More

    ಭಾರತದ ಆರ್ಥಿಕತೆಯಲ್ಲಿದೆ ಚೀನಾದ 3,95,811 ಕೋಟಿ ರೂ.!

    ನವದೆಹಲಿ: ಭಾರತ ಮತ್ತು ಚೀನಾ ನಡುವೆ ಲಡಾಖ್​ನ ಪೂರ್ವಭಾಗದಲ್ಲಿ 45 ವರ್ಷಗಳಲ್ಲಿ ಮೊದಲ ಬಾರಿಗೆ ರಕ್ತಸಿಕ್ತ ಘರ್ಷಣೆ ನಡೆದಿದೆ. ಇದರ ಬೆನ್ನಲ್ಲೇ ಚೀನಾದೊಂದಿಗಿನ ಆರ್ಥಿಕ ಸಂಬಂಧವನ್ನು ಕಡಿದುಕೊಳ್ಳುವ, ಆ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ದೇಶಾದ್ಯಂತ ಬಲವಾಗಿ ಎದ್ದಿದೆ. ಆದರೆ, ಗಡಿ ಭಾಗದ ವಿಷಯ ಜಟಿಲವಾಗಿದೆ ನಿಜ. ಆದರೆ, ಭಾರತದಲ್ಲಿನ ಚೀನಾದ ಹೂಡಿಕೆಯ ಲೆಕ್ಕಾಚಾರ ಅರ್ಥವಾಗದ ಮಟ್ಟಿಗೆ ಕಗ್ಗಂಟಾಗಿದೆ.

    ಮಧ್ಯಪ್ರಾಚ್ಯ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದನಾ ನಿಗ್ರಹ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದ ನಂತರದಲ್ಲಿ ಅಮೆರಿಕ ಆರ್ಥಿಕವಾಗಿ ದುರ್ಬಲಗೊಂಡಿತು. ಜತೆಗೆ 2008ರಲ್ಲಿನ ಜಾಗತಿಕ ಆರ್ಥಿಕ ಹಿನ್ನಡೆ ನಂತರದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಹೂಡಿಕೆಗಾಗಿ ಚೀನಾವನ್ನೇ ಹೆಚ್ಚು ಹೆಚ್ಚಾಗಿ ಅವಲಂಬಿಸಲಾರಂಭಿಸಿವೆ. ಇದಕ್ಕೆ ಕಾರಣ. ಹೀಗಾಗಿ ಚೀನಾ ಆರ್ಥಿಕವಾಗಿ ಬಲಾಢ್ಯವಾಗುತ್ತಾ ಸಾಗಿತು.

    ಈಗ ನಾವು ಭಾರತದಲ್ಲಿನ ಚೀನಾದ ಹೂಡಿಕೆ ಬಗ್ಗೆ ಗಮನಹರಿಸೋಣ. ನೇರ, ಪರೋಕ್ಷ ಮತ್ತು ಕಾರ್ಪೋರೇಟ್​ ಹೂಡಿಕೆಯ ಮಾರ್ಗಗಳಲ್ಲಿ ಚೀನಾದಿಂದ ಭಾರತಕ್ಕೆ ಹೂಡಿಕೆಗಳು ಬರುತ್ತವೆ. ಚೀನಾದ ನೇರ ವಿದೇಶಿ ಬಂಡವಾಳ ಹೂಡಿಕೆ 17,803.30 ಕೋಟಿ ರೂ. ಆಗಿದೆ. ಕೆಲವರ ಪ್ರಕಾರ ಚೀನಾದ ಒಟ್ಟಾರೆ ಹೂಡಿಕೆ 45,649.50 ಕೋಟಿ ರೂ. ಆಗಿದ್ದರೆ, ಹಲವರ ಪ್ರಕಾರ ಇದು 60,866 ಕೋಟಿ ರೂ. ಇರುವುದಾಗಿ ಹೇಳಲಾಗುತ್ತಿದೆ.

    ಇದನ್ನೂ ಓದಿ: ಭಾರತೀಯ ಯೋಧರ ಶವಗಳ ತಲೆಕಡಿದು ವಿಕೃತಿ, ಲಡಾಖ್​ನಲ್ಲಿ ಉದ್ವಿಗ್ನ ಪರಿಸ್ಥಿತಿ

    ಇದರ ಜತೆಗೆ ಚೀನಾದ ಪ್ರವಾಸಿಗರಿಂದ ಭಾರತಕ್ಕೆ 4,184.53 ಕೋಟಿ ರೂ. ವಿದೇಶಿ ವಿನಿಮಯದ ಹರಿವು ಇದೆ.
    ಭಾರತೀಯ ನವೋದ್ಯಮಗಳಲ್ಲಿ ಚೀನಾದ ಹೂಡಿಕೆ ತುಂಬಾ ಹೆಚ್ಚಾಗಿದೆ. ಆಲಿಬಾಬಾ, ಶಒಮಿ, ಟೆನ್​ಸೆಂಟ್​, ಚೀನಾ-ಯುರೇಷಿಯಾ ಆರ್ಥಿಕ ಸಹಕಾರ ನಿಧಿ, ಡಿಡಿ ಚ್ಯುಕ್ಸಿಂಗ್​, ಶನ್​ವೈ ಕ್ಯಾಪಿಟಲ್​ ಮತ್ತು ಫೋಸನ್​ ಕ್ಯಾಪಿಟಲ್​ ಸೇರಿ ಚೀನಾದ ಹಲವು ಪ್ರತಿಷ್ಠಿತ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ.

    ಪೇಟಿಎಂ, ಒಲಾ, ಸ್ನ್ಯಾಪ್​ಡೀಲ್​ ಮತ್ತು ಸ್ವಿಗ್ಗಿ ಸೇರಿ ಭಾರತದ ಹಲವು ಜನಪ್ರಿಯ ನವೋದ್ಯಮಗಳು ಚೀನಾದ ಕಂಪನಿಗಳಿಂದ ಹೂಡಿಕೆ ಪಡೆದುಕೊಂಡಿವೆ. ಆಲಿಬಾಬಾ ಪೇಟಿಎಂನಲ್ಲಿ ಹೂಡಿಕೆ ಮಾಡಿದ್ದರೆ, ಚೀನಾ-ಯುರೇಷಿಯಾ ಆರ್ಥಿಕ ಸಹಕಾರ ನಿಧಿ ಮತ್ತು ಡಿಡಿ ಚ್ಯುಕ್ಸಿಂಗ್​ ಒಲಾದಲ್ಲಿ ಹಣ ತೊಡಗಿಸಿವೆ.

    ಭಾರತೀಯ ನವೋದ್ಯಮದಲ್ಲಿ ಒಟ್ಟಾರೆ ಚೀನಾದ ಹೂಡಿಕೆ 41,845.37 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸ್ಮಾರ್ಟ್​ಫೋನ್​ಗಳ ವಲಯದಲ್ಲಿ ಶಒಮಿ ಮೂಲಕ ಚೀನಾದ ಸಂಸ್ಥೆಗಳು ಶೇ.75 ಷೇರುಗಳನ್ನು ಹೊಂದಿವೆ. ಮತ್ತು ವಿವೋ ಕಂಪನಿಯಲ್ಲಿ ಶೇ.50 ಹೂಡಿಕೆ ಹೊಂದಿವೆ.

    ಇದನ್ನೂ ಓದಿ: ಸೋಮವಾರದ ಘರ್ಷಣೆ ವೇಳೆ ಭಾರತೀಯ ಯೋಧರ ಬಳಿ ಶಸ್ತ್ರಾಸ್ತ್ರಗಳಿದ್ದವು

    ಇನ್ನು ದ್ವಿಪಕ್ಷೀಯ ವಾಣಿಜ್ಯ-ವಹಿವಾಟಿಗೆ ಬಂದರೆ ಇಲ್ಲಿಯೂ ಕೂಡ ಚೀನಾದ್ದೇ ಮೇಲುಗೈ. ಈ ವಿಭಾಗದಲ್ಲಿ ಚೀನಾವನ್ನು ಹಿಂದಿಕ್ಕುವ ರೇಸ್​ನಲ್ಲಿ ಭಾರತ ಇತ್ತೀಚೆಗೆ ವೇಗ ಪಡೆದುಕೊಳ್ಳುತ್ತಿದೆ. ಆದರೂ ಕ್ರಮಿಸಬೇಕಾದ ಅಂತರ ತುಂಬಾ ಇದೆ.
    2000ನೇ ಸಾಲಿನಲ್ಲಿ ಭಾರತ ಮತ್ತು ಚೀನಾದ ಒಟ್ಟಾರೆ ವಾಣಿಜ್ಯ ವಹಿವಾಟು 22,831.57 ಕೋಟಿ ರೂ. ಇತ್ತು. 2018ರ ವೇಳೆಗೆ ಇದು 7,27,109.55 ಕೋಟಿ ರೂ.ಗೆ ತಲುಪಿದೆ.

    2018ರಲ್ಲಿ ಚೀನಾದೊಂದಿಗಿನ ಭಾರತದ ವಾಣಿಜ್ಯ ಕೊರತೆ 4,40,401.39 ಕೋಟಿ ರೂ. ಇತ್ತು. 2019ರಲ್ಲಿ ಭಾರತಕ್ಕೆ ಚೀನಾ 5,17,282 ಕೋಟಿ ರೂ.ನಷ್ಟು ವಸ್ತುಗಳನ್ನು ರಫ್ತು ಮಾಡಿದ್ದರೆ, 1,24,219.68 ಕೋಟಿ ರೂ.ನಷ್ಟು ಆಮದು ಮಾಡಿಕೊಂಡಿದೆ. ಇದರರ್ಥದಲ್ಲಿ ಈ ಸಾಲಿನಲ್ಲಿ ಚೀನಾದೊಂದಿಗೆ ವಾಣಿಜ್ಯ ಕೊರತೆ 3,95,811 ಕೋಟಿ ರೂ. ಆಗಿದೆ. ಅಂದರೆ, ಚೀನಾದ 3,95,811 ಕೋಟಿ ರೂ.ನಷ್ಟು ಆರ್ಥಿಕತೆಯನ್ನು ಭಾರತ ಅವಲಂಬಿಸಿದೆ ಎಂದು ಹೇಳಬಹುದಾಗಿದೆ.

    2016ರಿಂದ 2019ರವರೆಗೆ ಭಾರತದಿಂದ ಚೀನಾಕ್ಕೆ ರಫ್ತು ಪ್ರಮಾಣದಲ್ಲಿ ಶೇ.23 ಸುಧಾರಣೆಯಾಗಿದೆ. ಆ ರಾಷ್ಟ್ರದಿಂದ ಭಾರತಕ್ಕೆ ಆಂದು ಪ್ರಮಾಣ ಇದೇ ಅವಧಿಯಲ್ಲಿ ಶೇ.4.5 ವೃದ್ಧಿ ಕಂಡಿದೆ. ಆದರೆ, 5ಜಿ ತಂತ್ರಜ್ಞಾನ ಬಳಕೆಗೆ ಬಂದ ನಂತರದಲ್ಲಿ ಈ ಪ್ರಮಾಣ ಮತ್ತಷ್ಟು ವೃದ್ಧಿ ಕಾಣುವ ಸಾಧ್ಯತೆ ದಟ್ಟವಾಗಿದೆ.

    ಭವಿಷ್ಯದ ಆಡಳಿತ ಮತ್ತು ವಾಣಿಜ್ಯ-ವಹಿವಾಟಿನಲ್ಲಿ 5ಜಿ ತಂತ್ರಜ್ಞಾನ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಳ್ಳುವ ಸಾಧ್ಯತೆ ಇದೆ. ಈ ಕ್ಷೇತ್ರಕ್ಕೆ ಚೀನಾ ಪ್ರವೇಶಿಸಿತು ಎಂದಾದರೆ, ಗಡಿ ಗಲಾಟೆ ಹೊರತಾಗಿ ಚೀನಾದೊಂದಿಗೆ ವಾಣಿಜ್ಯ-ವಹಿವಾಟು ನಿರ್ಬಂಧಿಸುವ ಕುರಿತ ತನ್ನ ನಿರ್ಧಾರವನ್ನು ಭಾರತ ಮರುಪರಿಶೀಲಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು.

    ಚೀನಾ ಜಾಹೀರಾತು ಬಿಡಿ, ಯೋಧರನ್ನು ಗೌರವಿಸಿ: ಅಭಿಯಾನಕ್ಕೆ ತಾರೆಯರಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts