More

    ನಾಳೆ ನಾಡಿದ್ದು ಬಳ್ಳಾರಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧ

    ಬೆಂಗಳೂರು: ಯಲಹಂಕ ವಾಯುಸೇನೆ ನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನ ವೀಕ್ಷಣೆಗೆ ಫೆ.16, 17ರಂದು ಲಕ್ಷಾಂತರ ಪ್ರೇಕ್ಷಕರು ಬರಲಿದ್ದಾರೆ. ಹೀಗಾಗಿ ಸುಗಮ ಸಂಚಾರ ಸಲುವಾಗಿ ಬಳ್ಳಾರಿ ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

    ಫೆ.16 ಮತ್ತು 17ರ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಸುಗಮ ಸಂಚಾರದ ಸಲುವಾಗಿ ಸರಕು ಸಾಗಾಣಿಕೆ ಮತ್ತು ಎಲ್ಲ ಮಾದರಿ ಭಾರಿ ವಾಹನಗಳ (ಬಿಎಂಟಿಸಿ ಹೊರತುಪಡಿಸಿ) ಸಂಚಾರವನ್ನು ನಿರ್ಬಂಧಿಸಿ ನಗರ ಸಂಚಾರ ಪೊಲೀಸರು ಆದೇಶಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ನಗರಕ್ಕೆ ಆಗಮಿಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆ ಬಳಸುವಂತೆ ಸೂಚನೆ ನೀಡಲಾಗಿದೆ.

    ಬೆಂಗಳೂರು-ಬಳ್ಳಾರಿ ರಸ್ತೆ ಸೇರುವ ಆಂಬಿಯನ್ಸ್ ಡಾಬಾ ಕ್ರಾಸ್‌ವರೆಗೆ ಎರಡು ಬದಿ, ಮೇಖ್ರಿ ಸರ್ಕಲ್‌ನಿಂದ ದೇವನಹಳ್ಳಿ ರಸ್ತೆ, ರಿಂಗ್ ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್, ಬಾಗಲೂರು ಮುಖ್ಯ ರಸ್ತೆಯ ರೇವಾ ಕಾಲೇಜು ಜಂಕ್ಷನ್ ಮತ್ತು ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಎಂಟಿಸಿ ಬಸ್ ಸೇವೆ: ಏರೋ ಇಂಡಿಯಾ ಪ್ರದರ್ಶನ ವೀಕ್ಷಣೆಗೆ ಬರುವ ಸಾರ್ವಜನಿಕರು ಜಿಕೆವಿಕೆ ಆವರಣದಲ್ಲಿ ಮತ್ತು ಜಕ್ಕೂರು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಂದ ಬಿಎಂಟಿಸಿ ವತಿಯಿಂದ ಏರೋ ಶೋ ವರೆಗೂ ಸೇವೆ ಒದಗಿಸಲಾಗಿದೆ. ಸಾರ್ವಜನಿಕರು ಬಿಎಂಟಿಸಿ ಬಸ್ ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

    ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts