More

    ದಿನ ಬೆಳಗ್ಗೆ 4ಕ್ಕೆ ಎದ್ದು ಕಾರು ತೊಳೆದು ಸಂಪಾದಿಸಿ ಓದುವ ಈತನ ಪಿಯು ಮಾರ್ಕ್ಸ್​ಗೆ ಶಹಬ್ಬಾಸ್​ ಅಂತಿರಾ!

    ನವದೆಹಲಿ: ಜೀವನ ಸಾಗಿಸಲು ಬೆಳಗಿನ ಜಾವ 4ಕ್ಕೆ ಎದ್ದು ಕಾರು ತೊಳೆಯುವ ಕೆಲಸ ಮಾಡುವುದರ ಜತೆಗೆ ವಿದ್ಯಾಭ್ಯಾಸದಲ್ಲೂ ತೊಡಗಿಕೊಂಡಿರುವ ವಿಶೇಷ ಪ್ರತಿಭೆಯ ಸಾಧನೆ ಎಂಥವರನ್ನು ಹುರಿದುಂಬಿಸದೇ ಇರದು.

    ಹೌದು, ನಾವು ಈಗ ಹೇಳ ಹೊರಟಿರುವುದು ಪರಮೇಶ್ವರ್​ (17) ಎಂಬ ಹುಡುಗನ ಸ್ಪೂರ್ತಿಯ ಕತೆ. ಬಡತನ ಹೊದ್ದು ಮಲಗಿರುವ ಟೈಗ್ರಿ ಸ್ಲಮ್​ನಲ್ಲಿ ಇಕ್ಕಟ್ಟಾದ ಮನೆಯಲ್ಲಿ ವಾಸವಿರುವ ಪರಮೇಶ್ವರ್​, 10ನೇ ತರಗತಿಯಿಂದಲೂ ಕಾನ್ಪುರದಲ್ಲಿ ಕಾರು ತೊಳೆಯುವ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ 3000 ರೂ. ಸಂಪಾದಿಸುವ ಈತ ಆ ಹಣದಲ್ಲಿ ಜೀವನ ನಿರ್ವಹಣೆ ಸೇರಿದಂತೆ ಯೂನಿಫಾರ್ಮ್​ ಮತ್ತು ಬುಕ್ಸ್​ಗಾಗಿ ವ್ಯಯಿಸುತ್ತಾನೆ. ಇದೀಗ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪರಮೇಶ್ವರ್​ ಶೇ. 91.7 ಫಲತಾಂಶ ಗಳಿಸುವ ಮೂಲಕ ಎಲ್ಲರಿಗೆ ಮಾದರಿಯಾಗಿದ್ದಾನೆ.

    ಇದನ್ನು ಒದಿ: ಐಶಾರಾಮಿ ಕಾರು ಖರಿದೀಸಲು ಸಾಲಕ್ಕಾಗಿ ಈಕೆ ಬ್ಯಾಂಕ್​ಗೆ ಹೇಳಿದ ಸುಳ್ಳು ಕೇಳಿದ್ರೆ ಶಾಕ್​ ಆಗ್ತೀರಾ!

    ದೆಹಲಿಯ ಕಡು ಚಳಿಗಾಲದಲ್ಲೂ ಬೆಳಗಿನ ಜಾವ 4 ಗಂಟೆಗೆ ಏಳುವ ಪರಮೇಶ್ವರ್​, ಕೆಲಸ ಸ್ಥಳ ತಲುಪಲು ಸುಮಾರು ಅರ್ಧ ಗಂಟೆ ನಡೆಯುತ್ತಾನೆ. ಸುಮಾರು ಎರಡೂವರೆ ಗಂಟೆ ಕೆಲಸ ಮಾಡುವ ಈತ 10 ರಿಂದ 15 ಕಾರುಗಳನ್ನು ತೊಳೆಯುತ್ತಾನೆ. ವಾರದಲ್ಲಿ 6 ದಿನ ಇದೇ ಕೆಲಸ ಮಾಡುತ್ತಾನೆ.

    ಚಳಿಗಾಲದಲ್ಲಿ ಬೆಳಗ್ಗೆ ಎದ್ದು ಕೆಲಸ ಮಾಡುವುದೆಂದರೆ ಸುಲಭದ ಮಾತ್ತಲ್ಲ. ತಂಪು ನೀರನ್ನು ಮುಟ್ಟಿದಾಗಲೆಲ್ಲಾ ನನ್ನ ಕೈ 5 ನಿಮಿಷ ಮರಗಟ್ಟಿದಂತೆ ಆಗುತ್ತದೆ. ನನ್ನ ಕೈಬೆರಳುಗಳ ಜಡವಾಗಿ ಬಿಡುತ್ತವೆ. ಇದಲ್ಲದೆ, ಜನರ ಸಾಕಷ್ಟು ಬೈಗುಳಗಳನ್ನು ಕೇಳಿದ್ದೇನೆ. ಆದರೆ, ನೂರು ರೂಪಾಯಿಗಾಗಿ ಎಲ್ಲವನ್ನು ಸಹಿಸಿಕೊಳ್ಳಬೇಕಿದೆ ಎನ್ನುತ್ತಾರೆ ಪರಮೇಶ್ವರ್.

    ನನ್ನ ಶಿಕ್ಷಣಕ್ಕಾಗಿ ನನಗೆ ಕೆಲಸದ ಅವಶ್ಯಕತೆ ಇದೆ. ನನ್ನ 62 ವರ್ಷದ ತಂದೆ ಹೃದ್ರೋಗಿಯಾಗಿದ್ದಾರೆ. ಕುಟುಂಬ ನೋಡಿಕೊಳ್ಳಲು ನಮ್ಮ ಸಹೋದರರಿಗೂ ಸ್ಥಿರವಾದ ಕೆಲಸವಿಲ್ಲ. ನಾನು ಅವರಿಗೆ ಹೊರೆಯಾಗಲು ಇಷ್ಟವಿಲ್ಲ ಎಂದು ಪರಮೇಶ್ವರ್​ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಪೊಲೀಸ್​ ಜೀಪ್ ಕಂಡೊಡನೆ ಹೆದರಿ ಓಡುತ್ತಿದ್ದ ಯುವಕ ಪ್ರಜ್ಞೆತಪ್ಪಿ ಬಿದ್ದು ಸಾವು

    ಪರಮೇಶ್ವರ್​ ಸಂಕಷ್ಟ ಇಲ್ಲಿಗೆ ಮುಗಿಯುವುದಿಲ್ಲ. ಕಳೆದ ಮಾರ್ಚ್​ನಲ್ಲಿ ಅವರ ತಂದೆಗೆ ಸರ್ಜರಿಯಾಗುತ್ತದೆ. ತನ್ನ ತಂದೆ ಆಸ್ಪತ್ರೆಯಲ್ಲಿರುವಾಗ ಇತ್ತ ಪರಮೇಶ್ವರ್ ಹಿಂದಿ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾನೆ. ಈ ಸಮಯದಲ್ಲಿ ಆತನ ನೆರವಿಗೆ ಬರುವ ಆಶಾ ಸೊಸೈಟಿ ಎನ್​ಜಿಒ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಪರಮೇಶ್ವರ್​ಗೆ ಭರವಸೆ ನೀಡುತ್ತಾರೆ. ಅದರಂತೆ ಆತನಿಗೆ ಸ್ಯಾಂಪಲ್​ ಪೇಪರ್ಸ್​ ತರಿಸಿ ಕೊಡುತ್ತಾರೆ. ಅಲ್ಲದೆ, ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್​ ಹಾನರ್​ ಆನ್​ಲೈನ್​ ಕೋರ್ಸ್​ಗೆ ಸೇರಿಸುತ್ತಾರೆ.

    ತಾನು ಭವಿಷ್ಯದಲ್ಲಿ ಉತ್ತಮ ಶಿಕ್ಷಕನಾಗುವ ಕನಸು ಹೊತ್ತಿರುವ ವಿದ್ಯಾರ್ಥಿ ಪರಮೇಶ್ವರ್​, ನಾನು ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸಬೇಕು ಮತ್ತು ಬೇರೆಯವರಿಗೆ ಸಹಾಯ ಮಾಡಬೇಕು ಎನ್ನುತ್ತಾನೆ. ಆತನ ಮೇಲೆ ಸಾಕಷ್ಟು ಭರವಸೆ ಇಟ್ಟಿರುವುದಾಗಿಯೂ ಕುಟುಂಬ ಹೇಳಿದೆ. (ಏಜೆನ್ಸೀಸ್​)

    ಮಕ್ಕಳಿಗಾಗಿ ‘ಏಕೈಕ ಹಸು’ ಮಾರಿದ ಘಟನೆಗೆ ಟ್ವಿಸ್ಟ್‌: ಕೊಟ್ಟಿಗೆ ತುಂಬಾ ದನಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts