More

    ಏಷ್ಯನ್​ ಗೇಮ್ಸ್​ನಲ್ಲಿ ಐದೇ ದಿನಗಳಲ್ಲಿ 160 ಪದಕಗಳ ಗಡಿ ದಾಟಿದ ಚೀನಾ!

    ಹಾಂಗ್​ಝೌ: ಆತಿಥೇಯ ಚೀನಾ ಏಷ್ಯಾಡ್​ನಲ್ಲಿ ಮೊದಲ 5 ದಿನಗಳಲ್ಲೇ 160 ಪದಕಗಳ ಗಡಿ ದಾಟುವ ಮೂಲಕ ನಿರೀಕ್ಷೆಗೂ ಮೀರಿ ಪ್ರಾಬಲ್ಯ ಸಾಧಿಸಿದೆ. ಚೀನಾ ಭಾರಿ ಮೇಲುಗೈ ಹೊಂದಿರುವ ಮಾರ್ಷಿಯಲ್​ ಆರ್ಟ್ಸ್​, ಈಜು, ಜಿಮ್ನಾಸ್ಟಿಕ್ಸ್​, ಶೂಟಿಂಗ್​ ಮತ್ತು ಹೊಸದಾಗಿ ಸೇರ್ಪಡೆಯಾಗಿರುವ ಇ-ಸ್ಪೋರ್ಟ್ಸ್​ ಸ್ಪರ್ಧೆಗಳು ಆರಂಭಿಕ ದಿನಗಳಿಂದ ನಡೆಯುತ್ತಿರುವುದು ಚೀನಾ ಪದಕಪಟ್ಟಿಯಲ್ಲಿ ಏಕಪಕ್ಷೀಯವಾಗಿ ಮುನ್ನುಗ್ಗಲು ನೆರವಾಗಿದೆ.

    ಚೀನಾ ಇದುವರೆಗೆ 90 ಚಿನ್ನ, 51 ಬೆಳ್ಳಿ, 26 ಕಂಚಿನ ಸಹಿತ ಒಟ್ಟು 167 ಪದಕ ಗೆದ್ದಿದ್ದರೆ, 2ನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾ ಅದಕ್ಕಿಂತ ಅರ್ಧದಷ್ಟು ಪದಕವನ್ನಷ್ಟೇ ಜಯಿಸಿದೆ. ಚೀನಾ 2018ರಲ್ಲಿ 132 ಚಿನ್ನದ ಸಹಿತ 289 ಪದಕ ಗೆದ್ದುಕೊಂಡಿತ್ತು. 2010ರ ಗುವಾಂಗ್​ಝೌ ಏಷ್ಯಾಡ್​ನಲ್ಲಿ 199 ಚಿನ್ನ ಸಹಿತ 415 ಪದಕ ಗೆದ್ದಿದ್ದು ಚೀನಾದ ದಾಖಲೆಯಾಗಿದೆ.

    ಇತ್ತ ಭಾರತ ತಂಡ, ಏಷ್ಯನ್​ ಗೇಮ್ಸ್​ನಲ್ಲಿ ಐದು ದಿನಗಳಲ್ಲಿ 25 ಪದಕಗಳ ಸಂಭ್ರಮ ಕಂಡಿದೆ. ಗುರುವಾರದ ಪದಕ ಸ್ಪರ್ಧೆಗಳಲ್ಲಿ ಭಾರತದ ಪುರುಷರ 10 ಮೀ. ಏರ್​ ಪಿಸ್ತೂಲ್​ ತಂಡ ಸ್ವರ್ಣ ಪದಕಕ್ಕೆ ಗುರಿ ಇಟ್ಟರೆ, ವುಶುನಲ್ಲಿ ರೋಶಿಬಿನಾ ದೇವಿ ರಜತ ಪದಕ ಗೆದ್ದುಕೊಂಡರು. ಈಕ್ವೆಸ್ಟ್ರಿಯನ್​ನಲ್ಲಿ ಅನುಶ್​ ಅಗರ್ವಾಲ್​ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರಿಂದ ಭಾರತ ಇದುವರೆಗೆ 6 ಚಿನ್ನ, 8 ಬೆಳ್ಳಿ ಮತ್ತು 11 ಕಂಚಿನ ಪದಕ ಗೆಲುವಿನ ಸಾಧನೆ ಮಾಡಿದೆ.

    VIDEO: ಇಶ್​ ಸೋಧಿ ರನೌಟ್​ ಮಾಡಿ ವಾಪಸ್​ ಕರೆದ ಬಾಂಗ್ಲಾ; ಹೃದಯ ಗೆದ್ದ ಕ್ರೀಡಾಸ್ಫೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts