More

    ಬಾಲಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬೈಕ್​ ಸವಾರರ ಪತ್ತೆಗೆ ನೆರವಾಯ್ತು ಫೇಸ್​ಬುಕ್​ ಪೋಸ್ಟ್​!

    ಹೈದರಾಬಾದ್​: ಜನವರಿ 24ರಂದು ಹೈದರಾಬಾದ್​ನ ಬಲ್ಕಂಪೇಟೆಯಲ್ಲಿರುವ ಯಲ್ಲಮ್ಮ ದೇವಸ್ಥಾನದ ಬಳಿ ಬೈಕ್​ನಲ್ಲಿ ವೇಗವಾಗಿ ಬಂದ ಮೂವರು ಹುಡುಗರು ಪುಟ್ಟ ಬಾಲಕಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಕಾಲ್ಕಿತ್ತಿದ್ದರು. ಬಾಲಕಿಯ ಕಾಲಿಗೆ ಗಂಭೀರವಾದ ಗಾಯವಾಗಿತ್ತು. ಆದರೆ, ಆರೋಪಿಗಳ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದೀಗ ನೆಟ್ಟಿಗರ ಸಹಾಯದಿಂದ ಘಟನೆ ನಡೆದ 13 ದಿನಗಳ ಬಳಿಕ ಹಿಟ್​ ಆ್ಯಂಡ್​ ರನ್​ ಮಾಡಿದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರಂಭದಲ್ಲಿ ಪೊಲೀಸ್​ ತನಿಖೆ ತುಂಬಾ ಕಷ್ಟವಾಯಿತು. ಎಸ್​ಆರ್​ ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ದುರಾದೃಷ್ಟವಶಾತ್​ ವಾಹನದ ನಂಬರ್​ ಪ್ಲೇಟ್​ ಅನ್ನು ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಸೆರೆಹಿಡಿದಿರಲಿಲ್ಲ. ಹೀಗಾಗಿ ಪ್ರಕರಣ ಭೇದಿಸಲು ಮತ್ತಷ್ಟು ಕಗ್ಗಾಂಟಾಯಿತು.

    ಇದನ್ನೂ ಓದಿರಿ: VIDEO| ಪಿಟ್ಟ ಕಥಲು ಟ್ರೈಲರ್ ಬಿಡುಗಡೆ: ಮತ್ತೆ ವೈರಲ್​ ಆಯ್ತು ಶ್ರುತಿ ಹಾಸನ್​-ಸಂಜಿತ್ ಹೆಗ್ಡೆ ಬೋಲ್ಡ್​ ದೃಶ್ಯ!

    ಇದಾದ ಬಳಿಕ ಏನಾದರೂ ಸುಳಿವು ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಆರೋಪಿಗಳ ಫೋಟೋವನ್ನು ಎಸ್​ಆರ್​ ನಗರ ಪೊಲೀಸರು ಫೇಸ್​ಬುಕ್​ ಮತ್ತು ವಾಟ್ಸ್​ಆ್ಯಪ್​ನಂತಹ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಪೋಸ್ಟ್​ ಮಾಡಿದರು. ನಿರ್ಲಕ್ಷ್ಯ ಮತ್ತು ವೇಗದ ಚಾಲನೆ ಮಾಡಿ ಬಲ್ಕಂಪೇಟೆಯಲ್ಲಿ ಪುಟ್ಟ ಬಾಲಕಿಗೆ ಡಿಕ್ಕಿ ಹೊಡೆದು ಆಕೆಯ ಕಾಲಿಗೆ ಗಾಯ ಮಾಡಿರುವ ಆರೋಪಿಗಳ ಗುರುತನ್ನು ದಯವಿಟ್ಟು ಪತ್ತೆ ಹಚ್ಚಿ. ಗೊತ್ತಾದಲ್ಲಿ ಎಸ್​ಆರ್​ ನಗರ ಪೊಲೀಸರಿಗೆ ತಿಳಿಸಿ ಎಂದು ಮನವಿ ಮಾಡಿದ್ದರು.

    ಇದನ್ನು ನೋಡಿ ಮಾಹಿತಿದಾರರು ಮತ್ತು ನೆಟ್ಟಿಗರು ಮೂವರು ಆರೋಪಿಗಳನ್ನು ಪತ್ತೆಹಚ್ಚಿ, ಅವರು ಎಲ್ಲಿರುತ್ತಾರೆಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಈ ಬಗ್ಗೆ ಮಾತನಾಡಿರುವ ಸಬ್​ ಇನ್ಸ್​ಪೆಕ್ಟರ್​ ಭಾಸ್ಕರ್​ ರಾವ್​, ಫೋಟೋಗಳನ್ನು ನಮ್ಮ ಮಾಹಿತಿದಾರರಿಗೆ ಕಳುಹಿಸಿದೆವು ಮತ್ತು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದೆವು. ರೆಹಮತ್​ ನಗರದ ನಿವಾಸಿಯೊಬ್ಬರು ಮೂವರು ಆರೋಪಿಗಳನ್ನು ಪತ್ತೆಹಚ್ಚಿದರು. ಮೂವರು ಸಹ ಅಪ್ರಾಪ್ತರು ಎಂದು ತಿಳಿಸಿದ್ದಾರೆ.

    ಸಾಕ್ಷ್ಯಾಧಾರ ಮೇಲೆ ಫೆ. 6ರಂದು ಆರೋಪಿಗಳನ್ನು ನಮ್ಮ ವಶಕ್ಕೆ ಪಡೆದುಕೊಂಡಿದ್ದೇವೆ. ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಬ್​ ಇನ್ಸ್​ಪೆಕ್ಟರ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಲೈವ್​ನಲ್ಲಿ ಬೆತ್ತಲಾದ 14ರ ಬಾಲಕಿ: ಪ್ರಕರಣ ಬೆನ್ನತ್ತಿದ ಪೊಲೀಸರು, ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!

    ಹಾಸ್ಯ ಮತ್ತು ಭಾವುಕತೆಯ ರಜಾದಿನ; ಮಂಗಳವಾರ ರಜಾದಿನ ಸಿನಿಮಾ ವಿಮರ್ಶೆ

    ದೇವರಿಗೂ ನನ್ನ ಹಿಡಿಯಲು ಸಾಧ್ಯವಿಲ್ಲ, ಪೊಲೀಸರಂತೂ ಮರೆತೇ ಬಿಡಿ ಎಂದ ರೌಡಿಶೀಟರ್​ ಸಿಕ್ಕಿಬಿದ್ದಿದ್ದೆ ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts