More

    ಹಾಸ್ಟೆಲ್ ಹುಡುಗರ ಕಥೆ-ವ್ಯಥೆ; ಶೀರ್ಷಿಕೆ ಅನಾವರಣ.. ಪೋಸ್ಟರ್ ಬಿಡುಗಡೆ…

    ಬೆಂಗಳೂರು: ಕೆಲವೇ ದಿನಗಳ ಹಿಂದೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸೋಷಿಯಲ್ ಮೀಡಿಯಾ ಮೂಲಕ ಹೊಸ ಚಿತ್ರವೊಂದರ ವಿಡಿಯೋ ಹಂಚಿಕೊಂಡಿದ್ದರು. ‘ಭಾರತೀಯ ಚಿತ್ರರಂಗದಲ್ಲೇ ನಿರ್ಮಾಣವಾದ ಅತ್ಯಂತ ಕೆಟ್ಟ ಚಿತ್ರ …’ ಎಂಬ ಘೋಷವಾಕ್ಯದೊಂದಿಗೆ ಬಿಡುಗಡೆಯಾದ ಈ ವಿಡಿಯೋ, ಹೊಸ ಚಿತ್ರವೊಂದರ ಶೀರ್ಷಿಕೆ ಅನಾವರಣ ಮತ್ತು ಪೋಸ್ಟರ್ ಬಿಡುಗಡೆಯ ಕುರಿತದ್ದಾಗಿತ್ತು. ರವಿವರ್ಮರ ಚಿತ್ರಗಳು ಮಾತನಾಡುವ ಹಾಗೆ ರೂಪಿಸಲಾಗಿದ್ದ ಈ ವಿಡಿಯೋ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಹೆಸರು ಅನಾವರಣಗೊಂಡಿದೆ. ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಬೆನ್ನು ತಟ್ಟಿ ಕಳುಹಿಸಿದ ಈ ಚಿತ್ರದ ಹೆಸರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’.

    ಹೆಸರು ಕೇಳಿದಾಕ್ಷಣ ಇದೊಂದು ಪಕ್ಕಾ ಯೂಥ್​ಫುಲ್ ಚಿತ್ರ ಎಂದೆನಿಸಬಹುದು. ಅದು ನಿಜ. ‘ಎಕ್ಸಾಮ್ ಹಿಂದಿನ ದಿನ ಕಾಲೇಜಿನ ಹಾಸ್ಟೆಲ್​ವೊಂದರಲ್ಲಿ ಏನೆಲ್ಲ ಆಗುತ್ತದೆ’ ಎಂಬುದೇ ಚಿತ್ರದ ಕಥೆ’ ಎಂದು ಹೇಳುತ್ತಾರೆ ನಿರ್ಮಾಪಕ ವರುಣ್ ಕುಮಾರ್. ಈ ಚಿತ್ರವನ್ನು ಅವರು ವರುಣ್ ಸ್ಟುಡಿಯೋಸ್ ಮತ್ತು ಗುಲ್​ವೋಹರ್ ಫಿಲಂಸ್ ಜತೆಯಾಗಿ ನಿರ್ವಿುಸುತ್ತಿದೆ. ನಿರ್ವಣದಲ್ಲಿ ವರುಣ್​ಗೆ ಅವರ ಮೂವರು ಸ್ನೇಹಿತರು ಜತೆಯಾಗಿದ್ದಾರೆ. ನಿತಿನ್ ಕೃಷ್ಣಮೂರ್ತಿ ಎನ್ನುವವರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಹುತೇಕ ಹೊಸಬರೇ ಇದ್ದಾರಂತೆ. ರಾಜ್ಯಾದ್ಯಂತ ಆರು ಸಾವಿರಕ್ಕೂ ಹೆಚ್ಚು ಜನರ ಆಡಿಷನ್ ಮಾಡಿ, ಆ ಪೈಕಿ 35 ಜನರನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆಯಂತೆ. ಈಗಾಗಲೇ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಶೇ. 75ರಷ್ಟು ಚಿತ್ರೀಕರಣವಾಗಿದೆ.

    ಕೆಜಿಎಫ್​ 2 ಬಿಡುಗಡೆಗೆ ಮುಹೂರ್ತ ಫಿಕ್ಸ್​! ಈ ದಿನದಂದು ಬಂದು ಅಬ್ಬರಿಸಲಿದ್ದಾನೆ ರಾಕಿಭಾಯ್​!

    ಟಾಲಿವುಡ್​ ವಿರುದ್ಧ ಸಿಡಿದೆದ್ದ ನಟ ದರ್ಶನ್​, ಫಿಲಂ ಚೇಂಬರ್​ಗೆ​ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts