ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Former
Published on

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸಮಗ್ರತೆಯನ್ನು ಅಳವಡಿಸಿಕೊಂಡು ಪ್ರಗತಿಯತ್ತ ಸಾಗುತ್ತಿರುವ ರೈತರನ್ನು ಗುರುತಿಸಿ ವಿವಿ ವ್ಯಾಪ್ತಿಯ ಪ್ರತಿ ಜಿಲ್ಲೆಗೆ ಒಬ್ಬರಿಗೆ ಕೃಷಿ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.

ವಿವಿ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗಿನ ರೈತ, ರೈತ ಮಹಿಳೆಯರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.

ಕೃಷಿ ಕಸುಬು ಹಾಗೂ ಇತರ ಉಪ ಕಸುಬುಗಳನ್ನು ಗಣನೆಗೆ ತೆಗೆದುಕೊಂಡು ಸಮಗ್ರ ಕೃಷಿ ತತ್ವಗಳನ್ನಾಧರಿಸಿ ಪ್ರಗತಿ ಸಾಧಿಸಿದ ಕೃಷಿಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಹ ಆಸಕ್ತ ರೈತರು ಸಂಬಂಧಪಟ್ಟ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರ ಅಥವಾ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ಅರ್ಜಿ ಪಡೆಯಬಹುದು ಅಥವಾ ವೆಬ್​ಸೈಟ್​ನಿಂದ (https://www.uahs.edu.in/) ಡೌನ್​ಲೋಡ್​ ಮಾಡಿಕೊಂಡು ಭರ್ತಿ ಮಾಡಿ ಸೆ.24ರೊಳಗೆ ಆಯಾ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಡಬಹುದು ಎಂದು ವಿವಿ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಯಾರನ್ನು ಸಂಪರ್ಕಿಸಬೇಕು?

ಶಿವಮೊಗ್ಗ- 9480838976, 8277932600

ದಾವಣಗೆರೆ- 9480838209

ಚಿಕ್ಕಮಗಳೂರು 9480838203, 8277930890

ಉಡುಪಿ- 9480838202, 8277932500

ಚಿತ್ರದುರ್ಗ 9480838201

ದಕ್ಷಿಣ ಕನ್ನಡ 8794706468, 8277931060

ಮಡಿಕೇರಿ 9480838210, 7259005540

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net