More

    ಗದಗದಲ್ಲಿ ಸಿಡಿಲು ಬಡಿದು ಇಬ್ಬರು ಮೃತ್ಯು; ರೋಣದಲ್ಲಿ ಬಿತ್ತು ಆಲಿಕಲ್ಲು ಮಳೆ

    ಗದಗ: ಎಡಬಿಡದೆ ಆಲಿಕಲ್ಲು ಸಹಿತ ಸುರಿದ ಮಳೆಯಿಂದ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ದಾರುಣವಾಗಿ ಸಾವನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.

    ಜಿಲ್ಲೆಯ ಲಿಂಗದಾಳ ಗ್ರಾಮದ ಶರಣಪ್ಪ ಪುರದ ಹಾಗೂ ದೇವಪ್ಪ ಬಾಡಿಗೆ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಮಳೆ ಬಂದ ಸಮಯದಲ್ಲಿ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

    ಗದಗ ಗ್ರಾಮೀಣ ಠಾಣೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: Covid 19; ರಾಜ್ಯಗಳಿಗೆ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ

    ಹಿಮದ ಮಳೆ

    ಜಿಲ್ಲೆಯ ರೋಣ ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಭಾರಿ ಪ್ರಮಾಣದ ಆಲಿಕಲ್ಲು ಮಳೆ ಸುರಿದಿದ್ದು ಗ್ರಾಮದಲ್ಲಿ ಎಲ್ಲಿ ನೋಡಿದರೂ ಆಲಿಕಲ್ಲು ರಾಶಿ ಬಿದ್ದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮಸ್ಥರು ಹಿಂದೆಂದೂ ಈ ರೀತಿಯ ಆಲಿಕಲ್ಲು ಮಳೆ ಬಿದ್ದಿಲ್ಲ. ಇದನ್ನು ನೋಡಿದರೆ ಹಿಮದ ಮಳೆ ಇರಬಹುದು ಎಂದು ವ್ಯಾಖ್ಯಾನಿಸಿದ್ದಾರೆ.

    ಮಳೆ ಗಾಳಿಯ ರಭಸಕ್ಕೆ ದನದ ಕೊಟ್ಟಿಗೆಯ ಶೀಟುಗಳು ಹಾರಿ ಹೋಗಿದ್ದು 100 ಎಕರೆಗೂ ಅಧಿಕ ಈರುಳ್ಳಿ ಬೆಳೆಗೆ ಹಾನಿಯಾಗಿದೆ.

    ಗದಗದಲ್ಲಿ ಸಿಡಿಲು ಬಡಿದು ಇಬ್ಬರು ಮೃತ್ಯು; ರೋಣದಲ್ಲಿ ಬಿತ್ತು ಆಲಿಕಲ್ಲು ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts