More

    ಮಂಗಳೂರಿಗೆ ಡ್ರಗ್ಸ್​ ಕಂಟಕ, ಮಲನಾದಿಂದ ಬರುವ ಗಾಂಜಾಗೆ ಯುವಜನತೆ&ವಿದ್ಯಾರ್ಥಿಗಳೇ ಟಾರ್ಗೆಟ್​, ಪ್ರತಿವರ್ಷ 200ಕ್ಕೂ ಅಧಿಕ ಪ್ರಕರಣ ದಾಖಲು

    ಶ್ರವಣ್​ಕುಮಾರ್​ ನಾಳ, ಮಂಗಳೂರು

    ಶಿಕ್ಷಣಕಾಶಿ, ಕಡಲನಗರಿ, ಬದರುನಗರಿ ಎಂಬ ಬಿರುದು ಪಡೆದು ದೇಶದ ವಿಶಿಷ್ಠ ನಗರವಾಗಿರುವ ಮಂಗಳೂರಿಗೆ ಡ್ರಗ್ಸ್​ ಕಂಟಕ ಎದುರಾಗಿದ್ದು, ಮಾದಕ ವಸ್ತುಗಳ ಸಾಗಾಟ, ಮಾರಾಟಕಕ್ಕೆ ಕಡಿವಾಣ ಬಿದ್ದಿಲ್ಲ.

    ಮಾರಕವಾಗಿರುವ ಎಂಡಿಎಂಎ, ಎಲ್​ಎಸ್​ಡಿ, ಕೊಕೇನ್​ನಂತಹ ಸಿಂಥೆಟಿಕ್​ ಡ್ರಗ್ಸ್​ಗಳು ಕೂಡಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಪೂರೈಕೆ ಮಾಡಲಾಗುತ್ತಿದೆ. ಶಾಲಾ ಕಾಲೇಜು ವ್ಯಾಪ್ತಿಯ ಗೂಡಂಗಡಿಗಳು, ಅಂಗಡಿಗಳು ಡ್ರಗ್ಸ್​ನ ಅಡ್ಡೆಗಳಾಗಿ ಮಾರ್ಪಾಡಾಗುತ್ತಿವೆ. ಆರಂಭದಲ್ಲಿ ಶೋಕಿಗೆಂದು ಸೇವನೆ ಆರಂಭಿಸುವ ವಿದ್ಯಾರ್ಥಿಗಳು ಬರಬರುತ್ತಾ ಡ್ರಗ್ಸ್​ ದಾಸರಾಗುತ್ತಿದ್ದಾರೆ. ಮಂಗಳೂರು ಹಾಗೂ ಬೆಂಗಳೂರಿಗೆ ಬರುವ ಗಾಂಜಾ ಹಾಗೂ ಗಾಂಜಾ ಮೌಲ್ಯವರ್ಧಿತ ಅಮಲು ಉತ್ಪನ್ನಗಳ ಮೂಲ ಹಿಮಾಚಲ ಪ್ರದೇಶದ ಮಲನಾ ಗ್ರಾಮ.

    *ವಿದ್ಯಾರ್ಥಿಗಳೇ ಟಾರ್ಗೆಟ್​ !

    ನಗರದ ಹಲವಡೆ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಗಾಂಜಾ ಮೌಲ್ಯವರ್ಧಿತ ಅಮಲು ಉತ್ಪನ್ನ, ಮಾದಕ ವಸ್ತು, ಎಂಡಿಎಂ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಕೂಡ ಪತ್ತೆಯಾದ ಪ್ರಕರಣಗಳಲ್ಲಿ ಹೆಚ್ಚಿನ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದುದನ್ನು ಬಹುತೇಕ ಆರೋಪಿಗಳು ಒಪ್ಪಿಕೊಂಡಿದ್ದರು. ಇದು ಮತ್ತೆ ಮುಂದುವರಿಯುತ್ತಿದೆ. ಪೊಲೀಸರ ಕಣ್ಣು ತಪ್ಪಿಸಿ ವ್ಯವಹಾರ ನಡೆಯುತ್ತಲೇ ಇದೆ. ಬಹುತೇಕ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು, ಯುವಜನತೆಯೇ ಡ್ರಗ್​ ಪೆಡ್ಲರ್​ಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಆತಂಕ ಹೆಚ್ಚಿಸಿದೆ.

    *ಡ್ರಗ್ಸ್​ ಮಾರಾಟವೇ ಹಲವರ ವೃತ್ತಿ

    ಬಹುತೇಕರಿಗೆ ಮಾದಕ ವಸ್ತುಗಳ ಮಾರಾಟವೇ ವೃತ್ತಿ. ಮೇ1 ರಂದು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂ-ಸಿದ್ದು, ಅವರಿಂದ ಬರೋಬ್ಬರಿ 16,13,800 ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಬಸ್ತಿಪಡ್ಪುನವಿನ  ಮೊಹಮ್ಮದ್​ ಇಶಾನ್​(35) ಮತ್ತು ಉಳ್ಳಾಲ ಅಕ್ಕರೆಕೆರೆ ನಿವಾಸಿ ಜಾರ್​ ಸಾ-ಕ್​(35) ಬಂ-ತರು. ಇವರು ಡ್ರಗ್ಸ್​ ಮಾರಾಟವನ್ನೇ ವೃತ್ತಿಯಾಗಿಸಿದ್ದರು. ಇತ್ತೀಚೆಗೆ ವೆನ್ಲಾಕ್​ ಆಸ್ಪತ್ರೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಡ್ರಗ್ಸ್​ ಪ್ರಕರಣದ ವಿಚಾರಣಾಧೀನ ಕೈದಿ ಕಾಸರಗೋಡು ಮಂಜೇಶ್ವರದ ಮಹಮ್ಮದ್​ ನೌಫಾಲ್​ (26) ಕೂಡ ಡ್ರಗ್ಸ್​ ಮಾರಾಟವೇ ವೃತ್ತಿಯಾಗಿಸಿದ್ದರು. ಇಂತಹ ಸುಮಾರು 280ಕ್ಕೂ ಅಧಿಕ ಡ್ರಗ್ಸ್​ ಪೆಡ್ಲರ್​ಗಳು ಇದ್ದಾರೆ.

    ಪ್ರತಿವರ್ಷ 200ಕ್ಕೂ ಅ-ಧಿಕ ಪ್ರಕರಣ

    ಪ್ರತಿ ವರ್ಷ 200ಕ್ಕೂ ಅ-ಧಿಕ ಮಾದಕ ದ್ರವ್ಯ ಪತ್ತೆ ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿರುವುದನ್ನು ಅಂಕಿ ಅಂಶಗಳು ದೃಢಪಡಿಸುತ್ತವೆ. ಮಾದಕ ವಸ್ತು ಸಾಗಾಟ ಮತ್ತು ಪೂರೈಕೆ ಪ್ರಕರಣಕ್ಕೆ ಸಂಬಂ-ಸಿದಂತೆ ಮಂಗಳೂರು ನಗರದಲ್ಲಿ 2023ರಲ್ಲಿ 200ರಷ್ಟು ಪ್ರಕರಣಗಳು ಪತ್ತೆಯಾಗಿದ್ದವು. 2022ರಲ್ಲಿ 397 ಮತ್ತು 2021ರಲ್ಲಿ 328 ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ ಮಂಗಳೂರು ಪೊಲೀಸರು ಅಕ್ರಮ ಡ್ರಗ್ಸ್​ ಸಾಗಾಟ, ಪೂರೈಕೆಗೆ ಸಂಬಂ-ಸಿ 189 ಪ್ರಕರಣಗಳು ದಾಖಲಾಗಿದ್ದವು.

    ಗಾಂಜಾದ ಮೂಲ ಹಿಮಾಚಲದ ಮಲನಾ

    ಪ್ರಪಂಚದ ಮೂಲೆ ಮೂಲೆಗೂ ಗಾಂಜಾ ಮೌಲ್ಯವರ್ಧಿತ ಅಮಲು ಉತ್ಪನ್ನ ಸರಬರಾಜು ಆಗುವುದು ಹಿಮಾಚಲ ಪ್ರದೇಶದ ಮಲನಾ ಗ್ರಾಮದಿಂದ. ಮಂಗಳೂರಿಗೂ ಬರುವ ಗಾಂಜಾ ಕೂಡ ಮಲನಾ ಮೂಲದ್ದೆ. ಇದರಲ್ಲಿ ಕಿಕ್​ ಮತ್ತು ಟೇಸ್ಟ್​ ಜಾಸ್ತಿ. ಮಾತ್ರವಲ್ಲದೆ ಸುಲಭವಾಗಿ ಮಲನಾ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮಲಾನಾ ಪ್ರತದೇಶವು ಗಾಂಜಾದಿಂದ ಸಿದ್ದವಾಗುವ ಮಲಾನಾ ಕ್ರೀಮ್​ಗೆ ಹೆಸರುವಾಸಿ. ಮಲಾನಾ ಕ್ರೀಮ್​ ಅನ್ನು ಗಾಂಜಾದ ಹೆಚ್ಚಿನ ಶುದ್ಧತೆಯ ಹ್ಯಾಶ್​ ಎಂದು ಪರಿಗಣಿಸಲಾಗುತ್ತದೆ. ಮಲಾನಾ ಕ್ರೀಮ್​ ತಯಾರಿಸುವ ಸಲುವಾಗಿ ಲೈವ್​ ಗಾಂಜಾ ಹೂವನ್ನು ಕೈಗಳ ನಡುವೆ ಪದೇ ಪದೇ ಉಜ್ಜಿ ರಾಳವನ್ನು ಹೊರತೆಗೆದು ಅಂಗೈಯಲ್ಲಿ ಜಿಗುಟಾದ ಹ್ಯಾಶಿಶ್​ ಪದರ ಉತ್ಪಾದಿಸಲಾಗುತ್ತದೆ. ಸರ್ಕಾರದ ನಿಷೇದವಿದ್ದರೂ ಇಲ್ಲಿನ ಭೂ ಭಾಗದ ಶೇ.25ರಷ್ಟು ವಾರ್ಷಿಕ ಗಾಂಜಾ ಬೆಳೆಯಲಾಗುತ್ತಿದ್ದು, ಮಲನಾ ಕ್ರೀಮ್​ ಹಾಗೂ ಗಾಂಜಾ ಇಲ್ಲಿಂದ ಎಲ್ಲೆಡೆ ಪೂರೈಕೆಯಾಗುತ್ತದೆ.

    ಶಾಲಾ ಕಾಲೇಜು ಸುತ್ತಮುತ್ತ ಡ್ರಗ್ಸ್​ ಮಾರಾಟ, ಸೇವನೆ ಬಗ್ಗೆ ನಿಗಾ ಇರಿಸಲಾಗಿದೆ. ಮಾದಕ ವಸ್ತುಗಳಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಬಾರಿ ಪ್ರಕರಣಗಳೂ ಕಡಿಮೆಯಾಗುತ್ತಿದೆ.

    ಶ್ಯಾಮ್​ಸುಂದರ್​, ಪೊಲೀಸ್​ ನಿರೀಕ್ಷಕರು

    ಸೈಬರ್​ ಎಕನಾಮಿಕ್​ ಮತ್ತು ನಾರ್ಕೊಟಿಕ್ಸ್​ ಕೆಂ ಪೊಲೀಸ್​ ಠಾಣೆ& ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts