More

    ಕರ್ನಾಟಕದ ಕಾಶ್ಮೀರದಲ್ಲೇ ಹೈಯಸ್ಟ್‌ ಟೆಂಪ್ರೇಚರ್‌!!

    ಕಾರವಾರ: ಕಾಶ್ಮೀರ ಎಂದರೆ ನಿಮಗೆ ನೆನಪಾಗುವುದು. ಚಳಿಯ ವಾತಾವರಣ ಕರ್ನಾಟಕದ ಕಾಶ್ಮೀರ ಎಂದು ಕಾರವಾರವನ್ನು ಕರೆಯಲಾಗುತ್ತದೆ. ಆದರೆ, ಇಲ್ಲಿ ಚಳಿಯ ವಾತಾವರಣ ಮಾತ್ರ ಇಲ್ಲ.

    ಇಲ್ಲಿನ ಬೆಟ್ಟ ಗುಡ್ಡಗಳನ್ನು ನೋಡಿ ಆ ರೀತಿ ಕರೆದಿರಬೇಕು. ಆದರೆ, ಇಲ್ಲಿನ ವಾತಾವರಣ ಎಂದಿಗೂ ಕಾಶ್ಮೀರಕ್ಕೆ ಹೊಂದಿಕೆಯಾಗುವಂತಿಲ್ಲ. ಇನ್ನೂ ಆತಂಕಕಾರಿ ಸಂಗತಿ ಎಂದರೆ, ಈಗ ಕಾರವಾರ ಕರ್ನಾಟಕದಲ್ಲಿ ಅತಿ ಹೆಚ್ಚು ತಾಪಮಾನದಿಂದ ಸುದ್ದಿಯಾಗಿದೆ.

    `ಎರಡೆರಡು ಫ್ಯಾನ್ ಹಾಕಿದರೂ ಸಾಲ್ತಿಲ್ಲ. ಯಾವ್ ಥರ ಸೆಕೆ ರೀ’…ಕಾರವಾರದ ಜನ ಮಂಗಳವಾರ ಹೀಗೆ ಅಲವತ್ತುಕೊಂಡಿದ್ದು ಸತ್ಯ. ಮಂಗಳವಅರ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಕಾರವಾರದಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.  
    ರಾಜ್ಯದ ವಿವಿಧೆಡೆ ಚಳಿಗಾಲದ ವಾತಾವರಣ ಶುರುವಾಗಿದೆ. ಉರಿ ಕೆಂಡದಂತೆ ಸುಡುತ್ತಿದ್ದ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಲ್ಲಿ 30 ಡಿಗ್ರಿ ಸೆಲ್ಶಿಯಸ್‌ಗೂ ಕಡಿಮೆ ಉಷ್ಣಾಂಶ ದಾಖಲಾಗುತ್ತಿದೆ. ಆದರೆ, ಕಾರವಾರದಲ್ಲಿ ಮಾತ್ರ ಅತಿ ಹೆಚ್ಚು ಸೆಕೆ ಕಂಡುಬರುತ್ತಿದ್ದು, ಈಗಲೇ ಬಿರು ಬೇಸಿಗೆಯ ಅನುಭವ ಉಂಟಾಗುತ್ತಿದೆ.
    ಅ.24 ರಂದು 37.5 ಡಿಗ್ರಿ ಸೆಲ್ಶಿಯಸ್ ಗರಿಷ್ಠ  ಉಷ್ಣಾಂಶ ಕಾರವಾರದಲ್ಲಿ ದಾಖಲಾಗಿದೆ. ಬುಧವಾರ 36 ಡಿಗ್ರಿ ದಾಖಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕಾರವಾರದ ಸರಾಸರಿ ಗರಿಷ್ಠ ಉಷ್ಣಾಂಶ 32.4 ಡಿಗ್ರಿ ಸೆಲ್ಶಿಯಸ್ ಇದೆ. ಮಂಗಳವಾರ ಸಾಮಾನ್ಯಕ್ಕಿಂತ 5.1 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಮಾತ್ರವಲ್ಲ ಶೇ. 90 ರಷ್ಟು ತೇವಾಂಶ ವಾತಾವರಣದಲ್ಲಿ ಇತ್ತು ಇದರಿಂದ ಇನ್ನಷ್ಟು ಸೆಕೆಯ ಅನುಭವ ಹೆಚ್ಚಾಗಿದೆ.
    2018 ರ ಅಕ್ಟೋಬರ್ 28 ರಂದು ಕಾರವಾರದಲ್ಲಿ 38.2 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿತ್ತು. ಅದನ್ನು ಬಿಟ್ಟರೆ ಕಳೆದ 10 ವರ್ಷಗಳಲ್ಲಿ ಅಕ್ಟೋಬರ್ ತಿಂಗಳ ಉಷ್ಣಾಂಶ 35 ಡಿಗ್ರಿ ಸೆಲ್ಶಿಯಸ್ ದಾಟಿರಲಿಲ್ಲ.  ಕಳೆದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲೂ ಈ ದಶಕದ ಅತ್ಯಽಕ ಉಷ್ಣಾಂಶ ದಾಖಲಾಗಿದ್ದು, ಮುಂದೆ ಬೇಸಿಗೆ ಗತಿಯೇನೋ ಎಂಬ ಆತಂಕ ಜನರಲ್ಲಿ ಮೂಡಲು ಕಾರಣವಾಗಿದೆ.

    ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts