More

    ಭಾರಿ ಭೂಕುಸಿತ: ಕೊಚ್ಚಿಹೋಯ್ತು ರಾಷ್ಟ್ರೀಯ ಹೆದ್ದಾರಿ; ಎರಡು ದಿನ ಸಂಚಾರ ಬಂದ್​

    ನವದೆಹಲಿ: ಧಾರಾಕಾರ ಮಳೆಯಿಂದ ಉಂಟಾದ ಭಾರಿ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯೊಂದು ಕೊಚ್ಚಿ ಹೋಗಿದ್ದು, ಇನ್ನು ಎರಡು ದಿನಗಳ ಕಾಲ ಈ ಭಾಗದಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಮಾತ್ರವಲ್ಲ, ರಸ್ತೆಯನ್ನು ತೆರವುಗೊಳಿಸಲಿಕ್ಕೇ ಎರಡು ದಿನಗಳ ಕಾಲ ತಗುಲಲಿದೆ ಎನ್ನಲಾಗಿದೆ.

    ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯ ಸಮ್ರೋಲಿ ಪ್ರದೇಶದಲ್ಲಿ ಈ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಪರಿಣಾಮವಾಗಿ ದೇವಲ್ ಬ್ರಿಡ್ಜ್ ಸಮೀಪ ರಾಷ್ಟ್ರೀಯ ಹೆದ್ದಾರಿ-44ರ ಸುಮಾರು ನೂರು ಮೀಟರ್ ಉದ್ದದ ರಸ್ತೆ ಕೊಚ್ಚಿಕೊಂಡು ಹೋಗಿದೆ.

    ಮಳೆ ಹಾಗೂ ಭೂಕುಸಿತದ ತೀವ್ರತೆ ಯಾವ ಪರಿ ಇತ್ತೆಂದರೆ ಇಲ್ಲಿದ್ದ ಜೆಸಿಬಿ ಕೂಡ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸದ್ಯಕ್ಕೆ ಸಂಚಾರ ಬಂದ್ ಮಾಡಲಾಗಿದ್ದು, ರಸ್ತೆಯನ್ನು ತೆರವುಗೊಳಿಸಲು ಎರಡು ದಿನ ಬೇಕಾಗುತ್ತದೆ ಎಂದು ಉಧಂಪುರ ಟ್ರಾಫಿಕ್​ ಡಿವೈಎಸ್​ಪಿ ಹಿಮತ್ ಸಿಂಗ್ ತಿಳಿಸಿದ್ದಾರೆ.

    ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts