More

    ಹಿಂದೂಸ್ತಾನ್ ಯೂನಿಲಿವರ್ ಮೀರಿಸಿದ ಐಟಿಸಿ: ಷೇರು ಖರೀದಿಗೆ ದಲ್ಲಾಳಿಗಳ ಶಿಫಾರಸು ಮಾಡಿದ್ದೇಕೆ?

    ಮುಂಬೈ: ಎಫ್‌ಎಂಸಿಜಿ ದೈತ್ಯ ಕಂಪನಿ ಐಟಿಸಿ ತನ್ನ ಪ್ರತಿಸ್ಪರ್ಧಿ ಹಿಂದೂಸ್ತಾನ್ ಯೂನಿಲಿವರ್ ಅನ್ನು ಮೀರಿಸಿ ತನ್ನ ವಿಭಾಗದಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದೆ. ಡಿಸೆಂಬರ್​ ಮೂರನೇ ತ್ರೈಮಾಸಿಕ ಗಳಿಕೆಗಳಲ್ಲಿನ ಚೇತರಿಕೆಯ ಕಾರ್ಯಕ್ಷಮತೆ ಹಿನ್ನೆಲೆಯಲ್ಲಿ, ದಳ್ಳಾಳಿಗಳು ಈ ಷೇರು ಖರೀದಿಗೆ ಶಿಫಾರಸು ಮಾಡಿದ್ದಾರೆ.

    ITC ಷೇರುಗಳ ಅತ್ಯಧಿಕ ಗುರಿ ಬೆಲೆಯನ್ನು 556 ರೂ.ಗಳಿಗೆ ನಿಗದಿಪಡಿಸಲಾಗಿದೆ, ಇದು ಮುಂದೆ ಸುಮಾರು 36% ಭಾರಿ ಲಾಭವನ್ನು ಸೂಚಿಸುತ್ತದೆ. ಅಂದಾಜು 20 ವರ್ಷಗಳ ಹಿಂದೆ ತನ್ನ ಮೊದಲ ಸ್ಟಾಕ್ ವಿಭಜನೆಯಾದಾಗಿನಿಂದ ITC ತನ್ನ ಹೂಡಿಕೆದಾರರನ್ನು ಸಾಕಷ್ಟು ಶ್ರೀಮಂತರನ್ನಾಗಿ ಮಾಡಿದೆ. ಈ ತಿಂಗಳ ಅಂತ್ಯದ ವೇಳೆಗೆ 625% ಮಧ್ಯಂತರ ಡಿವಿಡೆಂಡ್ ಅನ್ನು ಬಹುಮಾನವಾಗಿ ನೀಡಲು ಐಟಿಸಿ ಘೋಷಿಸಿದೆ.

    ಈ ಹಿನ್ನೆಲೆಯಲ್ಲಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ITC ಷೇರಿನ ಬೆಲೆ 409 ರೂ. ತಲುಪಿತ್ತು. 31ನೇ ಮಾರ್ಚ್ 2024 ರಂದು ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ 6.25 ರೂಪಾಯಿ ಅಥವಾ 625% ರಷ್ಟು ಮಧ್ಯಂತರ ಲಾಭಾಂಶವನ್ನು ಐಟಿಸಿ ಘೋಷಿಸಿದೆ, ಇಂತಹ ಲಾಭಾಂಶವನ್ನು ಸೋಮವಾರ, 26ನೇ ಫೆಬ್ರವರಿ 2024 ಮತ್ತು ಬುಧವಾರ, 28ನೇ ಫೆಬ್ರವರಿ 2024 ರ ನಡುವೆ ಆ ಸದಸ್ಯರಿಗೆ ಪಾವತಿಸಲಾಗುತ್ತದೆ.

    ಡಿಸೆಂಬರ್​ ಮೂರನೇ ತ್ರೈಮಾಸಿಕದಲ್ಲಿ (Q3FY24) ಕಂಪನಿಯು ತ್ರೈಮಾಸಿಕದಲ್ಲಿ ಚೇತರಿಸಿಕೊಳ್ಳುವ ಕಾರ್ಯಕ್ಷಮತೆಯನ್ನು ತೋರಿದೆ. ಒಟ್ಟು ಆದಾಯವು ರೂ.17,483 ಕೋಟಿಗಳಷ್ಟಿದ್ದು, ಇದು 2.1% ವರ್ಷ ಬೆಳವಣಿಗೆಯನ್ನು ತೋರಿಸುತ್ತದೆ. ಲಾಭವು ರೂ. 6,731 ಕೋಟಿಯಾಗಿದೆ.

    ಎಫ್‌ಎಂಸಿಜಿ (ಫಾಸ್ಟ್​ ಮೂವಿಂಗ್​ ಕನ್ಸೋಮರ್​ ಗೂಡ್ಸಸ ದೈತ್ಯ ದಶಕಗಳಲ್ಲಿ ಒಮ್ಮೆ ಮಾತ್ರ ಷೇರು ವಿಭಜನೆಯನ್ನು ಘೋಷಿಸಿದೆ. ಇದು ಸೆಪ್ಟೆಂಬರ್ 21, 2005 ರಂದು, ITC ತನ್ನ 1 ಈಕ್ವಿಟಿ ಷೇರನ್ನು ಹತ್ತು ಈಕ್ವಿಟಿ ಷೇರುಗಳಾಗಿ ವಿಭಜಿಸಲು ಕ್ರಮ ಕೈಗೊಂಡಿತ್ತು. ಮುಖಬೆಲೆಯನ್ನು 10 ರಿಂದ 1 ರೂಪಾಯಿಗೆ ಇಳಿಸಿತ್ತು, ಆದ್ದರಿಂದ 1:10 ರ ಸ್ಟಾಕ್ ವಿಭಜನೆಯ ಅನುಪಾತ. ಅದರ ಮೊದಲ ಸ್ಟಾಕ್ ವಿಭಜನೆಯಾದಾಗಿನಿಂದ, ITC ಷೇರುಗಳು 864% ರಷ್ಟು ಏರಿಕೆಯಾಗಿವೆ. ಅಂದಿನಿಂದ, ITC ಒಂದು ಅದ್ಭುತ ಪ್ರಯಾಣವನ್ನು ಮಾಡಿದೆ, ಹೂಡಿಕೆದಾರರನ್ನು ದಾರಿಯುದ್ದಕ್ಕೂ ಶ್ರೀಮಂತರನ್ನಾಗಿ ಮಾಡಿದೆ.

    ಸರ್ಕಾರಿ ಬ್ಯಾಂಕ್‌ಗಳ ಬದಲು ಈ 3 ಲಾರ್ಜ್​ ಕ್ಯಾಪ್​ಗಳಲ್ಲಿ ತೊಡಗಿಸಿ: ಮುಂದೆ ಲಾಭ ಖಚಿತ ಎನ್ನುತ್ತಾರೆ ಮಾರುಕಟ್ಟೆ ತಜ್ಞರು

    5 ರೂಪಾಯಿ ಷೇರು ಈಗ 125 ರೂಪಾಯಿ, ಲಾಭ 2300%: ಡಿಫೆನ್ಸ್​ ಕಂಪನಿ ಸ್ಟಾಕ್​ನಲ್ಲಿ ವಿದೇಶಿಗರ ಹೂಡಿಕೆ ಹೆಚ್ಚಳ

    ಸೋಲಾರ್​ ಕಂಪನಿಯ ಷೇರು ಬೆಲೆ 4 ದಿನಗಳಲ್ಲಿ 246% ಹೆಚ್ಚಳ: ಐಪಿಒ ಹೂಡಿಕೆದಾರರಿಗೆ ಬಂಪರ್ ಲಾಭದ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts