವಾಗಲೂ ಹೇಳಿಕೊಂಡು ಬಂದಿರುವೆ. ದೊಡ್ಡ ಉಸಿರೊಂದನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಸ್ಯಾಹಾರವನ್ನು (ನೀವು ಬಯಸಿದರೆ) ತಿನ್ನಿ’ ಎಂದು ಮಂಗಳವಾರ ಟ್ವೀಟಿಸಿದ್ದರು. ಕೊಹ್ಲಿ ವಾದದ ಪ್ರಕಾರ ಮಾಂಸ, ಮೀನು, ಜೇನು, ಹಾಲು ಸಹಿತ ಡೈರಿ ಉತ್ಪನ್ನ ಮತ್ತು ಮೊಟ್ಟೆ ತಿನ್ನದವರು ವೀಗನ್ ಆಗಿದ್ದರೆ, ಮಾಂಸ-ಮೀನು ತಿನ್ನದವರು ವೆಜಿಟೇರಿಯನ್.

    ಮೊಟ್ಟೆ ತಿಂದರೂ ಸಸ್ಯಾಹಾರಿ: ವಿವಾದಕ್ಕೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts