More

    ಚೀನಾ ಜಾಹೀರಾತು ಬಿಡಿ, ಯೋಧರನ್ನು ಗೌರವಿಸಿ: ಅಭಿಯಾನಕ್ಕೆ ತಾರೆಯರಿಗೆ ಆಹ್ವಾನ

    ನವದೆಹಲಿ: ಇಡೀ ವಿಶ್ವಕ್ಕೆ ವೈರಸ್​ ಕೊಟ್ಟು ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ ಇದೀಗ ಭಾರತದ ವಿರುದ್ಧ ಘರ್ಷಣೆಗೆ ಇಳಿದು ಭಾರತೀಯರ ವಿರೋಧ ಕಟ್ಟಿಕೊಂಡಿದೆ. ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಇದಾಗಲೇ ಸಣ್ಣದಾಗಿ ಶುರುವಾಗಿ ಅಭಿಯಾನಕ್ಕೆ ಈ ಘರ್ಷಣೆ ನಡೆಸುವ ಮೂಲಕ ಇನ್ನಷ್ಟು ಉತ್ತೇಜನ ನೀಡಿದೆ.

    ಇದಾಗಲೇ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಸಲುವಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದೆ. ”ಭಾರತೀಯ ಸಾಮಾನ್​ ಹಮಾರಾ ಅಭಿಮಾನ್​’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ಸಿಎಐಟಿ, ಬಾಲಿವುಡ್ ನಟ-ನಟಿಯರನ್ನು, ಕ್ರೀಡಾ ಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಕೇಳಿಕೊಂಡಿದೆ.

    ಈ ಕುರಿತು ಭಾರತೀಯ ಸೆಲೆಬ್ರಿಟಿಗಳನ್ನು ಉದ್ದೇಶಿಸಿ ಮುಕ್ತ ಪತ್ರವೊಂದನ್ನು ಅದು ಬರೆದಿದೆ. ಚೀನಾದ ವಿವಿಧ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೀರ್ ಖಾನ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ವಿರಾಟ್ ಕೊಹ್ಲಿ, ಅಮಿತಾಭ್​ ಬಚ್ಚನ್​, ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಮಹೇಂದರ್ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನೂ ಅನೇಕರಿಗೆ ಪತ್ರ ಬರೆದಿರುವ ಸಿಎಐಟಿ, ಇದರಲ್ಲಿ ಭಾಗವಹಿಸದಂತೆ ಕೇಳಿಕೊಂಡಿದೆ.

    ಇದನ್ನೂ ಓದಿ: ಚೀನಾ ವಸ್ತು ಬಹಿಷ್ಕಾರಕ್ಕೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಸಿದ್ಧತೆ

    ಅಮೀರ್ ಖಾನ್, ಸಾರಾ ಅಲಿ ಖಾನ್, ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಬಾದ್‌ಶಾ, ಸಿದ್ಧಾರ್ಥ್ ಮಲ್ಹೋತ್ರಾ, ರಣಬೀರ್ ಕಪೂರ್, ರಣವೀರ್ ಸಿಂಗ್, ಸಲ್ಮಾನ್ ಅವರೇ, ಭಾರತೀಯ ಸೈನಿಕರ ಗೌರವದ ಸಂಕೇತವಾಗಿ ಈ ಬ್ರ್ಯಾಂಡ್‌ಗಳನ್ನು ಅನುಮೋದಿಸುವುದನ್ನು ನಿಲ್ಲಿಸಿ ಎಂದು ಕೇಳಿದೆ. ಅಷ್ಟೇ ಅಲ್ಲದೇ ಚೀನಾದ ಉತ್ಪನ್ನವನ್ನು ಅನುಮೋದಿಸುತ್ತಿರುವ ಆಯುಷ್ಮಾನ್ ಖುರಾನಾ, ಶ್ರದ್ಧಾ ಕಪೂರ್ ಸೇರಿದಂತೆ ಇತರರನ್ನು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಅದು ಕರೆ ನೀಡಿದೆ.

    ಈ ಆಕ್ರಮಣವನ್ನು ಖಂಡಿಸಿ ಇದೀಗ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಚೀನಾದ ಸರಕುಗಳನ್ನು ಬಹಿಷ್ಕರಿಸಲು ಸಿದ್ಧತೆ ನಡೆಸಿದ್ದು, ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ 450 ವಸ್ತುಗಳನ್ನು ಪಟ್ಟಿ ಮಾಡಿದೆ.

    ಮೊದಲ ಹಂತವಾಗಿ 2021ರ ಡಿಸೆಂಬರ್​ ಅಂತ್ಯದ ವೇಳೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ಸರಕುಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಸಿಎಐಟಿ ಕರೆಕೊಟ್ಟಿದೆ. ಪ್ರಸ್ತುತ, ಭಾರತವು ಚೀನಾದಿಂದ ವಾರ್ಷಿಕವಾಗಿ ಸುಮಾರು 5.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮೌಲ್ಯವನ್ನು ಕ್ರಮಕ್ರಮವಾಗಿ ಕಡಿಮೆ ಮಾಡುತ್ತಾ ಬರಬೇಕಿದೆ ಎಂದು ಅದು ಹೇಳಿದೆ.

    ಮೂವರು ಶಾಸಕರ ರಾಜೀನಾಮೆ​: ಮಣಿಪುರದಲ್ಲಿ ಬಿಜೆಪಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts