More

    ನಾಳೆಯೂ ಭಾರಿ ಮಳೆಯ ರೆಡ್‌ ಅಲರ್ಟ್‌ ಶಾಲೆ, ಪಿಯು ಕಾಲೇಜ್‌ಗೆ ರಜೆ ಮುಂದುವರಿಕೆ

    ಕಾರವಾರ: ಅಬ್ಬರದ ಮಳೆಗೆ ಉತ್ತರ ಕನ್ನಡ ಕರಾವಳಿ ತತ್ತರಗೊಂಡಿದೆ. ಸತತ ಮೂರನೇ ದಿನ ಸಮುದ್ರ ದಂಡೆಯ ಐದು ತಾಲೂಕುಗಳಲ್ಲಿ ಭಾರಿ ಮಳೆಯಾಗಿದ್ದು, ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಕಾರವಾರದಲ್ಲಿ ಅದ್ವಾನಗಳು ಮುಂದುವರಿದಿವೆ.

    ಜು.7 ರಂದೂ ಇದೇ ಪ್ರಮಾಣದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.ಗುರುವಾರ ಬೆಳಗ್ಗೆ ಮಳೆ ಜೋರಾಗಿದ್ದರಿಂದ ಶಾಲೆ, ಪಿಯು ಕಾಲೇಜ್‌ಗಳಿಗೆ ಬೆಳಗ್ಗೆ ರಜೆ ಘೋಷಿಸಲಾಯಿತು.

    ಇದನ್ನೂ ಓದಿ:ರಘುನಾಥ ದೇವಸ್ಥಾನ ಭಾಗಶಃ ಜಲಾವೃತ

    ಮಾಹಿತಿ ತಿಳಿಯದ ಕೆಲ ಗ್ರಾಮೀಣ ಭಾಗದ ಶಾಲೆ, ಕಾಲೇಜ್ ಮಕ್ಕಳು ಶಾಲೆಗೆ ತೆರಳಿ ವಾಪಸ್ ಬರುವಂತಾಯಿತು. ಜು.7 ರಂದು ಶಾಲೆ ಹಾಗೂ ಪಿಯು ಕಾಲೇಜ್‌ಗಳಿಗೆ ರಜೆಯನ್ನು ವಿಸ್ತರಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

    ದಾಖಲೆ ಮಳೆ:

    ಕೆಲ ಭಾಗಗಳಲ್ಲಿ ದಾಖಲೆ ಮಳೆಯಾಗಿದೆ. ಕಾರವಾರ ತಾಲೂಕಿನ ದೇವಳಮಕ್ಕಿಯಲ್ಲಿ 230 ಮಿಲಿ ಮೀಟರ್ ಮಳೆಯಾಗಿದೆ. ಗುರುವಾರ ಬೆಳಗಿನ ವರದಿಯಂತೆ ಅಂಕೋಲಾ-123.5, ಭಟ್ಕಳ-198.4, ಹೊನ್ನಾವರ-131.1, ಕಾರವಾರ-178.8, ಕುಮಟಾ-117.2, ದಾಂಡೇಲಿ-39.2, ಹಳಿಯಾಳ-35.6, ಜೊಯಿಡಾ-54.2, ಮುಂಡಗೋಡ-25.4, ಸಿದ್ದಾಪುರ-31.8, ಶಿರಸಿ-34.5, ಯಲ್ಲಾಪುರ-79.4 ಮಿಮೀ ಮಳೆಯಾಗಿದೆ.

    ವಿವಿಧೆಡೆ ತುಂಬಿದ ನೀರು:

    water loged infront of house.

    ಬಿಣಗಾದ ಒಕ್ಕಲಕೇರಿಯಲ್ಲಿ ಹಲವು ಮನೆಗಳಿಗೆ ಗುರುವಾರ ಬೆಳಗ್ಗೆ ನೀರು ತುಂಬಿತ್ತು. ಹಲವು ಮನೆಗಳಿಗೆ ನೀರು ನುಗ್ಗಿತು. ಸಣ್ಣ ಬ್ರಿಜ್, ಸೀತಾ ನಗರಕ್ಕೆ ತೆರಳುವ ಅಂಡರ್ ಪಾಸ್ ಮೇಲೆ ಐದು ಅಡಿ ನೀರು ಹರಿಯಿತು.

    ಗ್ರಾಮಸ್ಥರು ಗುಡ್ಡ ಹತ್ತಿ ಸಾಹಸ ಪಟ್ಟು ಮನೆ ಸೇರಬೇಕಾಯಿತು. ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಮೇಲೆ ನೀತು ತುಂಬಿತು. ಚೆಂಡಿಯಾದ ಈಡೂರು ಗ್ರಾಮದಲ್ಲಿ ಮನೆಗಳಿಗೆ ಜಲ ದಿಗ್ಬಂಧನ ಸತತ ಮೂರನೇ ದಿನವೂ ಮುಂದುವರಿದಿದೆ.

    ಇದನ್ನೂ ಓದಿ:ಹಂದಿಗೋಣದಲ್ಲಿ ಮನೆಗಳಿಗೆ ನುಗ್ಗಿದ ನೀರು

    ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆದು, ಜನರ ಸ್ಥಳಾಂತರಕ್ಕೆ ಸಿದ್ಧತೆ ನಡೆಸಲಾಗಿದೆ. ಕಾರವಾರ ಶಹರದ ನುನ್ನಾ ಮಾಸ್ತರ ಗಲ್ಲಿ, ಪದ್ಮನಾಭನಗರ, ಕಾಯ್ಕಿಣಿ ರಸ್ತೆ, ದೇವಳಿವಾಡ, ಮುಡಗೇರಿ ಗ್ರಾಪಂ ವ್ಯಾಪ್ತಿಯ ಹೊಸಾಳಿ ಕ್ರಾಸ್ ಹೀಗೆ ಹಲವೆಡೆ ನೀರು ತುಂಬಿ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ.

    ಕುಮಟಾ ಪಟ್ಟಣದಲ್ಲಿ ವೇಗವಾಗಿ ಬೀಸಿದ ಗಾಳಿಗೆ ಹಲವು ಮರಗಳು ಮನೆ, ಹಾಗೂ ಗೂಡಂಗಡಿಗಳ ಮೇಲೆ ಮುರಿದು ಬಿದ್ದಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಇನ್ನು ಹಲವೆಡೆ ಮರ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕವೂ ಕಡಿತವಾಗಿದೆ.

    ಕುಸಿದ ತಾತ್ಕಾಲಿಕ ಸೇತುವೆ

    bridge-kollepsed

    ಜೊಯಿಡಾ ತಾಲೂಕಿನ ಕಾತೇಲಿ ಸಮೀಪ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿದಿದೆ. ಇದರಿಂದ ಅನಾರೋಗ್ಯ ಪೀಡಿದ ವ್ಯಕ್ತಿಯೊಬ್ಬನನ್ನು ಹೊತ್ತು ಹೊಳೆ ದಾಟಿಸಲಾಗಿದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ 45 ಲಕ್ಷ ರೂ. ಮಂಜೂರಾಗಿದ್ದು, ಇನ್ನಷ್ಟೇ ಹೊಸ ಸೇತುವೆ ನಿರ್ಮಾಣವಾಗಬೇಕಿದೆ.
    ಭಟ್ಕಳ ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಪಿ ಬಳಿ ನಿರ್ಮಿಸಲಾಗಿದ್ದ ಕಾಲು ಸಂಕವೊಂದು ಕುಸಿದಿದೆ. ಇದರಿಂದ ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಪತ್ತು ನಿರ್ವಹಣಾ ನಿಽಯಿಂದ ಈ ಸಂಕವನ್ನು ನಿರ್ಮಾಣ ಮಾಡಲಾಗಿತ್ತು.
    ಗಂಗಾವಳಿ ನದಿಗೆ ಯಲ್ಲಾಪುರ ಗುಳ್ಳಾಪುರ ಸಮೀಪ ನಿರ್ಮಾಣ ಮಾಡಿದ್ದ ತಾತ್ಕಾಲಿಕ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಆ ಭಾಗದ ನಾಗರಿಕರು ವಾಹನ ಸಂಚಾರ ಸಂಪರ್ಕ ಕಡಿತಗೊಂಡಿದೆ
    .

    ಸೀಬರ್ಡ್ ಬಗ್ಗೆ ಜನರ ಆಕ್ರೋಶ:

    ಕಾರವಾರ ತಾಲೂಕಿನ ಅರಗಾ, ಬಿಣಗಾ, ಚೆಂಡಿಯಾ, ಹಾಗೂ ಅಮದಳ್ಳಿ ಭಾಗಗಳಲ್ಲಿ ಸೀಬರ್ಡ್ ನೌಕಾ ಯೋಜನೆಯ ಕಾಮಗಾರಿಗಳಿಂದ ಕೃತಕ ನೆರೆ ಸೃಷ್ಟಿಯಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮುದ್ರಕ್ಕೆ ನೀರು ಹರಿಯುವ ಚರಂಡಿಗಳನ್ನು ಕಟ್ಟಲಾಗಿದೆ. ಕೆಲವೆಡೆ ಮಣ್ಣು ಹಾಕಿ ಮುಚ್ಚಲಾಗಿದೆ ಇದರಿಂದಲೇ ನೆರೆ ಸಂಭವಿಸುತ್ತಿದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಜು.7 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಽಕಾರಿ ಕಚೇರಿಯಲ್ಲಿ ಸೀಬರ್ಡ್ ನೌಕಾನೆಲೆ ಅಽಕಾರಿಗಳ ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

    ಇದನ್ನೂ ಓದಿ:ರಸ್ತೆ ಹುಡುಕಲು ಪರದಾಡಿದ ಸವಾರರು

    ಎಸ್‌ಡಿಆರ್‌ಎಫ್ ತಂಡ ಆಗಮನ

    ಜಿಲ್ಲೆಗೆ ಎರಡು ಎಸ್‌ಡಿ ಆರ್‌ಎಫ್ ತಂಡಗಳು ಆಗಮಿಸಿವೆ. ತಲಾ 10 ಜನರಿರುವ ಬೆಟಾಲಿಯನ್‌ನಲ್ಲಿ ಒಂದು ಭಟ್ಕಳದಲ್ಲಿ ಇನ್ನೊಂದು ಅಂಕೋಲಾದಲ್ಲಿ ನೆಲೆಸಿದೆ. ಇವರು ಜಿಲ್ಲೆಯಲ್ಲಿ ಜನರ ರಕ್ಷಣೆಗೆ ನೆರವಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts