More

    ಹು-ಧಾ ಪಾಲಿಕೆ: ಬಿಜೆಪಿಗೆ ಹೊಸತೊಂದು ವಿಘ್ನ – ಪಕ್ಷದಲ್ಲಿ ಉಪಮೇಯರ್​ ಅಭ್ಯರ್ಥಿಯೇ ಇಲ್ಲ!

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಗಾದಿಯೇರಲು ಹೊರಟಿರುವ ಬಿಜೆಪಿಗೆ ಹೊಸತೊಂದು ವಿಘ್ನ ಎದುರಾಗಿದೆ. ಬಿಜೆಪಿ ಬಳಿ ಉಪಮೇಯರ್ ಅಭ್ಯರ್ಥಿಯೇ ಇಲ್ಲ. ಕಷ್ಟಪಟ್ಟು ಮೇಯರ್ ಸ್ಥಾನ ಪಡೆದುಕೊಳ್ಳುವ ಬಿಜೆಪಿಗೆ, ಉಪಮೇಯರ್ ಸ್ಥಾನ ಪಡೆಯಲು ಹೆಣಗಾಡುವ ಸ್ಥಿತಿ ಎದುರಾಗಿದೆ.

    ಉಪಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಗೆದ್ದಿರುವ 39 ಸದಸ್ಯರಲ್ಲಿ ಒಬ್ಬರೂ ಎಸ್ಸಿ ಮಹಿಳೆ ಇಲ್ಲ. ಹೀಗಾಗಿ, 6 ಜನ ಜನಪ್ರತಿನಿಧಿಗಳ ಮತಗಳಿಂದ ಅಧಿಕಾರ ಸ್ವೀಕರಿಸಲು ಸಿದ್ಧವಾಗಿರುವ ಬಿಜೆಪಿ ನಾಯಕರು, ಉಪಮೇಯರ್ ಅಭ್ಯರ್ಥಿಗಳಿಗಾಗಿ ಪಕ್ಷೇತರ ಅಥವಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಮೊರೆ ಹೋಗಬೇಕಾಗಿರುವ ಅನಿವಾರ್ಯತೆ ಬಂದಿದೆ.

    ಇದನ್ನೂ ಓದಿ: ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

    ಪಾಲಿಕೆ ಚುನಾವಣೆಯಲ್ಲಿ ಎಸ್‌ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲ ತೆಗೆದುಕೊಂಡು ಅವರಲ್ಲಿ ಒಬ್ಬರಿಗೇ ಉಪಮೇಯರ್ ಸ್ಥಾನ ಬಿಟ್ಟು ಕೊಡಬೇಕಾಗಲಿದೆ. ಆದರೆ, ಅಷ್ಟರಲ್ಲೇ ಇಬ್ಬರನ್ನೂ ಕಾಂಗ್ರೆಸ್ ಸೆಳೆದರೆ ಮತ್ತೊಂದು ತಲೆನೋವು ಸೃಷ್ಟಿಯಾಗುವುದೂ ಸತ್ಯ. ಇಬ್ಬರು ಪಕ್ಷೇತರ ಮಹಿಳೆಯರನ್ನು ಬಿಜೆಪಿ ತನ್ನತ್ತ ಹೇಗೆ ಸೆಳೆಯಲಿದೆ, ಉಪಮೇಯರ್​ ಸ್ಥಾನ ಯಾರ ಪಾಲಾಗಲಿದೆ ಎಂದು ಕಾದುನೋಡಬೇಕಿದೆ.

    NEET ಮುಂದೂಡಲು ರಾಹುಲ್​ ಆಗ್ರಹ: ನೀವು ‘ಸೂಡೋ ಎಕ್ಸ್​ಪರ್ಟ್​’ ಎಂದು ಟಾಂಗ್​ ಕೊಟ್ಟ ಶಿಕ್ಷಣ ಸಚಿವ ಪ್ರಧಾನ್​​!

    ಶ್ವಾಸಕೋಶದ ಎಲ್ಲಾ ಭಾಗಗಳಿಗೆ ವ್ಯಾಯಾಮ ನೀಡುವ ‘ಪರ್ಯಂಕಾಸನ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts