More

    ಬಗೆಹರಿದ ‘ಹೆಡ್​ ಬುಷ್​’ ವಿವಾದ; ಆಕ್ಷೇಪಾರ್ಹ ಪದ ತೆಗೆಯುವುದಕ್ಕೆ ಧನಂಜಯ್​ ಒಪ್ಪಿಗೆ

    ಬೆಂಗಳೂರು: ಧನಂಜಯ್ ಅಭಿನಯದ ‘ಹೆಡ್ ಬುಷ್​’ ಚಿತ್ರದಲ್ಲಿ ದೈವದ ಬಗ್ಗೆ ಹಗುರವಾದ ಪದಗಳ ಬಳಕೆ ಮಾಡುವುದರ ಜತೆಗೆ ಸಂಪ್ರದಾಯ ಬದ್ಧ ದೈವ ಆಚರಣೆಯನ್ನ ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂದು ಆರೋಪಿಸಿ ಚಿತ್ರದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡುವುದಕ್ಕೆ ತಿಗಳರ ಸಮುದಾಯ ತೀರ್ಮಾನಿಸಿತ್ತು. ಈ ಸಂಬಂಧ ವಾಣಿಜ್ಯ ಮಂಡಳಿಗೂ ದೂರು ನೀಡಿತ್ತು. ಈ ಸಮಸ್ಯೆ ಬಗೆಹರಿದಿದ್ದು ಧನಂಜಯ್​ ಕ್ಷಮೆ ಕೇಳಿದ್ದಾರೆ. ಅಷ್ಟೇ ಅಲ್ಲ, ಆಕ್ಷೇಪಾರ್ಹ ಪದವನ್ನು ಮ್ಯೂಟ್​ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: ‘ಹೆಡ್ ಬುಷ್’ ವಿರುದ್ಧ ತಿಗಳ ಸಮುದಾಯದ ಬೇಸರ; ಇಂದು ವಾಣಿಜ್ಯ ಮಂಡಳಿಗೆ ದೂರು

    ಗುರುವಾರ ಮಧ್ಯಾಹ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ತಿಗಳರ ಸಮುದಾಯದವರು ಹಾಗೂ ಚಿತ್ರತಂಡದವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಎರಡೂ ಕಡೆಯವರ ನಡುವೆ ಸಂಧಾನ ಮಾಡಲಾಗಿದ್ದು, ಈ ಮೂಲಕ ವಿವಾದ ಬಗೆಹರಿದಿದೆ. ಈ ಸಂದಭರ್ದಲ್ಲಿ ಭಾ.ಮ. ಹರೀಶ್​, ಧನಂಜಯ್​, ಅಗ್ನಿ ಶ್ರೀಧರ್​ ಮುಂತಾದವರಿದ್ದರು.

    ‘ಹೆಡ್ ಬುಷ್’ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ದಸರಾ ಹೇಗೆ ವಿಜೃಂಭಣೆಯಿಂದ ನಡೆಯುತ್ತದೋ, ಹಾಗೆಯೇ ಕರಗ ಸಹ ನಡೆಯುತ್ತದೆ. ‘ಹೆಡ್ ಬುಷ್’ ಚಿತ್ರತಂಡ ಕರಗ ಉತ್ಸವ ತೋರಿಸಿದ್ದು ಸರಿಯಾಗಿಲ್ಲ ಅನ್ನೋದು ನಮ್ಮ ವಾದವಾಗಿತ್ತು. ಈ ವಿಷಯವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಚಿತ್ರತಂಡ ಎರಡು ದಿನ ಕಾಲಾವಕಾಶ ಪಡೆದಿದೆ. ಜುಜಿಬಿ ಕರಗ ಎಂಬ ಪದವನ್ನು ಮ್ಯೂಟ್ ಮಾಡೋದಕ್ಕೆ ಒಪ್ಪಿಕೊಂಡಿದ್ದಾರೆ. ಚಿತ್ರತಂಡದ ಈ ತೀರ್ಮಾನಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ನಮ್ಮ ಸಮುದಾಹದಲ್ಲಿ 65 ಲಕ್ಷ ಜನರಿದ್ದಾರೆ. ಎಲ್ಲರೂ ಹೋಗಿ ಚಿತ್ರ ನೋಡುವಂತೆ ಮನವಿ ಮಾಡಿಕೊಳ್ಳುತ್ತೇವೆ’ ಎಂದು ತಿಗಳರ ಸಮುದಾಯದ ರಾಜ್ಯಾಧ್ಯಕ್ಷರು ಸುಬ್ಬಣ್ಣ ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ನಟ ಧನಂಜಯ್​, ‘ಶ್ರೀಧರ್​ ಸಾರ್ ಕರಗ ಎಪಿಸೋಡ್​ ಬೇಡ ಎಂದು ಹೇಳಿದ್ದರು. ಆದರೆ, ನಿರ್ದೇಶಕ ಶೂನ್ಯ ಹಾಗೂ ನಾನೇ ಆ ಸೀನ್ ಇರಲಿ ಅಂತ ಹಾಕಿಸಿದೆವು. ತಿಗಳರ ಸಮುದಾಯಕ್ಕೆ ನಮ್ಮಿಂದ ಹರ್ಟ್ ಆಗಿದೆ ಅನ್ನೋದು ಗೊತ್ತಾಗಿದೆ. ಯಾರ ಭಾವನೆಗಳನ್ನೂ ನೋಯಿಸುವುದಕ್ಕೆ ನನಗೆ ಇಷ್ಟ ಇಲ್ಲ. ಹೀಗಾಗಿ, ಜುಜಿಬಿ ಕರಗ ಪದ ಮ್ಯೂಟ್ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಇದನ್ನು ಇಲ್ಲಿಗೆ ಬಿಟ್ಟು ಕೆಲಸದ ಕಡೆ ಗಮನ ಕೊಡಬೇಕು, ಒಳ್ಳೆಯ ಸಿನಿಮಾಗಳನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

    ಇದನ್ನೂ ಓದಿ: ಆ ವೀರಭದ್ರನೇ ತಕ್ಕ ಶಾಸ್ತಿ ಮಾಡುವಂತಾಗಲೀ … ಧನಂಜಯ್ ವಿರುದ್ಧ ನೆಟ್ಟಿಗರ ಆಕ್ರೋಶ

    ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿರುವ ಅಗ್ನಿ ಶ್ರೀಧರ್​, ‘ನಿನ್ನೆ ಸಿಟ್ಟು ಮಾಡ್ಕೊಂಡು ನಾನು ಮಾತನಾಡಿದ್ದು ಕಿಡಿಗೇಡಿಗಳ ಮೇಲೆಯೇ ಹೊರತು ತಿಗಳರ ಸಮುದಾಯದ ಮೇಲಲ್ಲ. ಧರ್ಮರಾಯ ಸ್ವಾಮಿ ಅಧ್ಯಕ್ಷರಾದ ಸತೀಶ್ ಮಾತನಾಡಿದ್ದನ್ನ ಕೇಳಿ ಅವರನ್ನ ಕರೆಸಿ ಮಾತನಾಡಿದ್ದೇನೆ. ತಿಗಳರ ಕಷ್ಟ ನನಗೂ ಗೊತ್ತು. ನಾವು ಚಿತ್ರದಲ್ಲಿ ಅವರನ್ನು ಎಲ್ಲೂ ಕೆಟ್ಟದಾಗಿ ತೋರಿಸಿಲ್ಲ’ ಎಂದು ಹೇಳಿಕೊಂಡಿದ್ದಾರೆ.

    ಹೆಡ್ ಬುಷ್: ಜುಜುಬಿ ಕರಗ ಎಂಬ ಪದಬಳಕೆಗೆ ತಿಗಳ ಸಮುದಾಯದ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts