More

    ಮಲ್ಟಿ ವಿಟಮಿನ್ಸ್​​, ಮಿನರಲ್​ ಸಪ್ಲಿಮೆಂಟ್ಸ್​ನಿಂದ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಳ

    ಮಲ್ಟಿ ವಿಟಮಿನ್ಸ್​​, ಮಿನರಲ್​ ಸಪ್ಲಿಮೆಂಟ್ಸ್​ನಿಂದ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಳ| ಡಾ.ಮಹೇಶ್ ಕುಮಾರ್ ಸೀನಿಯರ್ ಕನ್ಸಲ್ಟೆಂಟ್ ಫಿಸಿಷಿಯನ್, ನಾರಾಯಣ ಹೃದಯಾಲಯ
    ನಮ್ಮ ಪರಿಸರದಲ್ಲಿ ಹಾನಿಕಾರಕವಾದ ಸೂಕ್ಷ್ಮಾಣು ಜೀವಿಗಳು ಸಕ್ರಿಯವಾಗಿರುತ್ತವೆ ಮತ್ತು ಅವುಗಳು ಸೋಂಕನ್ನು ಹರಡುವಲ್ಲಿ ನಿರಂತರವಾಗಿ ವಿಕಸನಗೊಳ್ಳುತ್ತಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ವೈರಸ್​ಗಳು ಮತ್ತು ಬ್ಯಾಕ್ಟಿರೀಯಾಗಳ ವಿರುದ್ಧದ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಅಂದರೆ ಇಮ್ಯುನಿಟಿ ನಮ್ಮ ಮೊದಲ ರಕ್ಷಣೆಯಾಗಿದೆ ಎಂಬ ಅಂಶವನ್ನು ಕೋವಿಡ್-19 ಸಾಂಕ್ರಾಮಿಕವು ಒತ್ತಿ ಹೇಳಿದೆ. ಸರಿಯಾದ ಆಹಾರ, ವ್ಯಾಯಾಮ ಮತ್ತು ಸಾಕಷ್ಟು ನಿದ್ರೆಯೊಂದಿಗೆ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

    ಆದರೆ, ಆಗಾಗ್ಗೆ ನಮ್ಮ ದೈನಂದಿನ ಆಹಾರದಿಂದ ಸರಿಯಾದ ಪ್ರಮಾಣದಲ್ಲಿ ಅಥವಾ ಪೋಷಕಾಂಶಗಳ ಮಿಶ್ರಣವನ್ನು ಪಡೆಯುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಮಲ್ಟಿ ವಿಟಮಿನ್ ಅಥವಾ ಬಹು ಪೋಷಕಾಂಶ ಪೂರಕಗಳೊಂದಿಗೆ ನಾವು ಈ ಅಂತರ ಅಥವಾ ಕೊರತೆ ಪರಿಹರಿಸಿಕೊಳ್ಳಬಹುದು ಎಂಬುದು ಒಳ್ಳೆಯ ಸುದ್ದಿಯಾಗಿದೆ.

    ವಿಟಮಿನ್ ಕೊರತೆಗಳು ನಿಮ್ಮ ಆರೋಗ್ಯದಲ್ಲಿ ಹೇಗೆ ರಾಜಿ ಮಾಡಿಕೊಳ್ಳುತ್ತವೆ?

    ಭಾರತದಲ್ಲಿ ಪ್ರಚಲಿತದಲ್ಲಿರುವ ಸಾರ್ವಜನಿಕ ಆರೋಗ್ಯದ ದೊಡ್ಡ ಸವಾಲೆಂದರೆ ಸೂಕ್ಷ್ಮ ಪೋಷಕಾಂಶಗಳ ಕೊರತೆ, ದೇಶದಲ್ಲಿ ಅನೇಕ ಜನರು ಈ ವಿಟಮಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಆದರೆ, ಈ ಕೊರತೆಗೆ ಕಾರಣಗಳೇನು ಮತ್ತು ಸಂಭವಿಸಬಹುದಾದ ಅಪಾಯಗಳು ಏನೆಂಬುದು ಅವರಿಗೆ ತಿಳಿದಿಲ್ಲ. ಈ ಕೊರತೆ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ತೀವ್ರ ರೀತಿಯಲ್ಲಿ ಪರಿಣಾಮ ಬೀರುವಂತೆ ಮಾಡುತ್ತದೆ. ಪ್ರಸ್ತುತ ಸರಿಸುಮಾರು ಶೇ. 80-90ರಷ್ಟು ಜನರಲ್ಲಿ ವಿಟಮಿನ್ ಡಿ ಕೊರತೆ ಇದೆ. ಸುಮಾರು ಶೇ.19ರಷ್ಟು ಚಿಕ್ಕ ಮಕ್ಕಳು ಮತ್ತು ಶೇ.32ರಷ್ಟು ಮಂದಿ ಹದಿಹರೆಯದವರಲ್ಲಿ ಸತುವಿನ ಕೊರತೆ ಇದೆ.

    ಜಡತ್ವದ ಜೀವನಶೈಲಿ, ಸ್ಥೂಲಕಾಯ, ಹೆಚ್ಚಿನ ಆಲ್ಕೋಹಾಲ್ ಸೇವನೆ, ಕಳಪೆ ಆಹಾರ ಸೇವನೆ, ಒತ್ತಡ ಮತ್ತು ವ್ಯಾಯಾಮದ ಕೊರತೆ ಒಳಗೊಂಡಿರುವ ಅಂಶಗಳ ಸಂಯೋಜನೆಯಿಂದಾಗಿ ವಿಟಮಿನ್ ಕೊರತೆ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದವರೆಗೆ ವಿಟಮಿನ್ ಕೊರತೆಗಳು ಮುಂದುವರಿದರೆ ಆರೋಗ್ಯದ ಮೇಲೆ ನಕಾರಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರಬಹುದು. ಅಲ್ಲದೇ, ಸೋಂಕುಗಳ ಅಪರೂಪದ ಸಂಕೋಚನ, ದೌರ್ಬಲ್ಯ, ಆಯಾಸ, ಉಸಿರಾಟದ ತೊಂದರೆ, ತಲೆತಿರುಗುವಿಕೆ, ಅನಿಯಮಿತ ಹೃದಯಬಡಿತಗಳು, ತೂಕನಷ್ಟ, ಸ್ನಾಯು ದೌರ್ಬಲ್ಯ, ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆಗೆ ಕಾರಣವಾಗಬಹುದು.

    ರೋಗದಿಂದ ರಕ್ಷಣೆಯಲ್ಲಿ ಬಹುವಿಟಮಿನ್​ಗಳು ಮತ್ತು ಮಿನರಲ್​ಗಳ ಪಾತ್ರ

    ವಿಟಮಿನ್ ಮತ್ತು ಮಿನರಲ್ ಅಂದರೆ ಖನಿಜಗಳು ಕಡಿಮೆ ಪ್ರಮಾಣದಲ್ಲಿ ಅಗತ್ಯವಿದ್ದರೂ ನಮ್ಮ ದೇಹದ ಸುಗಮ ಕಾರ್ಯನಿರ್ವಹಣೆಗೆ ಅವಶ್ಯಕ. ಇವುಗಳಲ್ಲಿ ವಿಟಮಿನ್ ಬಿ, ಸಿ ಮತ್ತು ಡಿ ಹಾಗೂ ಸತು(zinc), ಕ್ರೋಮಿಯಂ, ಸೆಲೆನಿಯಮ್​ನಂತಹ ಖನಿಜಗಳು ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉದಾಹರಣೆಗೆ, ವಿಟಮಿನ್ ಸಿ ಮತ್ತು ಸತು ಒದಗಿಸುವ ಉತ್ಕರ್ಷಣ ನಿರೋಧಕ ರಕ್ಷಣೆ ಉಸಿರಾಟದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಕಡಿಮೆ ವಿಟಮಿನ್ ಡಿ ಮಟ್ಟಗಳು ಇನ್​ಫ್ಲುಯೆನ್ಸ್ ಮತ್ತು ಅಲರ್ಜಿಕ್ ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳ ಹೆಚ್ಚಿನ ಸಂಭವನೀಯತೆಗೆ ಸಂಬಂಧಿಸಿದ್ದಾಗಿವೆ. ವಾಸ್ತವವಾಗಿ ಯಾವ ಪೋಷಕಾಂಶಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಪೋಷಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಆರೋಗ್ಯಕರ ಜೀವನ ನಡೆಸಲು ಮತ್ತು ಸೋಂಕಿನ ಅಪಾಯ ಹಾಗೂ ತೀವ್ರತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ದೀರ್ಘಕಾಲದ ಕಾಯಿಲೆಗಳಿರುವ ರೋಗಿಗಳು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ನಿಯಮಿತ ಪೂರಕಗಳಿಂದ ಪ್ರಯೋಜನ ಪಡೆಯುತ್ತಾರೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ, ದೈನಂದಿನ ವ್ಯಾಯಾಮದ ನಿರ್ವಹಣೆ, ಸೂರ್ಯನ ಬೆಳಕಿಗೆ ನಿಯಮಿತವಾಗಿ ಒಡ್ಡಿಕೊಳ್ಳುವುದು ಹಾಗೂ ಸಮತೋಲಿತ ಆಹಾರದಂತಹ ಜೀವನಶೈಲಿಯ ಮಾರ್ಪಾಡುಗಳೊಂದಿಗೆ ಸತ್ತು ಪೂರಕಗಳನ್ನು ನೀಡಬಲ್ಲದು. ಯಾವುದೇ ಬಹು ವಿಟಮಿನ್​ಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ವಿಟಮಿನ್ ಮಟ್ಟ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ, ಅತಿಯಾಗಿ ಪೂರಕಗಳನ್ನು ಸೇವನೆ ಮಾಡುವುದು ಅಪಾಯಕಾರಿ.

    ಇಂದಿನ ವೇಗದ ಜಗತ್ತಿನಲ್ಲಿ ಫಾಸ್ಟ್ ಮತ್ತು ಸಂಸ್ಕರಿತ ಆಹಾರ ಸೇವನೆ ಜೀವನದ ಮಾರ್ಗವಾಗಿದೆ. ಇದರಿಂದ ಪೌಷ್ಠಿಕಾಂಶದ ಕೊರತೆ ಆಗಬಹುದು. ಆದ್ದರಿಂದ, ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಒಬ್ಬರ ವಯಸ್ಸಿಗೆ ಅನುಗುಣವಾಗಿ ಮೈಕ್ರೋನ್ಯೂಟ್ರಿಯೆಂಟ್ ಪೂರಕಗಳನ್ನು ಸೂಚಿಸಲಾಗುತ್ತದೆ. ಆಯಾಸ ಅಥವಾ ಉರಿ ಭಾವನೆಯಂತಹ ನಿಮ್ಮ ದೇಹದ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ಏಕೆಂದರೆ, ಅವುಗಳು ಕೊರತೆ ಉಂಟು ಮಾಡಬಹುದು. ಇದರ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಈ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಜನರನ್ನು ಸಬಲರನ್ನಾಗಿ ಮಾಡುವುದು ಅತ್ಯಗತ್ಯ. ಅಲ್ಲದೇ, ಸೂಕ್ತವಾದ ಪೂರಕಗಳೊಂದಿಗೆ ಅವುಗಳನ್ನು ಹೇಗೆ ನಿರ್ವಹಿಸಬಹುದೆಂಬದರ ಬಗ್ಗೆ ಅರಿವು ಮೂಡಿಸಬಹುದು. ಈ ಹಿನ್ನೆಲೆಯಲ್ಲಿ ನಿಮಗಾಗಿ ಸರಿಯಾದ ಮಲ್ಟಿವಿಟಮಿನ್ ಮತ್ತು ಖನಿಜಯುಕ್ತ ಪೂರಕವನ್ನು ಕಂಡುಹಿಡಿಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ!

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts