More

    ಕರ್ಕಶ ಹಾರ್ನ್ ಬಾರಿಸುತಿದ್ದ ಚಾಲಕನನ್ನು ಬೆನ್ನತ್ತಿದ ಕೆ.ಆರ್.ಪುರಂ ಸಂಚಾರ ಪೊಲೀಸರಿಗೆ ಕಾದಿತ್ತು ಸರ್ಪ್ರೈಸ್!

    ಬೆಂಗಳೂರು: ರಾತ್ರಿ ಸುಮಾರು 8:45 ರ ಸಮಯ.ಕೆ.ಆರ್.ಪುರ ವ್ಯಾಪ್ತಿಯ ತೂಗುಸೇತುವೆ ಬಳಿ ಕೋಲಾರ ಕಡೆಯ ಬಸ್ ನಿಲ್ದಾಣ ಬಳಿ ಕ್ಯಾಂಟರ್ ತರಹದ ಸರಕು ವಾಹನವೊಂದು ನಿರಂತರವಾಗಿ ಕರ್ಕಶ ಹಾರ್ನ್ ಬಾರಿಸುತಿತ್ತು.

    ಇದನ್ನು ಗಮನಿಸಿದ ಇನ್ಸ್ಪೆಕ್ಟರ್ ಮಹಮದ್​ರವರು ತಮ್ಮ ಜೀಪ್​​ನ ಧ್ವನಿ ವರ್ಧಕದ ಮೂಲಕ ಆ ಹಾರ್ನ್ ಬಾರಿಸದಂತೆ ಆ ಚಾಲಕನಿಗೆ ಹಲವು ಬಾರಿ ತಿಳಿಸಿದರೂ ಆತ ಅದನ್ನು ಗಮನಿಸಲಿಲ್ಲ. ತುಂತುರು ಮಳೆ ಇದ್ದ ಕಾರಣ ಆತ ತನ್ನ ವಾಹನದ ಕಿಟಕಿ ಗಾಜುಗಳನ್ನು ಏರಿಸಿಕೊಂಡಿದ್ದ.

    ಇದನ್ನೂ ಓದಿ: ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಮೊದಲು ಬೆಂಕಿ ಇಟ್ಟವ ಪೊಲೀಸರಿಗೆ ಸಿಕ್ಕಿಬಿದ್ದದ್ದೇ ರೋಚಕ!

    ತಮ್ಮ ಮಾತು ಕೇಳದ ಚಾಲಕನನ್ನು ಬೆನ್ನಟ್ಡಿ ಹೋಗಲು ಪೊಲೀಸರು ನಿರ್ಧರಿಸಿದರು ಇನ್ಸ್ಪೆಕ್ಟರ್. ಆದರೆ ಮಾರ್ಗ ಮಧ್ಯೆ ಜಂಕ್ಷನ್​ನಲ್ಲಿ ರೆಡ್ ಸಿಗ್ನಲ್ ಬಂದ ಕಾರಣ ಜೀಪ್ ಹಿಂದುಳಿಯಿತು. ಆತ ಮುಂದೆ ಹೋದ. ತಕ್ಷಣವೇ ಕೆ.ಆರ್.ಪುರಂ ಸಂಚಾರ ಠಾಣೆಗೆ ಮಾಹಿತಿ ನೀಡಿ ‘ಮಹಾಲಕ್ಷ್ಮಿ’ ಎಂದು ಹೆಸರಿದ್ದ ಆ ವಾಹನವನ್ನು ತಡೆಗಟ್ಟಲು ತಿಳಿಸಿದರು.

    ಠಾಣೆಯ ಬಳಿ ಈ ವಾಹನಕ್ಕಾಗಿ ಅದೆಷ್ಟೇ ಕಾದರೂ ಬರಲೇ ಇಲ್ಲ. ಆದರೆ ಠಾಣೆಯಿಂದ ಸ್ವಲ್ಪ ದೂರದ ಬಾರ್​ವೊಂದರ ಬಳಿ ಈ ವಾಹನ ನಿಂತಿರುವುದನ್ನು ನೋಡಿದ ಸಿಬ್ಬಂದಿಗಳು ಅಲ್ಲಿ ಹೋಗಿ ವಿಚಾರಿಸಿದಾಗ ಚಾಲಕ ‘ಎಣ್ಣೆ’ ಖರೀದಿಸಿ ಒಂದು ಪೆಗ್ ಏರಿಸುತಿದ್ದ. ಬದಲಿ ಚಾಲಕನ ಮೂಲಕ ಸದರಿ ವಾಹನವನ್ನು ಠಾಣೆಗೆ ತಂದು ರಾತ್ರಿಯಿಡೀ ಠಾಣೆಯಲ್ಲಿಟ್ಟು ಬೆಳಿಗ್ಗೆ ನಶೆಯಿಳಿದ ಬಳಿಕ ಕರ್ಕಶ ಹಾರ್ನ್ ಕಿತ್ತೆಸೆದು ದಂಡ ವಿಧಿಸಿ ಕಳುಹಿಸಿಕೊಡಲಾಗಿದೆ.

    ಅನೇಕ ವಾಹನಗಳಿಗೆ ದಂಡ
    ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ಕಿವಿಗಡಚಿಕ್ಕುವ ಕರ್ಕಶ ಹಾರ್ನ್ ಹಾಗೂ ಹೈ ಬೀಮ್​ ಹೆಡ್​ ಲೈಟ್​ ಬಳಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು 10 ಕ್ಕೂ ಅಧಿಕ ವಾಹನಗಳಿಂದ ಅಂತಹ ಕರ್ಕಶ ಹಾರ್ನ್ ಸಲಕರಣೆಗಳನ್ನು ಕಿತ್ತೆಸೆಯಲಾಯಿತು ಮತ್ತು ಇವುಗಳನ್ನು ಮತ್ತೊಮ್ಮೆ ಅಳವಡಿಸಿದರೆ ಅಂತಹ ವಾಹನಗಳ ಮೂಲ ಆರ್​ಸಿ ಪುಸ್ತಕವನ್ನು ವಶಕ್ಕೆ ಪಡೆದು, ಅವುಗಳನ್ನು ಅಮಾನತು ಪಡಿಸಲು ಆರ್​ಟಿಒಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಲಾಯಿತು.

    ಸಂಚಾರ ನಿಯಮ ಉಲ್ಲಂಘಿಸಿ ಹೂಡಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆದುರಾಗಿ ಬಂದ ಕೇಂದ್ರ ಸರ್ಕಾರದ Food corporation of india ಗೆ ಸೇರಿದ ವಾಹನಕ್ಕೂ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾಧಿಕಾರಿ ಎಂ.ಎ.ಮಹಮದ್ ರವರು 1100/ರೂ.ಗಳ ದಂಡ ವಿಧಿಸಿದರು.

    ಅಪ್ಪ ಗಿಫ್ಟ್​ ನೀಡಿದ್ದ ವಿಸ್ಕಿ ಬಾಟಲಿ ಮಾರಿ ಮನೆ ಕಟ್ಟಿಸಿದ: ಅಚ್ಚರಿಯಾಯ್ತಾ? ಈ ಸ್ಟೋರಿ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts