More

    ಟರ್ಕಿಯಲ್ಲಿ ಭೂಕಂಪ: 24ಕ್ಕೇರಿದ ಸಾವಿನ ಸಂಖ್ಯೆ, ಮಾಲೀಕನ ರಕ್ಷಣೆಗೆ ಗೋಳಿಡುತ್ತಿರುವ ಶ್ವಾನ!

    ಅಂಕಾರಾ: ಟರ್ಕಿಶ್​ ಕರಾವಳಿ ಪ್ರದೇಶ ಮತ್ತು ಗ್ರೀಕ್​ ದ್ವೀಪ್​ ಸಾಮೋಸ್ ನಡುವಿನ ಪ್ರದೇಶದಲ್ಲಿ ಬಲವಾಗಿ ಭೂಕಂಪನ ಉಂಟಾಗಿದ್ದು, ಕಟ್ಟಡಗಳು ಧರೆಗುರುಳಿದ ಪರಿಣಾಮ ಸುಮಾರು 24 ಮಂದಿ ಮೃತಪಟ್ಟಿದ್ದು, 800 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ಸಾಕುನಾಯಿಯೊಂದರ ಮೂಕ ರೋಧನೆಯ ದೃಶ್ಯ ಮನಕಲಕುವಂತಿದೆ.

    ಶುಕ್ರವಾರ ಸಂಭವಿಸಿದ ಭೂಕಂಪಕ್ಕೆ ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳು ಕುಸಿದುಬಿದ್ದಿದೆ. ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ವಿದ್ಯುತ್​ ಸಂಪರ್ಕವೂ ಕಡಿತಗೊಂಡಿದೆ.

    ಕುಸಿದು ಬಿದ್ದಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾ ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆ ಶ್ವಾನವೊಂದು ಅವಶೇಷಗಳಡಿ ಸಿಲುಕಿರುವ ತನ್ನ ಮಾಲೀಕನ ಮುಂದೆ ಕುಳಿತು ಸಹಾಯಕ್ಕಾಗಿ ಕರೆಯುತ್ತಿರುವ ದೃಶ್ಯ ಕಣ್ಣೀರು ತರಿಸುವಂತಿದೆ.

    ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಎರ್ಸಾ ಬಿಲ್ಗಿಕ್​ ಎಂಬಾಕೆ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿರುವುದರ ಜತೆಗೆ ಟರ್ಕಿಯ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

    ಇನ್ನು ಇಜ್ಮಿರ್​​ನಲ್ಲಿ ಆಂಬುಲೆನ್ಸ್​ಗಳು, ಹೆಲಿಕಾಪ್ಟರ್​ ಆಂಬುಲೆನ್ಸ್​ಗಳು ಹಾಗೂ ವೈದ್ಯಕೀಯ ತಂಡ ಕಾರ್ಯ ನಿರ್ವಹಿಸುತ್ತಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.0 ದಾಖಲಾಗಿದೆ. (ಏಜೆನ್ಸೀಸ್​)

    ಪ್ರಬಲ ಭೂಕಂಪನಕ್ಕೆ ಕುಸಿದು ಬಿದ್ದ ಕಟ್ಟಡಗಳು; ನಾಲ್ವರು ಬಲಿ, 120ಕ್ಕೂ ಹೆಚ್ಚು ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts